BJP; ತಪ್ಪು ತಿಳುವಳಿಕೆ ಇದ್ದಲ್ಲಿ ಶಾಸಕರಲ್ಲಿ ಕ್ಷಮೆಯಾಚಿಸುತ್ತೇನೆ!: ಸಚಿವ ಖೂಬಾ

ಕೇಂದ್ರ ಸಚಿವರಿಗೆ ವಿಪಕ್ಷದವರಿಗಿಂತ ಸ್ವಪಕ್ಷೀಯರದ್ದೇ ದೊಡ್ಡ ಸವಾಲು

Team Udayavani, Mar 14, 2024, 9:05 PM IST

1-qweqweqw

ಬೀದರ್: ಕ್ಷೇತ್ರದ ಶಾಸಕರು, ಮಾಜಿ‌ ಶಾಸಕರ ಮನೆಗೆ ಹೋಗಿ ಅವರನ್ನು‌ ವಿಶ್ವಾಸ ಪಡೆಯುವ ವಿಶಾಲ ಹೃದಯ ತೋರಿಸುತ್ತೇನೆ. ಸಣ್ಭ ಪುಟ್ಟ ತಪ್ಪು ತಿಳುವಳಿಕೆ ಇದ್ದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ನನ್ನನ್ನು ಕೈಬಿಡಲ್ಲ ಎಂಬ ವಿಶ್ವಾಸ ಅಭ್ಯರ್ಥಿ ಘೋಷಣೆಯಿಂದ‌ ಖಚಿತವಾಗಿದೆ. ಟಿಕೆಟ್ ಘೋಷಣೆ ನಂತರ ಕ್ಷೇತ್ರದ ಎಲ್ಲ ಶಾಸಕರು, ಮಾಜಿ‌ ಶಾಸಕರನ್ನು ಸಂಪರ್ಕಿಸಿದ್ದು, ಎಲ್ಲರೂ ಸಂತಸವನ್ನು ಹಂಚಿಕೊಂಡಿದ್ದಾರೆ. ಎರಡು ಲಕ್ಷ ಅಂತರದಿಂದ‌ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ತೀವ್ರ ವಿರೋಧದ ನಡುವೆಯೂ ಟಿಕೆಟ್
ಖೂಬಾ ಅವರಿಗೆ ಟಿಕೆಟ್ ನೀಡಲು ಮಾಜಿ ಸಚಿವ ಪ್ರಭು ಚೌಹಾಣ್ ಸೇರಿ ಲೋಕಸಭಾ ವ್ಯಾಪ್ತಿಯ ಬಿಜೆಪಿ ಶಾಸಕರು ಮತ್ತು ಹಲವು ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಖೂಬಾ ಅವರು ಈಗ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕಿದೆ.

ಸಂಸದರಾಗಿ ಮಾಡುವ ಭರವಸೆ

”ನನ್ನ ಅಭಿವೃದ್ದಿ ಕೆಲಸ, ಪಕ್ಷ ಸಂಘಟನೆ ಮತ್ತು ಜನಾಭಿಪ್ರಾಯಗಳನ್ನು ಗಮನಿಸಿ ಬಿಜೆಪಿ ನನಗೆ ಮತ್ತೊಮ್ಮೆ ಟಿಕೆಟ್ ನೀಡಿದೆ. ಟಿಕೆಟ್ ಘೋಷಣೆ ಬಳಿಕ ಪಕ್ಷದ ಎಲ್ಲಾ ನಾಯಕರು, ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳೊಂದಿಗೆ ದೂರವಾಣಿ ಮೂಲಕ ಮಾತಾಡಿದ್ದೇನೆ. ಎಲ್ಲರೂ ನನ್ನೊಂದಿಗೆ ಚುನಾವಣೆಯಲ್ಲಿ ಮನ:ಪೂರ್ವಕವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮತ್ತು ಕ್ಷೇತ್ರಕ್ಕೆ ನನ್ನನ್ನು ಸಂಸದರಾಗಿ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ” ಎಂದು ಭಗವಂತ ಖೂಬಾ ಹೇಳಿದರು.

ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ಚುನಾವಣೆ ಪೂರ್ವ ಟಿಕೆಟ್‌ಗಾಗಿ ಕಾರ್ಯಕರ್ತರಿಂದ ಬೇಡಿಕೆ ಇಡುವುದು ಸಾಮಾನ್ಯ ಪ್ರಕ್ರಿಯೆ. ಇದು ಬಿಜೆಪಿಯಲ್ಲಿನ ಆಂತರಿಕ ಪ್ರಜಾಪ್ರಭುತ್ವ ತೋರಿಸಿಕೊಡುತ್ತೆ. ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ನಾನು ಕಳೆದ ಎರಡು ಚುನಾವಣೆಯಲ್ಲಿ ಗೆದ್ದಿದ್ದೇನೆ. ಮೂರನೇ ಬಾರಿಯೂ ಅತಿ ಹೆಚ್ಚು ಅಂತರದಿಂದ ಗೆಲ್ಲುವ ವಿಶ್ವಾಸ ಇದೆ ಎಂದರು.

ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿಗಳಿಗೆ ಜನ ಈಗಾಗಲೆ ರೋಸಿ ಹೋಗಿದ್ದಾರೆ. ದೇಶಕ್ಕೆ ಮೋದಿಜಿಯವರ ಅವಶ್ಯಕತೆ ಎಷ್ಟಿದೆ ಎನ್ನುವುದು ಜನರಿಗೆ ಗೊತ್ತಿದೆ ಹಾಗು ಜನರು ಸಹ ಮೋದಿಜಿಯವರ ಆಡಳಿತದಿಂದ ತುಂಬಾ ಸಂತೋಷವಾಗಿದ್ದಾರೆ. ಹಾಗಾಗಿ ನಾನು ಈ ಬಾರಿ ಎರಡು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಬರುತ್ತೇನೆಂಬ ವಿಶ್ವಾಸ ಇದೆ ಎಂದರು.

ಅದ್ದೂರಿ ಸ್ವಾಗತ, ದೇಗುಲಗಳ ಭೇಟಿ

ಮೂರನೇ ಬಾರಿಗೆ ಟಿಕೆಟ್ ಘೋಷಣೆ ಬಳಿಕ ತವರು ಜಿಲ್ಲೆಗೆ ಆಗಮಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳು, ನೂತನ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಖಾತೆಯ ಸಚಿವ ಭಗವಂತ ಖೂಬಾ ಅವರನ್ನು ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ಮೊದಲಿಗೆ ರೆಜಂತಲ್‌ನ ಸಿದ್ದಿವಿನಾಯಕನ ದರುಶನ ಪಡೆದ ಖೂಬಾ, ಬಳಿಕ ಪಾಪನಾಶ ಲಿಂಗ, ಔರಾದ್‌ನ ಅಮರೇಶ್ವರ ದೇವಸ್ಥಾನ, ತಮ್ಮ ತಾಯಿ ಸ್ವ. ಮಹಾದೇವಿ ಖೂಬಾರವರ ಸಮಾಧಿಗೆ ತೆರಳಿ ದರುಶನ ಮಾಡಿದರು. ತದನಂತರ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಬಿಜೆಪಿಯಿಂದ ಸನ್ಮಾನ ಸ್ವೀಕರಿಸಿದರು. ಕಾರ್ಯಕರ್ತರು, ಬೆಂಬಲಿಗರು ಜಯಘೋಷಗಳ ಮಧ್ಯೆ ಸಂಭ್ರಮಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೊಮನಾಥ ಪಾಟೀಲ ಮಾತನಾಡಿ, ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ. ಅಭಿವೃದ್ದಿ ಕೆಲಸು ಮಾಡುವವರಿಗೆ ಪಕ್ಷದಲ್ಲಿ ಮನ್ನಣೆ ಸಿಗುತ್ತದೆ. ಸಂಸದರಾಗಿ ಖೂಬಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ, ಜತೆಗೆ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಸಂಘಟನೆಯ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಜವಬ್ಧಾರಿಯುತವಾಗಿ ಕೆಲಸ ಮಾಡಿ, ಖೂಬಾ ಅವರ ಹ್ಯಾಟ್ರಿಕ್ ಗೆಲುವಿಗೆ ಶ್ರಮಿಸೋಣ ಎಂದು ಹೇಳಿದರು.

ಟಾಪ್ ನ್ಯೂಸ್

DK-Shivakuamar

Guarantee: ಮಹಾರಾಷ್ಟ್ರ ಬಿಜೆಪಿಗರ ಕರ್ನಾಟಕ ಪ್ರವಾಸಕ್ಕೆ ವಿಶೇಷ ವಿಮಾನ: ಡಿ.ಕೆ.ಶಿವಕುಮಾರ್‌

Pramod-Muthalik

Waqf Issue: ವಕ್ಫ್ ವಿರುದ್ಧ ಹಿಂದೂಗಳು ಒಗ್ಗೂಡಲಿ: ಪ್ರಮೋದ್‌ ಮುತಾಲಿಕ್‌

arrested

Baba Siddique ಹ*ತ್ಯೆ: ಶೂಟರ್‌ ಸೇರಿ ಮೂವರ ಬಂಧನ

pinarayi

Jamaat ಬೆಂಬಲ ಹೇಳಿಕೆ: ಪಿಣರಾಯಿ, ಪ್ರಿಯಾಂಕಾ ವಾದ್ರಾ ಮಧ್ಯೆ ವಾಕ್ಸಮರ!

Sheik Hasina

Bangladesh; ಶೇಖ್‌ ಹಸೀನಾ ಪಕ್ಷದ ಬೆಂಬಲಿಗರನ್ನು ಬಂಧಿಸಿದ ಸೇನೆ

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

Kukke Shree Subrahmanya ಕ್ಷೇತ್ರದಲ್ಲಿ ಭಕ್ತ ಸಂದಣಿ

Kukke Shree Subrahmanya ಕ್ಷೇತ್ರದಲ್ಲಿ ಭಕ್ತ ಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

Khandre

Bidar;ವಿಮಾನಯಾನ ಪುನರಾರಂಭಕ್ಕೆ ಸಂಪುಟದ ಸಮ್ಮತಿ: ಸಚಿವ ಖಂಡ್ರೆ

Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ

Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ

Bidar: ಅ.28ರಂದು 5 ನೇ ವಚನ ಸಾಹಿತ್ಯ ಸಮ್ಮೇಳನ

Bidar: ಅ.28ರಂದು 5ನೇ ವಚನ ಸಾಹಿತ್ಯ ಸಮ್ಮೇಳನ

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

DK-Shivakuamar

Guarantee: ಮಹಾರಾಷ್ಟ್ರ ಬಿಜೆಪಿಗರ ಕರ್ನಾಟಕ ಪ್ರವಾಸಕ್ಕೆ ವಿಶೇಷ ವಿಮಾನ: ಡಿ.ಕೆ.ಶಿವಕುಮಾರ್‌

Pramod-Muthalik

Waqf Issue: ವಕ್ಫ್ ವಿರುದ್ಧ ಹಿಂದೂಗಳು ಒಗ್ಗೂಡಲಿ: ಪ್ರಮೋದ್‌ ಮುತಾಲಿಕ್‌

Vimana 2

Passenger ನಿಂದಲೇ ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ ಕರೆ!

AANE 2

Madhya Pradesh; ಮರಿ ಆನೆ ಸಾ*ವು: ಒಟ್ಟು 11ಕ್ಕೆ ಏರಿಕೆ

sudha-murthy

Air travel ಅಗ್ಗದ ಟಿಕೆಟ್‌ ಖರೀದಿ: ಸುಧಾಮೂರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.