Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ
ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚುವರಿ 2000 ರೂ. ಬಂಪ್ ಅಪ್ ಇದೆ
Team Udayavani, Mar 15, 2024, 10:01 PM IST
ಬೆಂಗಳೂರು: ತನ್ನದೇ ವಿಶೇಷ ವಿನ್ಯಾಸಗಳಿಂದ ಗಮನ ಸೆಳೆದ ನಥಿಂಗ್ ಕಂಪೆನಿ ತನ್ನ ಅತ್ಯಂತ ನಿರೀಕ್ಷಿತ ಹೊಸ ಸ್ಮಾರ್ಟ್‌ಫೋನ್ ಫೋನ್(2ಎ) ಅನ್ನು ಬಿಡುಗಡೆ ಮಾಡಿದೆ.
ನಥಿಂಗ್ ತನ್ನ ಪರಿಣಿತಿ, ಇಂಜಿನಿಯರಿಂಗ್ ಜೊತೆಗೆ ಹೊಸ ಅನ್ವೇಷಣೆಗಳು ಮತ್ತು ವಿನ್ಯಾಸಗಳನ್ನು ತನ್ನ ಫೋನುಗಳಲ್ಲಿ ಮೂಡಿಸಿದೆ. ಅತ್ಯಂತ ಶಕ್ತಿಯುತ ಪ್ರೊಸೆಸರ್, 50 ಎಂಪಿ ಡ್ಯೂಯೆಲ್ ರಿಯರ್ ಕ್ಯಾಮೆರಾ, ಎಕ್ಸ್‌ಟ್ರಾ ಬ್ರೈಟ್ ಆಗಿರುವ ಫ್ಲೆಕ್ಸಿಬಲ್ ಅಮೊಲೆಡ್ ಡಿಸ್‌ಪ್ಲೇ ಮತ್ತು ಆಕರ್ಷಕ ಒಎಸ್ ಅನ್ನು ಇದು ಹೊಂದಿದೆ.
ಮೀಡಿಯಾಟೆಕ್ ಡಿಮೆನ್ಸಿಟಿ 7200 ಪ್ರೋ ಪ್ರೊಸೆಸರ್ ಅನ್ನು ಹೊಂದಿರುವ ಫೋನ್ (2ಎ), ಪವರ್ ದಕ್ಷತೆ ಮತ್ತು ವೇಗವನ್ನು ಹೊಂದಿದೆ. ಇದಕ್ಕೆ 20 GB (12GB + 8GB) ರ್ಯಾಮ್ ಇದ್ದು, ರ್ಯಾಮ್ ಬೂಸ್ಟರ್ ಟೆಕ್ನಾಲಜಿ ಕೂಡಾ ಇದೆ. 5,000 ಎಂಎಎಚ್ ಬ್ಯಾಟರಿ ಇದ್ದು, ತ್ವರಿತವಾಗಿ ಚಾರ್ಜ್ ಆಗುವುದಕ್ಕೆಂದು 45 ವ್ಯಾಟ್ಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಿದೆ. ಡ್ಯೂಯೆಲ್ 50 ಎಂಪಿ ರಿಯರ್ ಕ್ಯಾಮೆರಾವನ್ನು ಹೊಂದಿರುವ ಇದರಲ್ಲಿ ಟ್ರ್ಯೂಲೆನ್ಸ್ ಇಂಜಿನ್ ಇದೆ ಮತ್ತು ಮುಂಭಾಗದಲ್ಲಿ 32 ಎಂಪಿ ಕ್ಯಾಮೆರಾ ಇದೆ. ಇದರ 6.7″ ಫ್ಲೆಕ್ಸಿಬಲ್ ಅಮೊಲೆಡ್ ಡಿಸ್‌ಪ್ಲೇ 1300 ನಿಟ್ಸ್ ಬ್ರೈಟ್‌ನೆಸ್ ಮತ್ತು 120 ಹರ್ಟ್ಸ್ ರಿಫ್ರೆಶ್ ರೇಟ್ ಹೊಂದಿದೆ. ಫೋನ್ (2ಎ) ಯಲ್ಲಿ ನಥಿಂಗ್‌ನ ವಿಶಿಷ್ಟ ವಿನ್ಯಾಸವಿದೆ. ಉದ್ಯಮದಲ್ಲೇ ಪ್ರಥಮ 90 ಡಿಗ್ರಿ ಕೋನದ ಯೂನಿಬಾಡಿ ಕವರ್ ಇದಕ್ಕಿದೆ ಮತ್ತು ಹೊಸ ವಿನ್ಯಾಸದಲ್ಲಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್ 14 ಜೊತೆಗೆ ನಥಿಂಗ್ ಒಎಸ್ 2.5 ಇದೆ.
ಫ್ಲಿಪ್‌ಕಾರ್ಟ್, ಕ್ರೋಮಾ, ವಿಜಯ್ ಸೇಲ್ಸ್ ಮತ್ತು ಇತರ ಪ್ರಮುಖ ಔಟ್‌ಲೆಟ್‌ಗಳಲ್ಲಿ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಫೋನ್ (2ಎ) ದೊರಕುತ್ತದೆ. ಇದು ಮೂರು ಮಾದರಿಗಳನ್ನು ಹೊಂದಿದೆ. 8GB/128GB (ರೂ. 23,999/-), 8GB/256GB (ರೂ. 25,999/-) ಮತ್ತು 12GB/256GB (ರೂ. 27,999/-). ವಿಶೇಷ ಆರಂಭಿಕ ಆಫರ್ ರೂಪದಲ್ಲಿ ಎಚ್‌ಡಿಎಫ್‌ಸಿ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ 2 ಸಾವಿರ ರೂ.ರಿಯಾಯಿತಿ ಇದೆ.
ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚುವರಿ 2000 ರೂ. ಬಂಪ್ ಅಪ್ ಇದೆ. 8/128 GB ವೇರಿಯಂಟ್ 19,999/- ದರದಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ಫೋನ್ (2ಎ) ಖರೀದಿ ಮಾಡುವವರು ಸಿಎಂಎಫ್ ಬಡ್ಸ್ (ಪ್ರೋ) ಅನ್ನು ರೂ. 1999 ದರದಲ್ಲಿ ಖರೀದಿ ಮಾಡಬಹುದು ಮತ್ತು ಸಿಎಂಎಫ್ ಜಿಎಎನ್ ಚಾರ್ಜರ್ ಅನ್ನು ರೂ. 1999 ದರದಲ್ಲಿ ಬಂಡಲ್ ಆಫರ್ ಆಗಿ ಖರೀದಿಸಬಹುದು.
ಸಿಎಂಎಫ್ ಬಡ್ಸ್ ಮತ್ತು ನೆಕ್ ಬ್ಯಾಂಡ್
ಸಿಎಂಎಫ್ ಬೈ ನಥಿಂಗ್ ಎಂಬ ಉಪ ಬ್ರಾಂಡ್ ಅಡಿಯಲ್ಲಿ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಅನ್ನೂ ಕೂಡಾ ನಥಿಂಗ್ ಘೋಷಿಸಿದೆ. ನೆಕ್‌ಬ್ಯಾಂಡ್ ಪ್ರೋ ಮೊಟ್ಟ ಮೊದಲ 50 ಡಿಬಿ ಹೈಬ್ರಿಡ್ ಎಎನ್‌ಸಿ ಸಾಧನವಾಗಿದ್ದು, ಈ ಬೆಲೆ ಶ್ರೇಣಿಯಲ್ಲಿ ಬೆಸ್ಟ್ ಇನ್ ಕ್ಲಾಸ್ ಎಎನ್‌ಸಿ ಅನ್ನು ಒದಗಿಸುತ್ತದೆ. ಎರಡೂ ಉತ್ಪನ್ನಗಳು ಉತ್ತಮ ಧ್ವನಿ ಗುಣಮಟ್ಟ, ದಕ್ಷ ವಿನ್ಯಾಸ, ದೀರ್ಘ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ.
ಸಿಎಂಎಫ್ ಬೈ ನಥಿಂಗ್ ಬಡ್ಸ್ ಬೆಲೆ ರೂ. 2499/- ರೂ ಇದ್ದು, ಆರಂಭಿಕ ಬೆಲೆಯಾಗಿ ರೂ. 2299 ರಲ್ಲಿ ಲಭ್ಯವಿದೆ. ನೆಕ್‌ಬ್ಯಾಂಡ್ ಪ್ರೋ ಬೆಲೆ ರೂ. 1999 ಆಗಿದ್ದು, ಆರಂಭಿಕ ದರ ರೂ. 1799 ರಲ್ಲಿ ಲಭ್ಯವಿರಲಿದೆ. ಈ ಎರಡೂ ಉತ್ಪನ್ನಗಳು ಫ್ಲಿಪ್‌ಕಾರ್ಟ್, ಮಿಂತ್ರಾ, ಕ್ರೋಮಾ ಮತ್ತು ವಿಜಯ್ ಸೇಲ್ಸ್‌ನಲ್ಲಿ ಲಭ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.