Namma metro: ಮೆಟ್ರೋ ಹಳಿ ಬಳಿ ವ್ಯಕ್ತಿ ಓಡಾಟ, 20 ನಿಮಿಷ ರೈಲು ಸ್ಥಗಿತ
Team Udayavani, Mar 13, 2024, 9:50 AM IST
ಬೆಂಗಳೂರು: ಮೆಟ್ರೋ ಹಳಿಯ ಮೇಲಿನ ವಯಾಡಕ್ಟ್‌ನಲ್ಲಿ ವ್ಯಕ್ತಿಯೊಬ್ಬನ ಚಲನವಲನ ಕಂಡುಬಂದಿದ್ದರಿಂದ ಹಲವು ಮೆಟ್ರೋ ರೈಲುಗಳ ಸಂಚಾರವನ್ನೇ ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸಾವಿರಾರು ಜನ ಪರದಾಡಿದ ಘಟನೆ ಮಂಗಳವಾರ ನಡೆದಿದೆ.
ಪಟ್ಟಣಗೆರೆ- ಜ್ಞಾನ ಭಾರತಿ ನಿಲ್ದಾಣಗಳ ನಡುವೆ ಮಧ್ಯಾಹ್ನ 2.50ರ ಸುಮಾರಿಗೆ ಈ ಘಟನೆ ನಡೆದಿದೆ. ಇಲ್ಲಿನ ಹೈವೋಲ್ಟೆàಜ್ ಮೆಟ್ರೋ ಹಳಿಗೆ ಹೊಂದಿಕೊಂಡ ವಯಾಡಕr… ಮೇಲೆ ವ್ಯಕ್ತಿಯೊಬ್ಬನ ಚಲನವಲನ ಕಂಡುಬಂದಿದೆ. ಇದರಿಂದ ಸುಮಾರು 20 ನಿಮಿಷಗಳ ಕಾಲ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಯಿತು. ಪರಿಣಾಮ ಮೈಸೂರು ರಸ್ತೆ-ಚಲ್ಲಘಟ್ಟ ನಡುವಿನ ಮೆಟ್ರೋ ಸಂಚಾರವನ್ನೇ ಸ್ಥಗಿತಗೊಳಿಸಲಾಯಿತು. ಪರಿಣಾಮ ಸಾವಿರಾರು ಜನರಿಗೆ ಇದರ ಬಿಸಿ ತಟ್ಟಿತು. ಅಷ್ಟೇ ಅಲ್ಲ, ಇದು ಸ್ವತಃ ನಿಗಮದ ಸಿಬ್ಬಂದಿಯನ್ನೂ ಕಂಗೆಡಿಸಿತು.
ವ್ಯಕ್ತಿಯೊಬ್ಬ ಓಡಾಡುವ ದೃಶ್ಯ ಮೆಟ್ರೋದ ವಿಚಕ್ಷಣಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ 3 ಗಂಟೆಯಿಂದ 3.20ರವರೆಗೆ ಮೈಸೂರು ರಸ್ತೆ ಹಾಗೂ ಚಲ್ಲಘಟ್ಟ ನಡುವೆ ಹಳಿಗಳ ವಿದ್ಯುತ್ ಪೂರೈಕೆ ನಿಲ್ಲಿಸಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಪ್ರಯಾಣಿಕರು ಮೆಟ್ರೋ ರೈಲಿಗಾಗಿ ಕಾದು ಹೈರಾಣಾದರು.
“ತಾಂತ್ರಿಕ ದೋಷ’ ಅಂದ ಸಿಬ್ಬಂದಿ!: ಸಾಮಾನ್ಯವಾಗಿ ಮಧ್ಯಾಹ್ನದ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೊಂದು ರೈಲು ಕಾರ್ಯಾಚರಣೆ ಮಾಡುತ್ತವೆ. ಮಂಗಳವಾರ ಮಧ್ಯಾಹ್ನ 20 ನಿಮಿಷವಾದರೂ ಬಾರದ ಹಿನ್ನೆಲೆಯಲ್ಲಿ ಕೆಂಗೇರಿ, ಪಟ್ಟಣಗೆರೆ, ನಾಯಂಡಹಳ್ಳಿ, ಕೆಂಗೇರಿ ಟರ್ಮಿನಲ್ ಸೇರಿ ವಿವಿಧ ನಿಲ್ದಾಣಗಳಲ್ಲಿ ಪ್ರಯಾ ಣಿಕರು ಮೆಟ್ರೋ ರೈಲಿಗಾಗಿ ಕಾದು ನಿಲ್ಲುವಂತಾಯಿತು. ಈ ವ್ಯತ್ಯಯದ ಬಗ್ಗೆ ನಿಲ್ದಾಣಗಳಲ್ಲಿದ್ದ ಸಿಬ್ಬಂದಿಯನ್ನು ಕೇಳಿದಾಗ, “ತಾಂತ್ರಿಕ ದೋಷ’ ಎಂಬ ಉತ್ತರ ನೀಡಿದರು ಎಂದು ಪ್ರಯಾಣಿಕರು ತಿಳಿಸಿದರು.
ಈ ಮಧ್ಯೆ ವಯಾಡಕ್ಟ್ ಮೇಲೆ ವ್ಯಕ್ತಿ ನಡೆದುಹೋಗಿರುವುದರ ಬಗ್ಗೆ ಬಿಎಂಆರ್‌ಸಿಎಲ್ ಸ್ಪಷ್ಟನೆ ನೀಡಿಲ್ಲ. ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ತಪಾಸಣೆ ನಡೆಸಲಾಯಿತು. ಕಳೆದ ಒಂದೂವರೆ ಗಂಟೆಯಿಂದ ಅಕ್ಕಪಕ್ಕದ ಮೆಟ್ರೋ ಸ್ಟೇಷನ್‌ನಲ್ಲಿರುವ ಸಿಸಿ ಕ್ಯಾಮೆರಾ ಮತ್ತು ವಯಾಡಕ್ಟ್ ಬಳಿ ಇರುವ ಸಿಸಿ ಕ್ಯಾಮೆರಾ ತಪಾಸಣೆ ಮಾಡಲಾಗುತ್ತಿದೆ. ಭದ್ರತೆಗಾಗಿ ಜ್ಞಾನ ಭಾರತಿ ಸ್ಟೇಷನ್ ಮುಂಭಾಗ ಇರುವ ಸರ್ವಿಸ್ ರಸ್ತೆ ಕ್ಲೋಸ್ ಮಾಡಲಾಗಿದೆ. ಆದರೆ, ವಯಾಡಕ್ಟ್ ಮೇಲೆ ಹೋದಂತೆ ಕಂಡುಬಂದ ವ್ಯಕ್ತಿ ಯಾರೂ ಸಿಗಲಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.
ಕ್ಯಾಮೆರಾದಲ್ಲಿ ವ್ಯಕ್ತಿಯ ಓಡಾಟ ಕಂಡುಬಂದ ಹಿನ್ನೆಲೆಯಲ್ಲಿ ಸೇವೆ ಸ್ಥಗಿತಗೊಳಿಸಲಾಗಿತ್ತು. ಆದರೆ, ಪರಿಶೀಲನೆಗೆ ಮುಂದಾದ ಮೆಟ್ರೋ ಭದ್ರತಾ ಸಿಬ್ಬಂದಿಗೆ ಆ ವ್ಯಕ್ತಿ ಸಿಗಲಿಲ್ಲ. –ಎಂ. ಮಹೇಶ್ವರರಾವ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.