Hide and seek Movie: ಅಪಹರಣದ ಸುತ್ತ ಕಣ್ಣಾಮುಚ್ಚಾಲೆ ಆಟ

Team Udayavani, Mar 16, 2024, 11:07 AM IST

Hide and seek Movie: ಅಪಹರಣದ ಸುತ್ತ ಕಣ್ಣಾಮುಚ್ಚಾಲೆ ಆಟ

ಅವನೊಬ್ಬ ಕಿಡ್ನ್ಯಾಪರ್‌ ತನ್ನ ಮೇಲಿನ ಬಾಸ್‌ ಕೊಡುವ ಸಂದೇಶದಂತೆ ಆತ ತನ್ನ ಇಬ್ಬರು ಸಹಚರರ ಜೊತೆ ಶ್ರೀಮಂತ ಕುಟುಂಬದ ಹಿನ್ನೆಲೆಯ ಹುಡುಗಿಯರಿಬ್ಬರನ್ನು ಅಪಹರಿಸುತ್ತಾನೆ. ಮೇಲ್ನೋಟಕ್ಕೆ ಇದೊಂದು ಅಪಹರಣ ಎಂದು ಕಾಣಿಸಿದರೂ, ಅಪಹರಣವಾದ ನಂತರ ನಿಧಾನವಾಗಿ ಅದರ ಹಿಂದಿನ ಉದ್ದೇಶ, ಅದಕ್ಕೆ ಕಾರಣವಾದ ಕಾಣದ ಕೈಗಳು, ಅದರ ಹಿಂದಿನ ನಿಗೂಢ ಜಾಲ ಹೀಗೆ ಒಂದೊಂದೇ ಎಳೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅಪಹರಣಕ್ಕೆ ಕಾರಣ ಯಾರಿರಬಹುದು ಎಂಬ ಗುಮಾನಿ ಒಬ್ಬರತ್ತ ತಿರುಗುತ್ತಿದ್ದಂತೆ, ಎದುರಾಗುವ ಮತ್ತೂಂದು ಟ್ವಿಸ್ಟ್‌ ಅಲ್ಲೇ ಪಕ್ಕದಲ್ಲಿರುವ ಮತ್ತೂಬ್ಬರತ್ತ ತಿರುಗುವಂತೆ ಮಾಡುತ್ತದೆ. ಹೀಗೆ “ಅವರನ್ನ ಬಿಟ್ಟು ಇವರ್ಯಾರು?’ ಎಂದು ಕಣ್ಣಾ-ಮುಚ್ಚಾಲೆ ನಡೆಯುತ್ತಲೇ ಸಿನಿಮಾ ಕ್ಲೈಮ್ಯಾಕ್ಸ್‌ಗೆ ಬಂದು ನಿಲ್ಲುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಹೈಡ್‌ ಆ್ಯಂಡ್‌ ಸೀಕ್‌’ ಸಿನಿಮಾದ ಒಂದು ಎಳೆ.

ಸಿನಿಮಾದ ಹೆಸರೇ ಹೇಳುವಂತೆ “ಹೈಡ್‌ ಆ್ಯಂಡ್‌ ಸೀಕ್‌’ ಒಂದು ಕಿಡ್ಯಾéಪಿಂಗ್‌ ಮಾಫಿಯಾ ಮತ್ತು ಅದನ್ನು ಬೇಧಿಸಲು ಹೊರಡುವ ಪೊಲೀಸರ ನಡುವೆ ನಡೆಯುವಂಥ ಕಣ್ಣಾ-ಮುಚ್ಚಾಲೆ ಆಟದ ಸುತ್ತ ನಡೆಯುವ ಸಿನಿಮಾ. ಒಂದು ಅಪಹರಣದ ಕಥೆಯನ್ನು ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಶೈಲಿಯಲ್ಲಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ಪುನೀತ್‌ ನಾಗರಾಜು. ಸಿನಿಮಾದ ಕಥೆಗೆ ತಕ್ಕಂತೆ ಚಿತ್ರಕಥೆಗೂ ಇನ್ನಷ್ಟು ಓಟ ಸಿಕ್ಕಿದ್ದರೆ, “ಹೈಡ್‌ ಆ್ಯಂಡ್‌ ಸೀಕ್‌’ ಗೇಮ್‌ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುವ ಸಾಧ್ಯತೆಗಳಿದ್ದವು.

ಇನ್ನು ನಾಯಕ ನಟ ಅನೂಪ್‌ ರೇವಣ್ಣ ಡಬಲ್‌ ಶೇಡ್‌ನ‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆಯಲ್ಲಿರುವ ಪಾತ್ರಕ್ಕೆ ತಕ್ಕಂತೆ ತುಂಬ ಗಂಭೀರವಾದ ಅಭಿನಯ ಅನೂಪ್‌ ಅವರದ್ದು. ನಾಯಕಿ ಧನ್ಯಾ ರಾಮಕುಮಾರ್‌ ಶ್ರೀಮಂತ ಕುಟುಂಬ ಹುಡುಗಿಯಾಗಿ ತೆರೆಮೇಲೆ ಲವಲವಿಕೆಯ ಅಭಿನಯ ನೀಡಿದ್ದಾರೆ. ಉಳಿದಂತೆ ಕೃಷ್ಣ ಹೆಬ್ಟಾಳೆ, ರಾಜೇಶ್‌ ನಟರಂಗ, ಬಲರಾಜವಾಡಿ, ಅರವಿಂದ ರಾವ್‌, ಮೈತ್ರಿ ಜಗ್ಗಿ ಮತ್ತಿತರರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನಿಮಾದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಪೂರಕವಾಗಿದ್ದು, ಸಂಕಲನ ಮತ್ತು ಹಾಡುಗಳ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬ ಹುದಿತ್ತು. ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಸಿನಿಮಾ ಗಳನ್ನು ಇಷ್ಟಪಡುವವರು ಒಮ್ಮೆ “ಹೈಡ್‌ ಆ್ಯಂಡ್‌ ಸೀಕ್‌’ ಕಡೆಗೆ ಮುಖ ಮಾಡಬಹುದು.

ಟಾಪ್ ನ್ಯೂಸ್

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.