Paytm ಯುಪಿಐ ಸೇವೆ ಮುಂದುವರಿಸಲು ಅವಕಾಶ
Team Udayavani, Mar 15, 2024, 6:16 AM IST
ಮುಂಬಯಿ: ಎಸ್ಬಿಐ, ಆ್ಯಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಮತ್ತು ಯೆಸ್ ಬ್ಯಾಂಕ್ ಮೂಲಕ ಯುಪಿಐ ಕಾರ್ಯಾಚರಣೆ ಮುಂದುವರಿಸಲು ಪೇಟಿಎಂಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್ಪಿಸಿಐ) ಅವಕಾಶ ನೀಡಿದೆ. ಈ ಮೂಲಕ ಪೇಟಿಎಂ ಬಳಕೆದಾರರು ಯುಪಿಐ ಪಾವತಿ ಮುಂದುವರಿಸಬಹುದಾಗಿದೆ.
ಮಾ.15ರ ಅನಂತರ ಯಾವುದೇ ಗ್ರಾಹಕರ ಖಾತೆಗಳಿಗೆ ಠೇವಣಿ, ಸಾಲ ವರ್ಗಾವಣೆ, ಟಾಪ್ ಅಪ್ಗ್ಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿ.(ಪಿಪಿಬಿಎಲ್)ಗೆ ಆರ್ಬಿಐ ನಿರ್ಬಂಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಪೇಟಿಎಂ ಆ್ಯಪ್ ಹೊಂದಿರುವ ಬಳಕೆದಾರರು ಯುಪಿಐ ಪಾವತಿ ಗಳನ್ನು ಮುಂದುವರಿಸಲು ಎನ್ಪಿಸಿಐ ಅನುಮೋದನೆ ನೀಡಿದೆ.
ಆರ್ಬಿಐ ನಿರ್ಬಂಧದ ನಡುವೆ ಶೇ.20ರಷ್ಟು ಉದ್ಯೋಗಿಗಳ ವಜಾಗೆ ಪಿಪಿಬಿಎಲ್ ಮುಂದಾ ಗಿದೆ. 2023ರ ಡಿಸೆಂಬರ್ನ ಮಾಹಿತಿ ಪ್ರಕಾರ, ಪಿಪಿಬಿಎಲ್ನಲ್ಲಿ ಒಟ್ಟು 2,275 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಪಿಪಿಬಿಎಲ್ ಖಾತೆ ಹೊಂದಿರುವ ಗ್ರಾಹಕರಿಗೆ ಶುಕ್ರವಾರದ ಬಳಿಕ ಠೇವಣಿ, ವೇತನ ಪಾವತಿ, ಇತರ ಪಾವತಿ ಸಾಧ್ಯವಿಲ್ಲ. ಪಿಪಿಬಿಎಲ್ ಲಿಂಕ್ ಆಗಿರುವ ಖಾತೆಗಳಿಂದ ಯುಪಿಐ ಸಾಧ್ಯವಿಲ್ಲ. ಜತೆಗೆ ಫಾಸ್ಟಾಗ್, ಐಎಂಪಿಎಸ್ ಕಾರ್ಯಾಚರಣೆ ಸಾಧ್ಯವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.