ಶಾರ್ಟ್ ಸರ್ಕ್ಯೂಟ್‌ಗೆ ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮ… ತಾಲೂಕು ಆಡಳಿತ ಸೌಧ ಬಳಿ ಘಟನೆ
Team Udayavani, Mar 12, 2024, 7:20 PM IST
ಕುಣಿಗಲ್: ತಾಲೂಕು ಆಡಳಿತ ಸೌಧ ಮುಂಭಾಗ ನಿಂತ್ತಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಟಾರ್ಟ್ ಮಾಡುವಾಗ ಶರ್ಟ್ ಸರ್ಕೀಟ್ ಆಗಿ ಬೆಂಕಿ ಹತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಮಂಗಳವಾರ ಸಂಜೆ ೫ ಗಂಟೆ ಸಮಯದಲ್ಲಿ ನಡೆದಿದೆ.
ತಾಲೂಕು ಕಚೇರಿಯಲ್ಲಿ ಕರ್ವವ್ಯ ನಿರ್ವಹಿಸುವ ಡಿ.ಗ್ರೂಪ್ ನೌಕರ ಹೆಚ್.ಜಿ.ಮಲ್ಲೇಶ ಎಂಬವರಿದಗೇ ಸೇರಿದ ಬ್ಯಾಟರಿ ಚಾಲಿತ ಎಲೆಕ್ಟ್ರಿಕಲ್ ಚಾರ್ಚರ್ ಬೈಕ್ ಸಂಪೂರ್ಣವಾಗಿ ಭಸ್ಮವಾಗಿದ್ದು ಪಕ್ಕದಲ್ಲಿ ನಿಂತ್ತಿದ್ದ ಎರಡು ಬೈಕ್ ಹಾಗೂ ತಾಲೂಕು ಕಚೇರಿಯ ಮುಂಭಾಗದ ಗೋಡೆ ಹಾಗೂ ವಿದ್ಯುತ್ ಲೈಟ್ ಬೆಂಕಿಯಿಂದ ಹಾನಿಯಾಗಿದೆ.
ಮಲ್ಲೇಶ್ ಕಳೆದ ಎರಡು ವರ್ಷಗಳ ಹಿಂದೆ ಬೆಂನ್ಲಿಂಗ್ ಹೌರ ಕಂಪನಿಯ ಎಲೆಕ್ಟ್ರಿಕಲ್ ಬೈಕ್ ಖರೀದಿ ಮಾಡಿ ಓಡಿಸುತ್ತಿದ್ದರು. ಇಂದು ತುಮಕೂರಿಗೆ ಹೋಗಿ ಬಂದು ತಾಲೂಕು ಕಚೇರಿ ಮುಂದೆ ನಿಲ್ಲಿಸಿದ್ದರು. ನಂತರ ತಾಲೂಕು ಕಚೇರಿಯಲ್ಲಿ ತಮ್ಮ ಕೆಲಸ ಮಗಿಸಿ ಮನೆಗೆ ಹೋಗಲು ಬೈಕ್‌ಸ್ಟಾರ್ಟ್ ಮಾಡಿದ್ದಾಗ ಬೈಕ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ ತಕ್ಷಣ ಭಯಗೊಂಡ ಮಲ್ಲೇಶ್ ಬೈಕ್ ನಿಂದ ದೂರ ಓಡಿಹೋಗಿದ್ದಾರೆ. ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬೈಕ್ ಸಂಪೂರ್ಣ ಅವರಿಸಿಕೊಂಡು ಧಗ ಧಗ ಹೊತ್ತಿ ಹುರಿದು ಸಂಪೂರ್ಣವಾಗಿ ಭಸ್ಮವಾಗಿದೆ.
ಬೆಂಕಿ ನಂದಿಸುವ ಉಪಕರಣ ಇಲ್ಲ :
ಬೈಕ್ ಹತ್ತಿ ಹುರಿತ್ತಿದ್ದರೂ ತಾಲೂಕು ಕಚೇರಿ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾಗಲಿಲ್ಲ ಕಾರಣ ನೂತನ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ಯಾವುದೇ ಬೆಂಕಿ ನಂದಿಸುವ ಉಪಕರಣಗಳು ಇಲ್ಲ. ಸಿಬ್ಬಂದಿಯೊಬ್ಬರು ಬಕೆಟ್‌ನಲ್ಲಿ ನೀರು ತರುವಷ್ಟರಲ್ಲಿ ಬೈಕ್ ಸಂಪೂರ್ಣ ಭಸ್ಮವಾಗಿತ್ತು. ತಾಲೂಕು ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಅಲ್ಲಿನ ಸಿಬ್ಬಂದಿ ಹಾಗೂ ದಾಖಲೆಗಳ ಗತಿಯೇನೂ ಎಂದು ಸಾರ್ವಜನಿಕರು ತಾಲೂಕು ಅಡಳಿತ ಬಗ್ಗೆ ಕಿಡಿಕಾರಿದ್ದಾರೆ.
ದಿಕ್ಕಾಪಾಲಾಗಿ ಓಡಿದ ಜನ : ಬೈಕ್ ಹತ್ತಿಕೊಂಡು ದಗದಗನೇ ಹೊತ್ತಿ ಉರಿಯುವ ವೇಳೆ ಬೆಂಕಿಯ ಕಿನ್ನಾಲೆ ನೋಡಿ ಭಯ ಭೀತಗೊಂಡ ಜನರು ದಿಕ್ಕಾಪಾಲಾಗಿ ಓಡಿದರು.
ಇದನ್ನೂ ಓದಿ: ಕೊಲೆಗೆ ಯತ್ನಿಸಿದವನ ಕೈಯಿಂದ ತಪ್ಪಿಸಿಕೊಂಡು ನಿರ್ಜನ ಪ್ರದೇಶದಲ್ಲಿ ರಾತ್ರಿ ಕಳೆದ ವ್ಯಕ್ತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.