Lok Sabha Elections; ರಾಜ್ಯ ಬಿಜೆಪಿಯಲ್ಲಿ ಏರಿದ ಚುನಾವಣಾ ಜೋಶ್
5 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಾಕಿ ; ಕಾರ್ಯಾಚರಣೆ ಆರಂಭಿಸಿದ ವಾರ್‌ರೂಮ್
Team Udayavani, Mar 17, 2024, 6:50 AM IST
ಬೆಂಗಳೂರು: ಮೊದಲ ಪಟ್ಟಿಯಲ್ಲಿ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಉತ್ಸಾಹ ಹೆಚ್ಚಿದ್ದು ಚುನಾವಣಾ ವಾತಾವರಣ ಸೃಷ್ಟಿ ಮಾಡುವುದಕ್ಕೆ ಅಗತ್ಯವಾದ ತಾಲೀಮುಗಳು ವೇಗ ಪಡೆದುಕೊಂಡಿವೆ.
ಜತೆಗೆ ಬಾಕಿ ಉಳಿದಿರುವ 8 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಮಿತ್ರಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಉಳಿದ 5 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಹುತೇಕ ಭಾನುವಾರ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಅಲ್ಲಿಗೆ ಬಿಜೆಪಿ ತನ್ನೆಲ್ಲ 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದಂತೆ ಆಗುತ್ತದೆ. ಇನ್ನೇನಿದ್ದರೂ ಚುನಾವಣೆ ಪ್ರಚಾರದ ಸಿದ್ಧತೆಗಳು, ತಂತ್ರಗಾರಿಕೆ, ಕಾರ್ಯಕರ್ತರ ಸಭೆಗಳಿಗೆ ಚಾಲನೆ ಕೊಟ್ಟು ಪ್ರಚಾರ ಆರಂಭಿಸಲಿದೆ.
ಎರಡು ದಿನಗಳ ಹಿಂದಷ್ಟೇ ಚುನಾವಣಾ ನಿರ್ವಹಣಾ ಸಮಿತಿ ರಚನೆ ಮಾಡಲಾಗಿದ್ದು ಇಡೀ ರಾಜ್ಯದಲ್ಲಿ ನಡೆಯುವ ಚುನಾವಣಾ ಚಟುವಟಿಕೆಗಳ ಮೇಲೆ ನಿಗಾ ಇಡುವುದಕ್ಕೆ ರಾಜ್ಯಮಟ್ಟದ “ವಾರ್ ರೂಂ’ ಇಂದಿನಿಂದ ಕಾರ್ಯಾಚರಣೆ ಪ್ರಾರಂಭಿಸಿದೆ.
ತುಮಕೂರು, ಶಿವಮೊಗ್ಗ, ದಾವಣಗೆರೆ, ಕೊಪ್ಪಳದಲ್ಲಿ ಎದುರಾಗಿರುವ ಬಂಡಾಯ ಶಮನಕ್ಕೆ ಕಾರ್ಯತಂತ್ರ ಹೆಣೆಯಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶ, ರೋಡ್ ಶೋ, ಕಾರ್ಯಕರ್ತರ ಜತೆ ಚರ್ಚೆ, ಪ್ರಬುದ್ಧರ ಭೇಟಿ ಇತ್ಯಾದಿ ಪ್ರಕ್ರಿಯೆಗಳಿಗೆ ದಿನಾಂಕ ನಿಗದಿ ಮಾಡಲಾಗುತ್ತಿದೆ.
ಬಿಜೆಪಿಯಲ್ಲಿ ನಡೆಯುತ್ತಿರುವುದೇನು ?
-ಚುನಾವಣಾ ವಾತಾವರಣ ಸೃಷ್ಟಿ
-ರಾಜ್ಯಮಟ್ಟದ ವಾರ್ ರೂಂ ಹಾಗೂ ಚುನಾವಣಾ ಕಾರ್ಯಾಲಯ
-ಪ್ರತಿ ದಿನ ನಿರ್ವಹಣಾ ಸಮಿತಿ ಸಭೆ
-ಜಿಲ್ಲಾ ಮಟ್ಟದ ವಾರ್ ರೂಂ
-ಫಲಾನುಭವಿಗಳ ಸಮಾವೇಶ
-ಜಾತಿ ಸಮಾವೇಶ
-ಕಾರ್ಯಕರ್ತರಿಂದ ಮನೆ ಮನೆ ಭೇಟಿ
-ಶಕ್ತಿ ಕೇಂದ್ರ ಹಾಗೂ ಮಹಾ ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಸಭೆ
-ಬೂತ್ ಶಕ್ತಿ ಕೇಂದ್ರಗಳ ಪುನರುಜ್ಜೀವನ
-ಪೇಜ್ ಪ್ರಮುಖರ ನೇಮಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.