Kundapura ಕಣ್ತಪ್ಪಿನಿಂದ ಹಣ ಕಳೆದುಕೊಂಡು ದೂರು ನೀಡಿ ವಂಚನೆಗೀಡಾದ!
Team Udayavani, Mar 18, 2024, 12:33 AM IST
ಕುಂದಾಪುರ: ದೇವಲ್ಕುಂದ ಗ್ರಾಮದ ಪ್ರದೀಪ (33) ಅವರು ಕಣ್ತಪ್ಪಿನಿಂದ ಅನ್ಯಖಾತೆಗೆ ಗೂಗಲ್ ಪೇ ಮೂಲಕ ಹಣ ರವಾನಿಸಿ ಮರಳಿ ಪಡೆಯಲು ಇನ್ಯಾವುದೋ ನಂಬರ್‌ಗೆ ದೂರು ನೀಡಿದಾಗ ಆತನೂ ವಂಚಿಸಿದ ಕುರಿತು ದೂರು ದಾಖಲಾಗಿದೆ.
ಪ್ರದೀಪ ಅವರು ತನ್ನ ಖಾತೆಯಿಂದ ಅಕºರ್ ಅಲಿ ಅವರಿಗೆ ಗೂಗಲ್ ಪೇ ಮೂಲಕ 25,700 ರೂ. ಪಾವತಿ ಮಾಡಿದ್ದು, ಅದು ಅಕºರ್ ಅಲಿ ಅವರ ಸಾಲ ಖಾತೆಗೆ ಹೋದ ಕಾರಣ ಅದನ್ನು ಹಿಂಪಡೆಯಲು ಬಯಸಿದ್ದರು. ಬ್ಯಾಂಕ್ ರಜೆ ಇದ್ದುದರಿಂದ ಗೂಗಲ್‌ನಲ್ಲಿ ಸರ್ಚ್ ಮಾಡಿ ಗೂಗಲ್ ಪೇ ಕಸ್ಟಮರ್ ಕೇರ್ ನಂಬರ್ ಎಂದು ದೊರಕಿದ ನಂಬರಿಗೆ ಕರೆ ಮಾಡಿದ್ದರು.
ಸ್ಪಂದಿಸಿದ ಅಪರಿಚಿತ ವ್ಯಕ್ತಿ 24 ಗಂಟೆಯೊಳಗೆ ಹಣ ಕೊಡಿಸುವುದಾಗಿ ಹೇಳಿದ್ದು, ಮರುದಿನ ಅದೇ ನಂಬರಿನಿಂದ ಪ್ರದೀಪ್ ಅವರಿಗೆ ಕರೆ ಮಾಡಿ ಗೂಗಲ್ ಪೇ ತೆರೆದು ಅಮೌಂಟ್ ಕಾಲಂನಲ್ಲಿ ಮೊಬೈಲ್ ನಂಬ್ರದ ಮೊದಲ 5 ನಂಬರ್ ನಮೂದಿಸಲು ತಿಳಿಸಿದ್ದ. ಆಗ ಪ್ರದೀಪ ಅವರ ಬ್ಯಾಂಕ್ ಖಾತೆಯಿಂದ 76,195 ರೂ. ಹಣ ಒಮ್ಮೆಲೇ ಕಡಿತವಾಗಿ ಮೊಬೈಲ್ 30 ನಿಮಿಷ ಸಂಪೂರ್ಣ ಸ್ತಬ್ಧವಾಯಿತು. ಸ್ನೇಹಿತನ ಮೊಬೈಲ್‌ನಿಂದ ಅಪರಿಚಿತನ ಮೊಬೈಲ್ ಸಂಪರ್ಕಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.