Mulki: ಕಾರು ಡಿವೈಡರ್ಗೆ ಢಿಕ್ಕಿ; ಚಾಲಕ ಅಪಾಯದಿಂದ ಪಾರು
Team Udayavani, Mar 16, 2024, 1:56 AM IST
ಮೂಲ್ಕಿ: ಇಲ್ಲಿಯ ಹಳೆಯಂಗಡಿ ಬಿಲ್ಲವ ಸಂಘದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ಗೆ ಢಿಕ್ಕಿ ಹೊಡೆದು ಸಂಪೂರ್ಣ ಜಖಂ ಗೊಂಡ ಘಟನೆ ಸಂಭವಿಸಿದೆ.
ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಈ ಕಾರನ್ನು ಚಲಾಯಿಸುತ್ತಿದ್ದ ಮಂಗಳೂರಿನ ಪ್ರಶಾಂತ್ ಎಂಬವರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿರಂತರ ಅಪಘಾತ
ಇಲ್ಲಿ ಇತ್ತೀಚೆಗೆ ಹಲವು ಅಫಘಾತಗಳು ನಡೆದಿದ್ದು, ಸಾವು ನೋವು ಉಂಟಾಗಿದೆ. ಇಲ್ಲಿಯ ಪೆಟ್ರೋಲ್ ಬಂಕ್ ಬಳಿ ಪಡುಪಣಂಬೂರು ಅರಮನೆ ರಸ್ತೆ ಕಡೆಯಿಂದ ಬರುವ ಹಾಗೂ ತೋಕೂರು ರಸ್ತೆಗೆ ಹೋಗುವ ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳು ವಿರುದ್ಧ ದಿಕ್ಕಿನಲ್ಲಿ ನಿರಂತರವಾಗಿ ಸಾಗುತ್ತಿವೆ. ಈ ಸ್ಥಳದಲ್ಲಿಯೂ ಅಪಘಾತಗಳು ನಿತ್ಯ ಎಂಬಂತೆ ನಡೆಯುತ್ತಿವೆ. ಇದಕ್ಕೆ ಪೊಲೀಸರು ಕ್ರಮ ಕೈಗೊಳ್ಳಬೇಕೇಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.