Kerebete Movie Review: ಗ್ರಾಮೀಣ ಸೊಗಡಿನಲ್ಲಿ ಅರಳಿದ ಸೊಬಗು


Team Udayavani, Mar 16, 2024, 11:12 AM IST

Kerebete Movie Review: ಗ್ರಾಮೀಣ ಸೊಗಡಿನಲ್ಲಿ ಅರಳಿದ ಸೊಬಗು

ಮಲೆನಾಡ ಸೊಗಡು, ಹಸಿರಿನ ಸೊಬಗು, ನಿಧಾನವಾಗಿ ಕಣ್ಮರೆಯಾಗುತ್ತಿರುವ “ಕೆರೆಬೇಟೆ’ ಎಂಬ ಗ್ರಾಮೀಣ ಸಂಸ್ಕೃತಿ, ಅಂಟಿಗೆ-ಪಿಂಟಿಗೆ ಪದಗಳ ಲಾಲಿತ್ಯ, ನಡುವೆ ಯೊಂದು ನವಿರಾದ ಪ್ರೇಮಕಥೆ, ಅದರ ಹಿಂದೆ ಕಾಣದ ಕ್ರೌರ್ಯದ ಅಟ್ಟಹಾಸ, ಬಡಜೀವಗಳ ವೇದನೆ, ಜಾತಿ ವೈಷಮ್ಯ ಹೀಗೆ ನಮ್ಮ ನಡುವೆಯೇ ಬೆರೆತು ಹೋದ ಒಂದಷ್ಟು ವಿಷಯಗಳನ್ನು ಪೋಣಿಸಿ ಅದೆಲ್ಲವನ್ನೂ ಸುಂದರ ದೃಶ್ಯ ಕಾವ್ಯದಂತೆ ತೆರೆಮೇಲೆ ತೆರೆದಿಡುವ “ಚಿತ್ರ’ಣವೇ ಈ ವಾರ ಬಿಡುಗಡೆಯಾಗಿ ತೆರೆಗೆ ಬಂದಿರುವ “ಕೆರೆಬೇಟೆ’ ಸಿನಿಮಾ.

ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಆಚರಣೆಯಲ್ಲಿರುವ “ಕೆರೆಬೇಟೆ’ ಎಂಬ ವಿಭಿನ್ನ ಕ್ರೀಡಾ ಸಂಸ್ಕೃತಿಯನ್ನು ಅನಾವರಣ ಮಾಡುತ್ತಾ¤ ತೆರೆದುಕೊಳ್ಳುವ ಸಿನಿಮಾದ ಕಥೆಯ ಆರಂಭದಲ್ಲಿಯೇ ಯಾರಿಗೂ ಹೆದರದ, ಯಾರಿಗೂ ತಲೆಬಾಗದ,  ಕಳ್ಳನಾಟ ಕುಯ್ದು ಜೈಲುಪಾಲಾಗಿದ್ದ ಹುಲಿಮನೆ ನಾಗ (ನಾಯಕ)ನ ಆಗಮನವಾಗುತ್ತದೆ. ಊರಿನವರ ಅಸಹನೆಗೆ ಗುರಿಯಾಗಿರುವ, ರೋಷಾವೇಶವನ್ನೆ ಮೈ ತುಂಬಿಕೊಂಡಿ ಕೊಂಡಿರುವ “ಮನೆಹಾಳ’ ನಾಗನ ಬದುಕಿಗೆ ನಿಧಾನವಾಗಿ ಮೀನಾ (ನಾಯಕಿ) ಅಡಿಯಿಡುತ್ತಾಳೆ. ಇಬ್ಬರ ನಡುವೆ ಪ್ರೀತಿ ಮೂಡಿ, ಈ ವಿಷಯ ಕುಟುಂಬದವರಿಗೆ ತಿಳಿಯುವ ಹೊತ್ತಿಗೆ ಕಥೆಯಲ್ಲೊಂದು ಅನಿರೀಕ್ಷಿತ ತಿರುವು ಸಿಗುತ್ತದೆ. ಆನಂತರ ನಡೆಯುವುದೆಲ್ಲವೂ ನೋಡುಗರು ಊಹಿಸಲಾಗದಂಥ ಸನ್ನಿವೇಶಗಳು.

ಮಲೆನಾಡು ಸಂಸ್ಕೃತಿಯ ಜೊತೆಗೆ ಒಂದು ಲವ್‌ಸ್ಟೋರಿ ಯನ್ನು ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ “ಕೆರೆಬೇಟೆ’ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ರಾಜಗುರು. ನವಿರಾದ ಹಾಡು, ಕೂತಲ್ಲೇ ಕಚಗುಳಿಯಿಡುವ ಕಾಮಿಡಿ, ರಗಡ್‌ ಎನಿಸುವಂಥ ಪಾತ್ರಗಳು, ಭರ್ಜರಿ ಆ್ಯಕ್ಷನ್‌, ಮಾಸ್‌ ಡೈಲಾಗ್ಸ್‌ ಹೀಗೆ ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಅಂಶಗಳನ್ನು ಇಟ್ಟುಕೊಂಡು ಪಕ್ಕಾ ಗ್ರಾಮೀಣ ಸೊಗಡಿನ ಕಥೆಯನ್ನು ಮೂಲಕ ಪ್ರೇಕ್ಷಕರ ಮುಂದಿಡುವ ಪ್ರಯತ್ನದಲ್ಲಿ ಚಿತ್ರತಂಡ ಬಹುತೇಕ ಯಶಸ್ವಿಯಾಗಿದೆ.

ನಾಯಕ ಗೌರಿಶಂಕರ್‌ ತಮ್ಮ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಈ ಸಿನಿಮಾದಲ್ಲಿ ಸಾಕಷ್ಟು ಮಾಡಿದ್ದಾರೆ. ಮಲೆನಾಡ ಹಳ್ಳಿ ಹುಡುಗನಾಗಿ ತಮ್ಮ ಪಾತ್ರವನ್ನು ಮನ‌ ಮುಟ್ಟುವಂತೆ ಪ್ರೇಕ್ಷಕರಿಗೆ ಒಪ್ಪಿಸಿ ಫ‌ುಲ್‌ ಮಾರ್ಕ್ಸ್ ಪಡೆ ದು ಕೊಳ್ಳುತ್ತಾರೆ. ನಾಯಕಿ ಬಿಂದು ಕೂಡ ಮೊದಲ ನೋಟದಲ್ಲೇ ಇಷ್ಟವಾಗುತ್ತಾರೆ. ನಾಯಕಿ ತಂದೆಯಾಗಿ ಗೋಪಾಲ್‌ ದೇಶಪಾಂಡೆ, ನಾಯಕನ ತಾಯೊಯಾಗಿ ಹರಿಣಿ ಅವರದ್ದು ಎಂದಿನಂತೆ ಅಚ್ಚುಕಟ್ಟಾದ ಅಭಿನಯ. ಉಳಿದಂತೆ ಸಂಪತ್‌, ರಾಕೇಶ್‌ ಪೂಜಾರಿ ಮತ್ತಿತ ರರು ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Democracy-day

Democracy Day: ಕೊಡಗು: 72.2 ಕಿ.ಮೀ. ಅಂತರದ ಮಾನವ ಸರಪಳಿ

Traffic-Jam

Democracy Day: ಮಾನವ ಸರಪಳಿ; ಉಭಯ ಜಿಲ್ಲೆಗಳಲ್ಲಿ ವಾಹನ ಚಾಲಕರು, ಸಾರ್ವಜನಿಕರು ಹೈರಾಣು!

Udupi1

International Democracy Day: ಉಡುಪಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಮಿಕ್ಕಿ ಮಂದಿ ಭಾಗಿ

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

1-mmmm

PM Modi ಕಿಡಿ ; ರೊಹಿಂಗ್ಯಾ ಜತೆ ಜೆಎಂಎಂ ಶಾಮೀಲಾಗಿದೆ

1-weewqeqwe

Bihar;ಹೊಲಕ್ಕೆ ನುಗ್ಗಿದ ರೈಲು ಎಂಜಿನ್‌: ನೆಟ್ಟಿಗರ ಕಟು ಟೀಕೆ

Malpe

Holiday: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ತಡೆಬೇಲಿ ದಾಟಿ ನೀರಿನಾಟದಲ್ಲಿ ನಿರತ ಪ್ರವಾಸಿಗರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

deepak subramanya’s Mr Rani movie

Kannada Movie: ಮಿ.ರಾಣಿ ಎಂದ ದೀಪಕ್‌ ಸುಬ್ರಹ್ಮಣ್ಯ

Kiran raj

Ronny: ಗಿಮಿಕ್‌ ಅಗತ್ಯ ನನಗಿಲ್ಲ…: ಅಪಘಾತ ಹಿನ್ನೆಲೆಯಲ್ಲಿ ಕಿರಣ್‌ ರಾಜ್‌ ಮಾತು

simha roopini Kannada movie

Simha Roopini; ಹಾಡಿನಲ್ಲಿ ʼಸಿಂಹ ರೂಪಿಣಿ’

Abhimanyu Kashinath starrer Ellige Payana Yavudo Daari movie teaser

Abhimanyu Kashinath: ʼಎಲ್ಲಿಗೆ ಪಯಣ ಯಾವುದೋ ದಾರಿ’ ಟೀಸರ್‌ ಬಂತು

Kannada Movie; ಟೀಸರ್‌ ನಲ್ಲಿ ಅಸುರರು

Kannada Movie; ಟೀಸರ್‌ ನಲ್ಲಿ ಅಸುರರು

MUST WATCH

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

ಹೊಸ ಸೇರ್ಪಡೆ

train-track

Landslide: ತುರ್ತು ಬ್ರೇಕ್‌ ಹಾಕಿದ ಕಾರಣ ತಪ್ಪಿದ ರೈಲು ದುರಂತ

Democracy-day

Democracy Day: ಕೊಡಗು: 72.2 ಕಿ.ಮೀ. ಅಂತರದ ಮಾನವ ಸರಪಳಿ

1-ghhh

ಹೃದಯಾಘಾತ: ಶಾಲೆಯಲ್ಲೇ 3ನೇ ತರಗತಿ ವಿದ್ಯಾರ್ಥಿನಿ ಸಾ*ವು

Traffic-Jam

Democracy Day: ಮಾನವ ಸರಪಳಿ; ಉಭಯ ಜಿಲ್ಲೆಗಳಲ್ಲಿ ವಾಹನ ಚಾಲಕರು, ಸಾರ್ವಜನಿಕರು ಹೈರಾಣು!

CBI

Trainee doctor ಹ*ತ್ಯೆ ಕೇಸು: ಮಾಜಿ ಪ್ರಿನ್ಸಿ ಸಂದೀಪ್‌ 17ರ ವರೆಗೆ ಸಿಬಿಐ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.