BSY ವಿರುದ್ಧ ಪೋಕ್ಸೋ ಕೇಸು: ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ ಆದೇಶ

Team Udayavani, Mar 16, 2024, 12:13 AM IST

BSY ವಿರುದ್ಧ ಪೋಕ್ಸೋ ಕೇಸು: ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ ಆದೇಶ

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಸದಾಶಿವನಗ‌ರ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಡಿಜಿಪಿ ಸೂಚನೆ ಮೇರೆಗೆ ಸಿಐಡಿಗೆ ವರ್ಗಾಯಿಸಲಾಗಿದೆ.

ಬೇಗೂರು ನಿವಾಸಿ 53 ವರ್ಷದ ಮಹಿಳೆ ನೀಡಿದ ದೂರಿನಲ್ಲಿ, ಫೆ. 2ರಂದು ಪುತ್ರಿ ಜತೆ ಬಿಎಸ್‌ವೈ ಅವರ ಮನೆಗೆ ಹೋಗಿದ್ದೆ. ತನ್ನ ಮಗಳ ಮೇಲೆ ಅತ್ಯಾಚಾರವಾಗಿದ್ದು, ಈ ಬಗ್ಗೆ ಎಸ್‌ಐಟಿ ರಚನೆ ಮಾಡಿ ನ್ಯಾಯ ಕೊಡಿಸುವಂತೆ ಅವರನ್ನು ಭೇಟಿಯಾಗಿದ್ದೆವು. ಈ ವೇಳೆ ಯಡಿಯೂರಪ್ಪ ಅವರು ನನ್ನ ಪುತ್ರಿಯನ್ನು ಕೋಣೆಯೊಂದಕ್ಕೆ ಕರೆದೊಯ್ದು ಐದು ನಿಮಿಷ ಮಾತನಾಡಿದ್ದಾರೆ. ಈ ವೇಳೆ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಬಳಿಕ ಕೋಣೆಯಿಂದ ಹೊರ ಬಂದ ಪುತ್ರಿ ಘಟನೆಯನ್ನು ತನ್ನ ಬಳಿ ವಿವರಿಸಿದ್ದಳು. ಬಿಎಸ್‌ವೈ ಅವರನ್ನು ಪ್ರಶ್ನಿಸಿದಾಗ, ಆಕೆಗೆ ಆತ್ಯಾಚಾರ ಆಗಿದೆಯೋ? ಇಲ್ಲವೋ ಎಂಬ ಬಗ್ಗೆ ತಿಳಿಯಲು ಕರೆದೊಯ್ದಿದ್ದೆ ಎಂದರು. ಬಳಿಕ ಬಿಎಸ್‌ವೈ ತಮ್ಮ ಬಳಿ ಕ್ಷಮೆ ಕೇಳಿ, ನಿಮಗೆ ಮೋಸ ಆಗಿರುವ ಬಗ್ಗೆ ನಾನು ಸಹಾಯ ಮಾಡುತ್ತೇನೆಂದು ಹೇಳಿದರು. ಆದರೆ ನನ್ನ ವಿಚಾರವನ್ನು ಹೊರಗಡೆ ತಿಳಿಸಬಾರದು ಎಂದು ಎಚ್ಚರಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ತಾಯಿ ದೂರು ನೀಡಿದ್ದಾರೆ.

ಷಡ್ಯಂತ್ರ: ಜೋಷಿ
ಹುಬ್ಬಳ್ಳಿ: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ರಚಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ವಯಸ್ಸು ಮತ್ತು ವರ್ಚಸ್ಸಿಗೆ ಗೌರವ ಕೊಡಬೇಕು. ಅವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಪೋಕೊÕ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಅವರು ಆರೋಪಮುಕ್ತರಾಗಿ ಹೊರಬರುತ್ತಾರೆ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ್‌ಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಕ್ಕಿದರೆ ನನಗೆ ಅತ್ಯಂತ ಖುಷಿ ಆಗುತ್ತದೆ. ಪ್ರಧಾನಿ ಮೋದಿಗೆ ಬೆಂಬಲ ನೀಡಲು ಯುವಪಡೆ ಸನ್ನದ್ಧವಾಗಿದೆ. ಅದಕ್ಕೆ ಮತ್ತಷ್ಟು ವೇಗ ನೀಡಲು “ದೇಶಕ್ಕಾಗಿ ನನ್ನ ಮತ’ ಅಭಿಯಾನ ಚುರುಕುಗೊಳಿಸಲಾಗುತ್ತಿದೆ. ಶೇ.90 ಹೊಸ ಮತದಾರರು ಮೋದಿ ಪರವಾಗಿದ್ದಾರೆ. ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ ಎಂದರು.

ಕಾನೂನು ಮೂಲಕವೇ ಹೋರಾಟ: ಬಿಎಸ್‌ವೈ
ಬೆಂಗಳೂರು: ಉಪಕಾರ ಮಾಡಿದವರಿಗೆ ಈ ರೀತಿ ಕಾನೂನಿನ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ನಿರೀಕ್ಷೆ ಮಾಡಿರಲಿಲ್ಲ. ಇರಲಿ ಬಿಡಿ. ಕಾನೂನು ಮೂಲಕವೇ ಹೋರಾಟ ಮಾಡುತ್ತೇನೆ. ಇದರಲ್ಲಿ ರಾಜಕೀಯ ಬೆರೆಸಲು ನಾನು ಇಷ್ಟಪಡುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಪ್ರಕರಣ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದೂ ವರೆ ತಿಂಗಳ ಹಿಂದೆ ನಮ್ಮ ಮನೆಗೆ ಮಹಿಳೆ ಕಣ್ಣೀರು ಹಾಕುತ್ತಾ ಬಂದಿದ್ದರು. ನನಗೆ ಅನ್ಯಾಯವಾಗಿದೆ ನ್ಯಾಯ ಒದಗಿಸಿ ಎಂದು ಕೇಳಿಕೊಂಡಿದ್ದರು. ನಾನೇ ಆ ಮಹಿಳೆಯನ್ನು ನಗರ ಪೊಲೀಸ್‌ ಆಯುಕ್ತರ ಬಳಿ ಕಳುಹಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದೆ. ಈಗ ಯಾರೋ ಒಬ್ಬ ಮಹಿಳೆ ದೂರು ಕೊಟ್ಟಿದ್ದಾರೆ. ಕಾನೂನು ಮೂಲಕವೇ ಹೋರಾಟ ಮಾಡುತ್ತೇನೆ ಎಂದರು.

ಮಹಿಳೆ ನೀಡಿದ ದೂರಿನ ಮೇಲೆ ಮಾಜಿ ಸಿಎಂ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಆ ಮಹಿಳೆ ದೂರನ್ನು ಟೈಪ್‌ ಮಾಡಿ ಕೊಟ್ಟಿದ್ದಾರೆ. ಕೈಯಲ್ಲಿ ಬರೆದು ಕೊಟ್ಟಿಲ್ಲ. ದೂರು ಕೊಟ್ಟ ಕೂಡಲೇ ಬಂಧನ ಮಾಡಲಾಗುವುದಿಲ್ಲ. ತನಿಖೆ ನಡೆಸಿ ಬಳಿಕ ಸತ್ಯ ದೃಢಪಟ್ಟರೆ ಕ್ರಮ ಕೈಗೊಳ್ಳಲಾಗುವುದು. ಮತ್ತೂಂದೆಡೆ ದೂರು ಕೊಟ್ಟ ಮಹಿಳೆಗೆ ಮಾನಸಿಕ ಅಸ್ವಸ್ಥತೆ ಇದೆ ಎಂದೂ ಹೇಳುತ್ತಾರೆ. ಇದೆಲ್ಲವೂ ತನಿಖೆಯಿಂದ ಗೊತ್ತಾಗಲಿದೆ.
– ಡಾ| ಜಿ.ಪರಮೇಶ್ವರ, ಗೃಹ ಸಚಿವ

ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಮ್ಮ ಸರಕಾರದಲ್ಲಿ ಸಮರ್ಥ ಗೃಹಮಂತ್ರಿಯಾಗಿ ಪರಮೇಶ್ವರ್‌ ಇದ್ದಾರೆ. ಅವರು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಈ ವಿಚಾರವಾಗಿ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಈ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ.
-ಡಿ.ಕೆ.ಶಿವಕುಮಾರ್‌, ಡಿಸಿಎಂ

ಟಾಪ್ ನ್ಯೂಸ್

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್‌?

Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್‌?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

5-ptr

Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.