![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 13, 2024, 2:46 PM IST
ಉದಯವಾಣಿ ಸಮಾಚಾರ
ಅಡಹಳ್ಳಿ: ಒಂದಿಷ್ಟು ದೇಶಗಳು ಹಣ ಬಲ, ಶಸ್ತ್ರ ಬಲ ಮತ್ತು ಭಯೋತ್ಪಾದನೆಯಿಂದ ಜಗತ್ತನ್ನಾಳಲು ಹೊರಟರೆ, ಆಧ್ಯಾತ್ಮಿಕ ಬಲದಿಂದ ಭಾರತ ವಿಶ್ವವನ್ನೇ ಗೆಲ್ಲಲು ಹೊರಟಿದೆ ಎಂದು ತಾಳಿಕೋಟಿಯ ವಾಗ್ಮಿ ಅಶೋಕ ಹಂಚಲಿ ಹೇಳಿದರು.
ಅವರು ಸಮೀಪದ ನದಿ ಇಂಗಳಗಾಂವ ಗ್ರಾಮದಲ್ಲಿ 63ನೇ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಮುತ್ತೈದೆಯರಿಗೆ ಉಡಿ ತುಂಬುವ, ಮಹಾಂತ ಅಪ್ಪಗಳ ತೃತೀಯ ಪುಣ್ಯಸ್ಮರಣೋತ್ಸವ ಹಾಗೂ ಶರಣ ದಂಪತಿಗಳ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಸ್ಕೃತಿ ಉಳಿವು ಕುರಿತು ಉಪನ್ಯಾಸ ನೀಡಿ, ನನ್ನ ದೇಶ, ನನ್ನ ನಾಡು ಎನ್ನದ ಹೃದಯ ಸುಡುಗಾಡು. ಮಕ್ಕಳಿಗೆ ಸತ್ಯ, ಆಚಾರ, ವಿಚಾರ ಹಾಗೂ ಬಸವಾದಿ ಶಿವಶರಣರ ವಚನಗಳನ್ನು ಕಲಿಸೋಣ. ಶರಣ ಸಂಸ್ಕೃತಿ, ಋಷಿ ಸಂಸ್ಕೃತಿ ಅದುವೇ ನಮ್ಮ ಕೃಷಿ ಸಂಸ್ಕೃತಿಯಾಗಿದೆ.
ಜಾಗತೀಕರಣದ ದಳ್ಳುರಿಯೊಳಗೆ ನಮ್ಮ ಸಂಸ್ಕೃತಿ ಕೊಚ್ಚಿ ಹೋಗಿದೆ. ಮಕ್ಕಳಿಗೆ ಕಾರು, ಬಂಗಲೆ ಕಟ್ಟಿಸಿಕೊಡುವ ಬದಲು ಸಂಸ್ಕಾರ ಕೊಟ್ಟು ಬಿಡಿ, ಪುಣ್ಯ ಬರುತ್ತದೆ ಎಂದರು.
ನದಿ ಇಂಗಳಗಾಂವ ಗುರುಲಿಂಗದೇವರಮಠದ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಕುಟುಂಬದ ಆಧಾರ ಸ್ತಂಭವಾಗಿದ್ದಾಳೆ. ಸಹಸ್ರ ಮುತ್ತೈದೆಯರ ಉಡಿ ತುಂಬುವ ಮೂಲಕ ಶಾಂತಿ, ನೆಮ್ಮದಿ, ಸಮೃದ್ಧಿ ಸ್ಥಾಪಿತವಾಗಿ ಈ ನಾಡು ಕಂಗೊಳಿಸಲು ನಾವೆಲ್ಲರೂ ಸಂಸ್ಕೃತಿಯನ್ನು ಆರಾಧಿಸೋಣ ಎಂದರು.
ಹಲ್ಯಾಳ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿ, ಹೊನವಾಡದ ಬಾಬುರಾವ ಮಹಾರಾಜರು, ಪ್ರೊ. ವಸಂತಾ ಕಲ್ಯಾಣಿ ಮಾತನಾಡಿದರು. ಶಾಸಕ ಲಕ್ಷ್ಮಣ ಸವದಿ ಪತ್ನಿ ಪುಷ್ಪಾ ಸವದಿ, ಭಾರತಿ ಬುಟಾಳೆ, ಡಾ| ಚಂದ್ರಪ್ರಭಾ ಗುಳ್ಳ, ರೇಣುಕಾ ಗೊಂದಳೆ, ವಿದ್ಯಶ್ರೀ ಜಾಬಗೌಡರ, ಭಾಗಿರತಿ ತೇಲಿ, ಶಾಂತಾ ಪಾಟೀಲ, ಸುರೇಖಾ ಬುಕಿಟಗಾರ, ಅಕ್ಕತಾಯಿ ಧರಿಗೌಡ, ಶಶಿಕಲಾ ಯಾದವಾಡ, ಡಿವೈಎಸ್‌ಪಿ ದಾದಾಪೀರ್ ಮುಲ್ಲಾ ಸೇರಿದಂತೆ ಹಲವರು ಇದ್ದರು.
ಜೀವನದ ಸಂಧ್ಯಾಕಾಲದಲ್ಲಿ 75 ವಸಂತಗಳನ್ನು ದಾಟಿ, ಸತಿ,ಪತಿಗಳಿಬ್ಬರು ಅನ್ಯೋನ್ಯವಾಗಿ ಅಮೃತಮಹೋತ್ಸವ
ಆಚರಿಸಿಕೊಳ್ಳುತ್ತಿರುವುದು ನಮ್ಮ ದೇಶದಲ್ಲಿ ಮಾತ್ರ ಕಾಣಸಿಗಲು ಸಾಧ್ಯ. ಅಂತಹ ಶ್ರೀಮಂತ ಪರಂಪರೆಯನ್ನು ಎತ್ತಿ ಹಿಡಿದು
ದಂಪತಿಗಳ ಸತ್ಕಾರ, ಮಹಿಳಾ ಗೋಷ್ಠಿ ಹಾಗೂ ಸ್ತ್ರೀಯರಿಗೆ ಗೌರವ ಕೊಡುವ ಕೆಲಸ ಮಾಡುತ್ತಿರುವ ನದಿ ಇಂಗಳಗಾಂವ ಮಠದ
ಶ್ರೀಗಳ ಕಾರ್ಯ ಶ್ಲಾಘನೀಯ.
ಪುಷ್ಪಾ ಲಕ್ಷ್ಮಣ ಸವದಿ
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.