Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?
ವಿಕಾಸದ ಬೆಳಕು ಹರಿಸುತ್ತಿರುವ ಮುಖ್ಯ ಕಾರ್ಯಾಲಯ...
Team Udayavani, Mar 16, 2024, 12:56 PM IST
ರಾಜಕೀಯ ಶಾಸ್ತ್ರದ ಆಸಕ್ತಿ ಹೊಂದಿರುವಂತಹ ನನ್ನಂತವರಿಗೆ ಕಾಶ್ಮೀರ ಪ್ರವಾಸದ ಮುಖ್ಯ ಉದ್ದೇಶ ಬರೇ ಕಾಶ್ಮೀರದ ಪ್ರಕೃತಿಯ ಮಡಿಲ ಸೌಂದರ್ಯತೆಯನ್ನು ಸವಿಯುವುದು ಮಾತ್ರವಲ್ಲ ಇದರ ಜೊತೆಗೆ ಅವಳಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದ ಬೇಸಿಗೆ ಕಾಲದ ರಾಜಧಾನಿ ಅನ್ನಿಸಿ ಕೊಂಡ ಲಾಲ್ ಚೌಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ “ಕಾಶ್ಮೀರ ಶಾಸನ ಸಭೆಯ” ಸ್ಥಿತಿ ಗತಿ ಹೇಗಿದೆ ಮತ್ತು ಇದಕ್ಕೆ ತಾಗಿಕೊಂಡಿರುವ ಅಭಿವೃದ್ಧಿಯ ವಿಕಾಸ ಸೌಧ ಅನ್ನಿಸಿಕೊಂಡ ಸೆಕ್ರೆಟೇರಿಯೇಟ್ ಕಾರ್ಯ ವೈಖರಿ ಹೇಗಿದೆ ಅನ್ನುವುದನ್ನು ವೀಕ್ಷಿಸ ಬೇಕೆಂಬ ಕುತೂಹಲ ಬರುವುದು ಸ್ವಾಭಾವಿಕ.
ಕಾಶ್ಮೀರ ಸರ್ಕಾರದ ಸೆಕ್ರೆಟರಿಯೇಟ್ ವಿಭಾಗದ ಅಧಿಕಾರಿಗಳ ಸಹಾಯ ಪಡೆದುಕೊಂಡು ಮೊದಲು ನೇರವಾಗಿ ಪ್ರವೇಶ ಮಾಡಿದ್ದು ಕಾಶ್ಮೀರದ ಸೆಕ್ರೆಟರಿಯೇಟ್ ಪ್ರಾಂಗಣಕ್ಕೆ.ಆರು ಅಂತಸ್ತಿನ ಭವ್ಯ ಕಟ್ಟಡ.ಮೂರನೇ ಮಹಡಿಯಲ್ಲಿ ಮುಖ್ಯ ಕಾರ್ಯದಶಿ೯ಗಳ ಕೊಠಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಡಳಿತ ಕಛೇರಿ ಐದನೇ ಮಹಡಿಯಲ್ಲಿ ಇದೆ.
ನಮ್ಮ ವಿಕಾಸ ಸೌಧಕ್ಕೆ ಜನ ನುಗ್ಗುವ ತರದಲ್ಲಿ ಸಾರ್ವಜನಿಕರ ತಿರುಗಾಟ ತುಂಬಾ ಕಡಿಮೆ. ಕಟ್ಟಡದ ಸುತ್ತಮುತ್ತ ಭದ್ರ ಕಾವಲು ಪಡೆ ಇದೆ. ಅಧಿಕಾರಿಗಳ ಜೊತೆಗೆ ಹೇೂದ ಕಾರಣ ನಮ್ಮ ಪ್ರವೇಶ ಸುಗಮವಾಗಿತ್ತು.
ಅಭಿವೃದ್ಧಿ ಖಾತೆಯ ಪ್ರಧಾನ ಕಾರ್ಯ ದಶಿ೯ಗಳ ಆಡಳಿತದ ಕಚೇರಿಯಲ್ಲಂತೂ ನಮಗೆ ರಾಜಾತಿಥ್ಯ.ಕಾರಣ ನಮ್ಮವರೇ ಅಲ್ಲಿನ ಹಿರಿಯ ಪ್ರಧಾನ ಕಾರ್ಯದರ್ಶಿ. ನಾವು ಕರ್ನಾಟಕದಿಂದ ಬಂದಿದ್ದೇವೆ ಅನ್ನುವುದು ತಿಳಿದ ತಕ್ಷಣವೇ ನಮ್ಮನ್ನು ಕೂರಿಸಿ ಉಪಚರಿಸಿದ್ದು ಮಾತ್ರವಲ್ಲ ಅಲ್ಲಿನ ಅಧಿಕಾರಿಗಳು ಇಡೀ ಆಡಳಿತದ ಕುರಿತಾಗಿ ಮಾಹಿತಿ ನೀಡಿದ್ದು ಮಾತ್ರವಲ್ಲ ಕಾಶ್ಮೀರದ ಅಭಿವೃದ್ಧಿಯ ಯೇೂಜನೆಯ ಚಿತ್ರಣವನ್ನೆ ನಮ್ಮಮುಂದೆ ತಂದಿಟ್ಟರು.
ಅನಂತರದಲ್ಲಿ ನಾವು ನೇರವಾಗಿ ಪ್ರವೇಶ ಮಾಡಿದ್ದು ಕಾಶ್ಮೀರ ವಿಧಾನ ಸೌಧದ ಸಂಕಿರಣ.ಅಲ್ಲಿನ ಚಿತ್ರಣ ಸಂಪೂಣ೯ ಭಿನ್ನವಾಗಿತ್ತು.ಎಲ್ಲೊ ಬೆರಳೆಣಿಕೆಯಷ್ಟು ಸಿಬ್ಬಂದಿಗಳು ಕೂತಿದ್ದರು ಅನ್ನುವುದಕ್ಕಿಂತ ತಿರುಗಾಡುತ್ತಿದ್ದರು..ಶಾಸನ ಸಭೆ ನಡೆಯುವ ಹಾಲ್ ಬಾಗಿಲಿಗೆ ಬೀಗ ಹಾಕಿದ್ದು ಕಾಣತಿತ್ತು. ಶಾಸನ ಸಭೆ ಬೆಳಕು ಕಾಣದೆ ಆರೇಳು ವರುಷಗಳು ಕಳೆದು ಹೇುಾಯಿತು ಅನ್ನುವುದನ್ನು ಅಲ್ಲಿನ ಬಾಗಿಲಿಗೆ ಜಡಿದ ಬೀಗಗಳೆ ಸಾರಿ ಹೇಳುವಂತಿದೆ.ಹೊರಗಡೆ ಬಾಗಿಲಿನ ಗೇೂಡೆಗಳ ಮೇಲೆ ತೂಗು ಹಾಕಿದ ನಾಮಫಲಕಗಳು..”ನಾನು ಎಸೆಂಬ್ಲಿ ಹಾಲ್ ;” “ನಾನು ಮುಖ್ಯ ಮಂತ್ರಿ ಕಛೇರಿ “; ನಾನು ಸ್ಪೀಕರ್ ಕೊಠಡಿ.”.ಅನ್ನುವುದಕ್ಕೆ ದಾರಿತೇೂರಿಸುವಂತಿದೆ ಬಿಟ್ಟರೆ ಒಂದೇ ಒಂದು ನರಪಿಳ್ಳೆ ಅಲ್ಲಿಲ್ಲ.
ಒಂದು ಪಕ್ಕದ ಮೂಲೆ ಕೇೂಣೆಯಲ್ಲಿ ವಿಧಾನ ಸಭಾ ಕಾರ್ಯದರ್ಶಿಗಳು ಕೂತಿರುವುದು ಕಾಣುತ್ತದೆ..ಅವರು ನಮ್ಮನ್ನು ನೇೂಡಿದ ತಕ್ಷಣವೇ ನಮ್ಮನ್ನುಕರೆದು ಪರಿಚಯಿಸಿ ಮಾತನಾಡಿಸಿ ಕಳುಹಿಸಿ ಕೊಟ್ಟರು. ಇದಿಷ್ಟು ಒಳಗಿನ ಒಂದಿಷ್ಟು ರಾಜಕೀಯ ಚಿತ್ರಣವಾದರೆ ಹೊರಗಿನ ಚಿತ್ರಣ ಹೇಗಿದೆ ನೇೂಡುವ.
ಕಾಶ್ಮೀರದ ಪ್ರಧಾನ ಕೇಂದ್ರ ಸ್ಥಳ ಶ್ರೀನಗರ.ಈ ಶ್ರೀನಗರದಲ್ಲಿ ಮೊದಲಿನಿಂದಲೂ ಬಹು ಚರ್ಚೆ ಗೆ ಗ್ರಾಸವಾದ ಸ್ಥಳವೆಂದರೆ ಲಾಲ್ ಚೌಕ್.ಇಲ್ಲಿನ ಇತಿಹಾಸವೆಂದರೆ 2019ರ ತನಕ ಈ ಚೌಕದಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿದ್ದೇ ಇಲ್ಲ.ಆದರೆ ಸಂವಿಧಾನದಲ್ಲಿ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ವಿಧಿ 370 ಮತ್ತು 35 (ಅ) 2019ರಲ್ಲಿ ರದ್ದುಗೊಳಿಸಿದ ಮೇಲೆ ಭಾರತದ ತ್ರಿವರ್ಣ ಧ್ವಜ ಪ್ರತಿನಿತ್ಯ ಇಲ್ಲಿ ಹಾರಾಡುತ್ತಿದೆ ರಾರಾಜಿಸುತ್ತಿದೆ.ಎಲ್ಲಿಯವರೆಗೆ ತ್ರಿವರ್ಣ ಗಳು ರಾರಾಜಿಸುತ್ತಿವೆ ಅಂದರೆ ರಾತ್ರಿಯ ಹೊತ್ತಿನಲ್ಲಿ ಮುಖ್ಯ ರಸ್ತೆಯ ಬದಿಯಲ್ಲಿ ಹಾಕಿರುವ ಡೆಕೇೂರೆಟ್ಯೂ ಲೈಟ್ ಗಳುಕೂಡಾ ತ್ರಿವರ್ಣ ಗಳನ್ನೆ ಪ್ರತಿಫಲಿಸುತ್ತಿವೆ.ಇದು ನಾವು ಕಾಣುವ ಕಾಶ್ಮೀರ ನೆಲದ ಬದಲಾವಣೆ.
ನಮ್ಮ ಹಿರಿಯ ರಾಜಕಾರಣಿಗಳು ಅನ್ನಿಸಿಕೊಂಡವರು ಎಲ್ಲಿ ವೈಶಂಪಾಯನ ಸರೇೂವರದಲ್ಲಿ ಅಡಗಿರಬಹುದು ಎಂದು ಹುಡುಕಿಕೊಂಡು ಶ್ರೀನಗರವನ್ನೆ ಸುತ್ತಿ ನೇೂಡಿದಾಗ ಅವರ ಸಿರಿವಂತಿಕೆಯನ್ನು ಸಾರುವ ಏಳು ಸುತ್ತಿನ ಕೇೂಟೆಯ ಭವ್ಯ ಬಂಗಲೆಗಳು ಜನರಿಲ್ಲದೆ ಬಿಕೊ ಅನ್ನುವ ಪರಿಸ್ಥಿತಿ. ಸದ್ಯಕ್ಕಂತೂ ಅವರೆಲ್ಲರೂ ದೇಶದ ರಾಜಧಾನಿಯತ್ತ ವಲಸೆ ಹೇೂಗಿದ್ದಾರೆ ಅನ್ನುವ ಸುದ್ದಿ. ಒಂದು ಕಾಲದಲ್ಲಿ”ನಾನೇ ರಾಷ್ಟ್ರಪತಿ ನನ್ನ ಮಗನೇ ಪ್ರಧಾನಿ ಎಂದು ಘೇೂಷಿಸಿಕೊಂಡ ಅಪ್ಪಮಗರನ್ನು ಕಾಶ್ಮೀರದಲ್ಲಿ ಹುಡುಕಿ ನೇೂಡುವುದೇ ಅತೀ ದೊಡ್ಡ ಸಾಹಸ.
|ಹಾಗಾದರೆ ಅಲ್ಲಿನ ಜನರ ಮನಸ್ಸು ಏನು ಹೇಳುತ್ತದೆ.?ಸದ್ಯಕ್ಕಂತೂ ರಾಜಕಾರಣಿಗಳ; ಚುನಾವಣೆಗಳ;ಹೇೂರಾಟಗಳ ಬಾಂಬ್ ಸಿಡಿಲುಗಳ ಪಿಡುಗಿನಿಂದ ದೂರವಿದ್ದು ನೆಮ್ಮದಿಯಲ್ಲಿ ಇದ್ದಾರೆ. ಹಾಗಂತ ಅಲ್ಲಿನ ಜನ ತಮಗೆ ಜನಪ್ರತಿನಿಧಿ ಸರ್ಕಾರದ ವ್ಯವಸ್ಥೆ ಬೇಡ ಅನ್ನುವ ಮನ ಸ್ಥಿತಿ ಇಲ್ಲ..ಜಾತಿ ಮತ ಧರ್ಮ ಮೀರಿ ಸರ್ವರನ್ನೂ ಸಮ ಭಾವ ಸಮ ಚಿತ್ತದಿಂದ ಕಾಣುವ ಅಭಿವೃದ್ಧಿ ಪರವಾದ ಸರಕಾರ ಬೇಕು ಅನ್ನುವ ನಿರೀಕ್ಷೆಯಲ್ಲಿ ಇರುವುಂದತೂ ಸತ್ಯ.
*ಲೇಖಕರು:ಪ್ರತ್ಯಕ್ಷ ದಶಿ೯ :ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?
Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…
Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ
Box Office: ದೀಪಾವಳಿಗೆ ರಿಲೀಸ್ ಆದ 8 ಸಿನಿಮಾಗಳಲ್ಲಿ ಗೆದ್ದವರು ಯಾರು? ಸೋತವರು ಯಾರು?
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.