Lok Sabha Elections; ರೈತರಿಗೆ ಕಾಂಗ್ರೆಸ್ ಪಂಚ ಗ್ಯಾರಂಟಿ
Team Udayavani, Mar 15, 2024, 1:24 AM IST
ನಾಸಿಕ್/ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ “ಯುವ ನ್ಯಾಯ’, “ನಾರಿ ನ್ಯಾಯ’ದ ಬಳಿಕ ಈಗ ಕಾಂಗ್ರೆಸ್ ರೈತರ ಓಲೈಕೆಗೆ ಮುಂದಾಗಿದೆ. ಅದಕ್ಕಾಗಿ “ರೈತ ನ್ಯಾಯ’ದ ಹೆಸರಿನಲ್ಲಿ “ಐದು ಗ್ಯಾರಂಟಿ’ ಗಳನ್ನು ಗುರುವಾರ ಪ್ರಕಟಿಸಿದೆ. ಈ ಪೈಕಿ ಅಗತ್ಯವಿರುವ ಕೃಷಿ ಸಾಲಮನ್ನಾ ಮೊತ್ತವನ್ನು ನಿರ್ಧ
ರಿಸುವುದಕ್ಕಾಗಿ “ಕೃಷಿ ಸಾಲ ಮನ್ನಾ ಆಯೋಗ’ ಸೃಷ್ಟಿ ಮತ್ತು “ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಮಾನ್ಯತೆ’ ನೀಡುವುದು ಪಕ್ಷದ ಪ್ರಮುಖ ಭರವಸೆಯಾಗಿದೆ.
ಕನಿಷ್ಠ ಬೆಂಬಲ ಬೆಲೆಗಾಗಿ ರೈತರು “ದಿಲ್ಲಿ ಚಲೋ’ ಕಾರ್ಯಕ್ರಮ ಹಮ್ಮಿ ಕೊಂಡಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಈ ಐದು ಗ್ಯಾರಂಟಿಗಳನ್ನು ಒಳಗೊಂಡಿರುವ ಕಿಸಾನ್ ನ್ಯಾಯ (ರೈತ ನ್ಯಾಯ) ಪ್ರಕಟಿಸಿದ್ದಾರೆ. ಇದೇ ವೇಳೆ ನಾಸಿಕ್‌ನಲ್ಲಿ ಮಾತನಾಡಿದ ಅವರು ದೇಶದ ರೈತ ವರ್ಗವನ್ನು ಜಿಎಸ್‌ಟಿ ಯಿಂದ ಹೊರಗಿಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಐಎನ್‌ಡಿಐಎ ಒಕ್ಕೂಟದ ಸರಕಾರ ರೈತರ ಪರವಾಗಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ದೇಶದ ಅನ್ನದಾತರ ಎಲ್ಲ ಸಮಸ್ಯೆಗಳನ್ನು ಬೇರು ಸಮೇತ ಕಿತ್ತೆಸೆಯುವ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಲಿದೆ. ಬೆವರು ಸುರಿಸಿ, ಉಳುಮೆ ಮಾಡುವ ರೈತರ ಬದುಕನ್ನು ಸಂತೋಷಗೊಳಿಸುವ ಗುರಿಯನ್ನು ಕಾಂಗ್ರೆಸ್ ಹಾಕಿಕೊಂಡಿದೆ. ಐತಿಹಾಸಿಕ ಈ ಐದು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.
ರೈತ ನ್ಯಾಯದ 5 ಗ್ಯಾರಂಟಿಗಳು
1ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ
ಸ್ವಾಮಿನಾಥನ್ ಶಿಫಾರಸುಗಳ ಅನ್ವಯ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಮಾನ್ಯತೆ.
2ಕೃಷಿ ಸಾಲ ಮನ್ನಾ ಆಯೋಗ
ರೈತರ ಸಾಲ ಮನ್ನಾ ಮತ್ತು ಮನ್ನಾ ಮೊತ್ತವನ್ನು ನಿರ್ಧ ರಿಸುವುದಕ್ಕಾಗಿ ಕೃಷಿ ಸಾಲಮನ್ನಾ ಶಾಶ್ವತ ಆಯೋಗ ರಚನೆ.
3ವಿಮಾ ಗ್ಯಾರಂಟಿ
ಬೆಳೆ ನಾಶವಾದ ಸಂದರ್ಭದಲ್ಲಿ 30 ದಿನದೊಳಗೇ ರೈತರ ಖಾತೆಗಳಿಗೆ ನೇರವಾಗಿ ಹಣ. ಈ ಸಂಬಂಧ ವಿಮಾ ಯೋಜನೆ ಮರುವಿನ್ಯಾಸ.
4ಹೊಸ ಆಮದು-ರಫ್ತು ನೀತಿ
ರೈತರ ಹಿತಾಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಆಮದು-ರಫ್ತು ನೀತಿ ಜಾರಿ.
5ಜಿಎಸ್‌ಟಿ ಮುಕ್ತ ರೈತ
ಕೃಷಿ ಉತ್ಪನ್ನಗಳನ್ನು ಜಿಎಸ್‌ಟಿ ಯಿಂದ ಹೊರಗಿಡಲು ಜಿಎಸ್‌ಟಿಗೆ ತಿದ್ದುಪಡಿಯ ಗ್ಯಾರಂಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.