Mother: ಅಮ್ಮ… ತ್ಯಾಗಕ್ಕೆ ಮತ್ತೂಂದು ಹೆಸರು


Team Udayavani, Mar 17, 2024, 12:46 PM IST

4-mother

“ಕುಪುತ್ರೋ ಜಾಯೇತ್‌ ಕ್ವಚಿದಪಿ ಕುಮಾತಾ ನ ಭವತಿ’ ಎಂಬ ಸಂಸ್ಕೃತೋಕ್ತಿ ಕೆಟ್ಟ ಮಕ್ಕಳು ಜನಿಸಬಹುದು ಆದರೆ ತಪ್ಪಿಯೂ ಕೆಟ್ಟ ತಾಯಿ ಇರಲಾರಳು ಎಂಬ ಸಂದೇಶವನ್ನು ತಿಳಿಸುತ್ತದೆ. ಆಶ್ಚರ್ಯವೆಂದರೆ ಕೆಟ್ಟ ಮಕ್ಕಳು ಜನಿಸಬಹುದು ಎಂದರೆ ಹೆಣ್ಣು ಮಗುವೂ ಅದರಲ್ಲಿ ಸೇರಿತು ತಾನೆ? ಆದರೆ ಹೆಣ್ಣು ಮಗು ಮುಂದೆ ತಾಯಿಯರೂಪ ಪಡೆಯುತ್ತಿದ್ದಂತೆ ಅವಳಲ್ಲಿ ಒಳ್ಳೆಯತನ ತುಂಬಿ ದೈವತ್ವ ಪ್ರಾಪ್ತವಾಗುತ್ತದೆ.

ಮತ್ತೂಂದು ಆಶ್ಚರ್ಯಕರ ಅಂಶ ತಾಯಿಯೇಕೆ ಮಕ್ಕಳನ್ನು ಪ್ರಾಣಕ್ಕಿಂತ ಹೆಚ್ಚಿಗೆ ಪ್ರೀತಿಸು ವಳು? ತಂದೆ, ಅಣ್ಣ, ತಂಗಿ, ಸ್ನೇಹಿತರು ಹೀಗೆ ಎಲ್ಲ ಸಂಬಂಧಕ್ಕಿಂತ ತಾಯಿಯ ಪ್ರೀತಿ ಹಿರಿದೇಕೆ? ಅಥವಾ ಹುಟ್ಟಿನಿಂದ ಸಾಯುವ ವರೆಗೆ ಇರುವ ಎಲ್ಲ ಸಂಬಂಧಗಳ ಒಟ್ಟು ಪ್ರೀತಿಗೂ ತಾಯಿಯ ಪ್ರೀತಿಗೂ ಸರಿಸಾಟಿಯಾಗದು ಏಕೆ? ಇದಕ್ಕೆ ಕಾರಣ ಪ್ರತಿಯೊಬ್ಬರೂ ಈ ಪ್ರಪಂಚಕ್ಕೆ ಬರುವ ಮೊದಲು ತಾಯಿಗರ್ಭವೆಂಬ ಪ್ರಪಂಚದಲ್ಲಿರುವವರು.

ಗರ್ಭಾಂಕುರವಾಗುತ್ತಿದ್ದಂತೆ ಹೆಣ್ಣು ತಾಯಿಯ ದೀಕ್ಷೆ ಪಡೆಯುತ್ತಾಳೆ. ಅಲ್ಲಿಂದ ಪ್ರಸವದ ವರೆಗೆ ಯಾರೂ ಅನುಭವಿಸದ ರೋಮಾಂಚನವನ್ನು ಕ್ಷಣಕ್ಷಣ ಪಡೆಯುತ್ತಾಳೆ. ಅಲ್ಲಿಂದಲೇ ಅವರ್ಣನೀಯ ಸಂಬಂಧ ಬೆಸೆಯುತ್ತದೆ. 50ಕ್ಕೂ ಹೆಚ್ಚು ಮೂಳೆಗಳು ಏಕಕಾಲದಲ್ಲಿ ಮುರಿದಾಗ ಆಗುವ ನೋವಿಗಿಂತ ಹೆಚ್ಚು ನೋವನ್ನುಂಡು ಮಗುವಿಗೆ ಜನ್ಮ ನೀಡುತ್ತಾಳೆ.

ಆ ಪ್ರಸವಯಾತನೆ ಸಮಯದಲ್ಲಿ ಎಲ್ಲ ತಾಯಂದಿರೂ “ಈ ಮಗುವೇ ಬೇಡ’ ಎಂದು ಗೋಳಾಡುತ್ತಾರೆ. ಆದರೆ ಮಗು ಹುಟ್ಟಿದ ಮರುಕ್ಷಣವೇ “ಈ ಮಗು ಬಿಟ್ಟು ನನಗೇನೂ ಬೇಡ’ ಎಂದು ಪ್ರೀತಿಸುತ್ತಾರೆ. ಎದೆಯಾಮೃತ ಧಾರೆಯೆರೆದು ಪೋಷಿಸುತ್ತಾಳೆ. ತಾಯಿ ಸ್ಥಾನ ಇಷ್ಟೊಂದು ಕಷ್ಟಪಟ್ಟು ಹೆತ್ತ ಮೇಲೆ ಸೃಷ್ಟಿಯಾಗುತ್ತದೆ. ಕಷ್ಟಪಟ್ಟು ಪಡೆದುದೇ ಹೆಚ್ಚು ಇಷ್ಟವಾಗುತ್ತದೆ.

ಹೀಗೆಂದೇ ತಾಯಿ ಅಗಣಿತ ಪ್ರೀತಿ ತೋರುವಳು; ಅವಳ ಮಮತೆಗೆ ಸಾಟಿಯಿಲ್ಲ ಎಂದೆನ್ನಿಸುತ್ತದೆ. ಈ ತಾಯಿ ಮಗುವಿನ ಸಂಬಂಧ ಬೇರಾವ ಸಂಬಂಧದಲ್ಲಿದೆ ಹೇಳಿ? ತಂದೆ, ಅಣ್ಣ, ಅಕ್ಕ, ತಂಗಿ, ಮಾವ, ಇವೆಲ್ಲಾ ಸಂಬಂಧಗಳು ಜನ್ಮದಿಂದ ತಾನಾಗಿಯೇ ಪ್ರಾಪ್ತವಾಗುತ್ತವೆ. ಸ್ನೇಹಿತರನ್ನು ಹುಡುಕಿ ಪಡೆಯುತ್ತೇವೆ. ಹೀಗಾಗಿ ಉಳಿದೆಲ್ಲಾ ಸಂಬಂಧಗಳು ಪುಕ್ಕಟ್ಟೆ ಪ್ರಾಪ್ತವಾಗುತ್ತವೆ.

ತಾಯಿಗೆ ಮಕ್ಕಳೆಂದರೆ ಇಷ್ಟವೆಂಬುದು ತಿಳಿಯಿತು. ಆದರೆ ಎಲ್ಲರಿಗೂ ಅಮ್ಮಾ ಎಂದರೆ ಏಕಿಷ್ಟ? ತಾಯಿಯ ಈ ಪ್ರೀತಿ, ಕರುಣೆ, ಕಾಳಜಿ, ತ್ಯಾಗ, ದುಡಿಮೆ ಮುಂತಾದವುಗಳೆಲ್ಲ ಸಹಜವಾಗಿ ಮತ್ತು ಅನಿವಾರ್ಯವಾಗಿ ಮಕ್ಕಳು ತಾಯಿಯನ್ನು ಪ್ರೀತಿಸುವಂತೆ ಮಾಡುತ್ತವೆ.

ಅಮ್ಮನ ಆ ನಿಸ್ವಾರ್ಥ ಪ್ರೀತಿಯು ಮಕ್ಕಳ ಮೇಲೆ ಪ್ರಭಾವ ಬೀರುತ್ತಾ ಹೋಗುತ್ತದೆ. ಜಗತ್ತೇ ಶತ್ರುವಂತೆ ಕಂಡಾಗಲೂ ತಾಯಿ ಮಾತ್ರ ಆತ್ಮೀಯಳಾಗಿ ಕಾಣುತ್ತಾಳೆ. ಕೆಲವು ಸಂದರ್ಭಗಳಲ್ಲಿ ಕೆಲವು ಸಂಬಂಧಗಳು ಶಿಥಿಲಗೊಳ್ಳುತ್ತಿರುತ್ತವೆ. ಆದರೆ ತಾಯಿ ಸಂಬಂಧ ಸಾರ್ವಾಕಾಲಿಕ.

ತನಗಿಲ್ಲದಿದ್ದರೂ ಮಕ್ಕಳಿಗೆ ಹೊಟ್ಟೆ ತುಂಬ ಊಟ ನೀಡುತ್ತಾಳೆ, ಯಾಕೆಂದರೆ ತಾಯಿಗೆ ಮಕ್ಕಳೇ ಸರ್ವಸ್ವ. ತಾಯಿಯ ಪ್ರೀತಿಯ ಮಹತ್ವದ ಕುರಿತಾಗಿ ಹೇಳುವ ಅದೆಷ್ಟೋ ಹಾಡು, ಕವನ – ಕವಿತೆ, ಚಲನಚಿತ್ರಗಳು ಬಂದಿದ್ದರೂ ತಾಯಿಯ ಪ್ರೀತಿಯನ್ನು ವರ್ಣಿಸಲು ಸಾಲದು. ಹಗಲಿರುಳು ಮಕ್ಕಳ ಏಳಿಗೆಯ ಬಗ್ಗೆ ಯೋಚಿಸುವ ಏಕೈಕ ಜೀವ ಎಂದರೆ ಅದು ತಾಯಿ ಮಾತ್ರ.

ತಾಯಿಯ ಅವರ್ಣನೀಯ ಅಪ್ರತಿಮ ಪ್ರೀತಿಯೇ ಮಗು ತಾಯಿಯನ್ನು ಅನಿವಾರ್ಯವಾಗಿ ಇಷ್ಟಪಡುವಂತೆ ಮಾಡುತ್ತದೆ. ಮಕ್ಕಳ ಪ್ರೀತಿಯೋ ಋಣದ ಭಾರ ತೀರಿಸುವ ವ್ಯಾವಹಾರಿಕ ಪ್ರೀತಿಯಾದರೆ; ತಾಯಿಯದೋ ನಿಸ್ವಾರ್ಥ ಬತ್ತದ ಅಕ್ಕ ರೆಯ ಆಗರ. ತಾಯಿಗೆ ತಾಯಿಯೇ ಉಪಮೇಯ. ಉಳಿದೆಲ್ಲಾ ಮಾತು ಅತ್ಯಲ್ಪ, ಮಾತೃ ವಾತ್ಸಲ್ಯಕ್ಕೆ ಮಿಗಿಲಾದ ಪ್ರೀತಿ ಈ ಭೂಮಿಯ ಮೇಲೆ ಸಿಗಲು ಸಾಧ್ಯವಿಲ್ಲ.

ಶಂಕರ ಸನ್ನಟ್ಟಿ

ಬಾಗಲಕೋಟೆ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1sadgu

Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್‌ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.