![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 12, 2024, 12:57 PM IST
ಮುಂಬಯಿ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ದಕ್ಷಿಣದ ಖ್ಯಾತ ನಿರ್ದೇಶಕರೊಂದಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತುಗಳು ಕಳೆದ ಕೆಲ ಸಮಯದಿಂದ ಬಾಲಿವುಡ್ ನಲ್ಲಿ ಹರಿದಾಡಿತ್ತು. ಇದೀಗ ಈ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮೆಂಟ್ ಆಗಿದೆ.
ಸಲ್ಮಾನ್ ಖಾನ್ ಕೊನೆಯದಾಗಿ ʼಟೈಗರ್ -3ʼ ಸಿನಿಮಾದಲ್ಲಿ ಕಾಣಸಿಕೊಂಡಿದ್ದರು. 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಪ್ರತಿಬಾರಿ ಸಲ್ಮಾನ್ ಖಾನ್ ಈದ್ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುತ್ತಾರೆ. ಈ ಬಾರಿ ರಂಜಾನ್ ಹಬ್ಬದ ಆರಂಭದಂದೇ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಇತ್ತೀಚೆಗೆ ನಿರ್ಮಾಪಕ ಸಾಜಿದ್ ನಾಡಿಯವಾಲ ಅವರೊಂದಿಗೆ ಸಲ್ಮಾನ್ ಖಾನ್ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾವನ್ನು ಖ್ಯಾತ ಕಾಲಿವುಡ್ ನಿರ್ದೇಶಕ ಎ.ಆರ್ ಮುರುಗದಾಸ್ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿತ್ತು.
ಇದನ್ನೂ ಓದಿ: Surya Kiran: ಜಾಂಡೀಸ್‌ಗೆ ಬಲಿಯಾದ ಖ್ಯಾತ ಬಹುಭಾಷಾ ನಟ,ನಿರ್ದೇಶಕ
ಇದೀಗ ಈ ಸುದ್ದಿ ಅಧಿಕೃತವಾಗಿದೆ. “ಪ್ರತಿಭಾವಂತರಾದ ಎ.ಆರ್ ಮುರುಗದಾಸ್ ಮತ್ತು ನನ್ನ ಸ್ನೇಹಿತ, ಸಾಜಿದ್ ನಾಡಿಯವಾಲ ಅವರೊಂದಿಗೆ ಒಂದು ರೋಚಕ ಚಿತ್ರಕ್ಕಾಗಿ ಸೇರಲು ಸಂತೋಷವಾಗಿದೆ. ಈ ಸಹಯೋಗವು ವಿಶೇಷವಾಗಿದೆ ಮತ್ತು ನಿಮ್ಮ ಪ್ರೀತಿ ಮತ್ತು ಆಶೀರ್ವಾದದೊಂದಿಗೆ ನಾನು ಈ ಪ್ರಯಾಣವನ್ನು ಎದುರು ನೋಡುತ್ತಿದ್ದೇನೆ. EID 2025 ಕ್ಕೆ ಬಿಡುಗಡೆ ಆಗಲಿದೆ” ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ.
ಸಿನಿಮಾದ ಟೈಟಲ್ ಇನ್ನಷ್ಟೇ ರಿವೀಲ್ ಆಗಬೇಕಿದೆ.
ಪೋರ್ಚುಗಲ್ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳು ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ 400 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಇದು ಸಾಜಿದ್ ಅವರ ಮಹತ್ವದ ಸಿನಿಮಾಗಳಲ್ಲಿ ಒಂದಾಗಿದೆ. ಸ್ಕ್ರಿಪ್ಟ್ ಕೆಲಸವನ್ನು ಎಚ್ಚರಿಕೆಯಿಂದ ಮಾಡಲಾಗುತ್ತಿದೆ ಎಂದು ಮೂಲವೊಂದು ತಿಳಿಸಿರುವುದಾಗಿ ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಎ.ಆರ್ ಮುರುಗದಾಸ್ ಅವರಿಗೆ ಹಿಂದಿ ಸಿನಿಮಾ ಹೊಸತಲ್ಲ. ಈ ಹಿಂದೆ ಆಮಿರ್ ಖಾನ್ ಅವರೊಂದಿಗೆ ʼಗಜನಿʼ ಸಿನಿಮಾವನ್ನು ಅವರು ಮಾಡಿದ್ದರು.
Glad to join forces with the exceptionally talented, @ARMurugadoss and my friend, #SajidNadiadwala for a very exciting film !! This collaboration is special, and I look forward to this journey with your love and blessings. Releasing EID 2025.@NGEMovies @WardaNadiadwala pic.twitter.com/dv00nbEBU1
— Salman Khan (@BeingSalmanKhan) March 12, 2024
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.