Manipal ಎಂಎಂಎನ್‌ಎಲ್: ಮಹಿಳಾ ದಿನಾಚರಣೆ, ಬಹುಮಾನ ವಿತರಣೆ
Team Udayavani, Mar 12, 2024, 6:30 PM IST
ಮಣಿಪಾಲ: ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಮಣಿಪಾಲ ಸಮೂಹ ಸಂಸ್ಥೆಯ ಮಹಿಳಾ ಸಿಬಂದಿಗೆ ಆಯೋಜಿಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಮಂಗಳವಾರ ಮಣಿಪಾಲ ಕೇಂದ್ರ ಕಚೇರಿಯಲ್ಲಿ ಜರಗಿತು.
ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ ಅಧ್ಯಕ್ಷತೆ ವಹಿಸಿ ವಿಜೇತರಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.
ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ಸಿಇಒ ಮತ್ತು ಎಂಡಿ ವಿನೋದ್ ಕುಮಾರ್ ಅವರು ಮಾತನಾಡಿ, ಈ ರೀತಿ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸಿಬಂದಿಯ ಆತ್ಮ ವಿಶ್ವಾಸ ಹೆಚ್ಚಿಸುವುದು ಮತ್ತು ಪ್ರತಿಭೆ ಗುರುತಿಸಲು ಸಾಧ್ಯವಾಗುತ್ತದೆ. ಇದರಿಂದ ಕೆಲಸ ಕಾರ್ಯದಲ್ಲಿ ಗುಣಮಟ್ಟತೆ ಮತ್ತು ಬದ್ಧತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಸಂಸ್ಥೆಯ ಎಲ್ಲ ಮಹಿಳೆಯರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಮಹಿಳಾ ದಿನಾಚರಣೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ ಎಂದು ಶುಭಹಾರೈಸಿದರು.
ಮಣಿಪಾಲ ಸಮೂಹ ಸಂಸ್ಥೆ ಮಾನವ ಸಂಪನ್ಮೂಲ ವಿಭಾಗ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಪ್ರಮೋದ್ ಎನ್. ಫರ್ನಾಂಡಿಸ್ ಅವರು ಮಾತನಾಡಿ, ಪ್ರಸ್ತುತ ವರ್ಷದ ಮಹಿಳಾ ದಿನಾಚರಣೆಯ ಧ್ಯೇಹವನ್ನು ಉಲ್ಲೇಖಿಸಿ ಪ್ರತೀಯೊಂದು ಕಾರ್ಯದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿರುತ್ತದೆ. ಎಲ್ಲ ಮಹಿಳೆಯರು ಆಸಕ್ತಿಯಿಂದ ಒಗ್ಗೂಡಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ತೋರ್ಪಡಿಸಿದ್ದಾರೆ ಎಂದು ಶ್ಲಾಘಿಸಿದರು.
ಮಾನವ ಸಂಪನ್ಮೂಲ ವಿಭಾಗದ ಹಿರಿಯ ಪ್ರಬಂಧಕಿ ಉಷಾರಾಣಿ ಅವರು ಸ್ವಾಗತಿಸಿ, ನಿರೂಪಿಸಿದರು. ಮಾನವ ಸಂಪನ್ಮೂಲ ವಿಭಾಗದ ಶೋಭಾ ಎಂ. ಜೆ. ಸಹಕರಿಸಿದರು.
ಸ್ಪರ್ಧಾ ವಿಜೇತರು: ನೇಲ್ ಆರ್ಟ್, ಹೇರ್ ಸ್ಟೈಲ್, ಸೆಲ್ಫಿ ಬೋರ್ಡ್, ಫ್ಲೋರ್ ಬ್ರೇಡಿಂಗ್, ಸಾರಿ ಡ್ರಾಪಿಂಗ್, ರೀಲ್ಸ್ ಮೇಕಿಂಗ್, ರಿಂಗ್ ಆನ್ ಸ್ಟೇಕ್, ಫೇಸ್ ಮೇಕಪ್ ಸಹಿತ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಮಣಿಪಾಲ್ ಗ್ರೂಪ್ಸ್ ಸಿಬಂದಿ ನಿಖಿತಾ, ಶೈನಾ ರೆನಿಟ್ ಡಿ’ಸೋಜಾ, ಜಯಶ್ರೀ, ಲಿಖಿತಾ, ವೈಶಾಲಿ, ವೃಂದಾ ವಿ. ನಾಯಕ್, ದೀಪಿಕಾ ಎ. ಶೇಟ್, ಸೋನಿ ಗೌರವ್, ಬಿಂದಿಯಾ ರಮೇಶ್ ಪೂಜಾರಿ, ಶೆರಿನ್ ಪ್ರೀತಾ ಅಮ್ಮನ್ನಾ, ಆಶಾ ಅಶ್ವಿನ್, ವಿದ್ಯಾ ಶ್ರೀ, ಸ್ನೇಹಾ ಕೆ . ಪೈ, ಜಯಶ್ರೀ ಜಾನ್, ಸಿಂಧೂ ಹೆಗ್ಡೆ, ಶೀತಲ್ ಜಿ. ಎಸ್. ಬಹುಮಾನ ಪಡೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.