Lok Sabha Election: ಈಶ್ವರಪ್ಪ ಬಿಜೆಪಿ ಪರ ಕೆಲಸ ಮಾಡುವ ವಿಶ್ವಾಸವಿದೆ: ಆರಗ ಜ್ಞಾನೇಂದ್ರ
Team Udayavani, Mar 16, 2024, 6:52 PM IST
ಶಿವಮೊಗ್ಗ:ಮಾಜಿ ಸಚಿವ ಈಶ್ವರಪ್ಪ ಸಿಟ್ಟು, ಆವೇಶದಲ್ಲಿ ಮಾತನಾಡಿದ್ದಾರೆ. ಮೋದಿ, ದೇಶ ಅಂತ ಬದುಕು ಕಟ್ಟಿಕೊಂಡವರು ಅವರು. ಇದನ್ನೆಲ್ಲ ಹೊಟ್ಟೆಯೊಳಗೆ ಇಟ್ಟುಕೊಂಡು ಬಿಜೆಪಿ ಪರ ಚುನಾವಣೆ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಬುದ್ಧಿವಂತರಿದ್ದಾರೆ. ಪಕ್ಷ ಬೆಳೆಸಲು ಅವರ ಯೋಗದಾನ ದೊಡ್ಡದಿದೆ. ಅವರು ಆ ರೀತಿ ಮಾಡುವುದಿಲ್ಲ. ಅವರಿಗೆ ಟಿಕೆಟ್ ತಪ್ಪಲು ಬೇರೆ ಕಾರಣ ಇದೆ. ಅದನ್ನು ಇದರ ಜತೆ ಮಿಕ್ಸ್ ಮಾಡಲು ಆಗಲ್ಲ. ಅವರ ಜತೆ ಹಿರಿಯರು ಮಾತನಾಡುತ್ತಾರೆ. ಸಮಸ್ಯೆ ಬಗೆಹರಿಯುತ್ತದೆ. ನಾನು ಅವರ ಮನೆಗೆ ಹೋಗಿದ್ದೆ. ನಾನು ಅವರಿಗಿಂತ ವಯಸ್ಸಿನಲ್ಲಿ ಕಿರಿಯ. ಅವರ ಜತೆ ಬೆಳೆದಿದ್ದೇನೆ. ನಾನು ಏನು ಮಾಡಬಹುದು ಅದನ್ನು ಮಾಡಿದ್ದೇನೆ. ಇಲ್ಲೇ ಇರುವಂತೆ ಹೇಳಿದ್ದೇನೆ ಎಂದರು.
ಈಶ್ವರಪ್ಪ ಪಕ್ಷೇತರರಾಗಿ ಸ್ಪರ್ಧಿಸಲ್ಲ: ಚನ್ನಬಸಪ್ಪ
ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ನಂಬಿಕೆ ಇಲ್ಲ. ಅವರು ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಹೀಗೆ ಹೇಳಿದ್ದಾರೆ ಅಷ್ಟೇ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಪಕ್ಷಕ್ಕೆ ಪರಿಹಾರ ಕೊಡುವವರು. ಪಕ್ಷಕ್ಕೆ ಸಮಸ್ಯೆ ಮಾಡುತ್ತಾರೆ ಅನ್ನಿಸುವುದಿಲ್ಲ. ಅವರ ಜತೆ ರಾಜ್ಯ, ರಾಷ್ಟ್ರೀಯ ನಾಯಕರು ಮಾತನಾಡುತ್ತಾರೆ. ಅವರು ಪಕ್ಷದ ವಿರುದ್ಧ ನಡೆದುಕೊಳ್ಳುವುದಿಲ್ಲ ಅನ್ನುವ ವಿಶ್ವಾಸ ಇದೆ. ಎಂತೆಂಥಾ ಪರಿಸ್ಥಿತಿ ಬಂದಾಗಲೂ ಅವರು ಬಿಜೆಪಿ ಬಿಟ್ಟಿಲ್ಲ. ಅವರ ನೋವಿಗೆ ಸ್ಪಂದನೆ ಮಾಡಲು ನಾನು ಸಣ್ಣವನು. ಅವರು ನಮ್ಮ ಪಕ್ಷದಲ್ಲಿ ಹಿರಿಯರಾಗಿ ಇರುತ್ತಾರೆ. ಹಿರಿಯರ ನೋವಿಗೆ ನಮ್ಮ ಪಕ್ಷದ ನಾಯಕರು ಸಮಾಧಾನ ಮಾಡುತ್ತಾರೆ. ಮೋದಿ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ಈಶ್ವರಪ್ಪ ಮೋದಿ ಕಾರ್ಯಕ್ರಮಕ್ಕೆ ಬರುವ ವಿಶ್ವಾಸ ಇದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್”
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.