Fraud Case; ಕೋಟ, ಬ್ರಹ್ಮಾವರ: ಆನ್ಲೈನ್ ವ್ಯವಹಾರದ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ
Team Udayavani, Mar 18, 2024, 12:24 AM IST
ಕೋಟ: ಆನ್ಲೈನ್ ವ್ಯವಹಾರದ ಹೆಸರಲ್ಲಿ ನಂಬಿಸಿ ಉಳಿತಾಯ ಖಾತೆಯಿಂದ ಲಕ್ಷಾಂತರ ರೂ. ಲಪಟಾಯಿಸಿದ ಮೂರು ಪ್ರತ್ಯೇಕ ಪ್ರಕರಣಗಳು ಕೋಟ, ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಕೋಟ ಬಾರಿಕೆರೆ ನಿವಾಸಿ ಅಶ್ವಿತಾ (35) ಅವರಿಗೆ ಫೇಸುºಕ್ ಖಾತೆಯಿಂದ ಬಜಾಜ್ ಫೈನಾನ್ಸ್ ಹೆಸರಿನಲ್ಲಿ ಲೋನ್ ಬಗ್ಗೆ ಜಾಹೀರಾತು ಬಂದಿದ್ದು, ಅನಂತರ ಓರ್ವ ವ್ಯಕ್ತಿ ಕರೆ ಮಾಡಿ ನಿಮಗೆ 5 ಲಕ್ಷ ರೂ. ಸಾಲ ಮಂಜೂರಾಗಿದೆ ಅದಕ್ಕೆ ಬ್ಯಾಂಕ್ ವಿವರ, ವೈಯಕ್ತಿಕ ಗುರುತು ಚೀಟಿ ಹಾಗೂ ಫೋಟೋ ಒಂದನ್ನು ನೀಡುವಂತೆ ಪಡೆದು ನಂಬಿಸಿ, ಒಟ್ಟು 16 ಬಾರಿ ಗೂಗಲ್ ಪೇ ಮುಂತಾದ ಆ್ಯಪ್ ಮೂಲಕ 2,46,861 ರೂ.ಗಳನ್ನು ಪಡೆದು ವಂಚನೆ ಮಾಡಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೂಟ್ಯೂಬ್ ಚಾನೆಲ್ ಹೆಸರಲ್ಲಿ ವಂಚನೆ
ಬ್ರಹ್ಮಾವರದ ಹೇರೂರು ನಿವಾಸಿ ಸುಜಯ್ ಕುಮಾರ್ (29) ಅವರು ಪೇಟಿಎಂ ಖಾತೆ ಹೊಂದಿದ್ದು, ವಾಟ್ಸಪ್ ಯೂಟ್ಯೂಬ್ ಚಾನೆಲ್ ಪ್ರಮೋಟ್ ಮಾಡುವ ಬಗ್ಗೆ ಮೆಸೇಜ್ ಕಳುಹಿಸಿ, ಅನಂತರ ಯೂಟ್ಯೂಬ್ ಚಾನೆಲ್ ಪ್ರಮೋಟ್ ಮಾಡುವ ಬಗ್ಗೆ ಟಾಸ್ಕ್ ನೀಡುವುದಾಗಿ ನಂಬಿಸಿ 2,30,000 ರೂ. ವಂಚಿಸಲಾಗಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.