ಮತ್ತಷ್ಟು ಬಾಂಡ್ ರಹಸ್ಯ ಬಯಲು; ಬಿಜೆಪಿಗೆ ಅಗ್ರಸ್ಥಾನ, ಅನಂತರದ ಸ್ಥಾನದಲ್ಲಿ ಟಿಎಂಸಿ
ಫ್ಯೂಚರ್ ಗೇಮಿಂಗ್‌ನಿಂದ ಡಿಎಂಕೆಗೆ ಭರ್ಜರಿ ಹಣ
Team Udayavani, Mar 18, 2024, 7:30 AM IST
ಹೊಸದಿಲ್ಲಿ: ಸಾರ್ವಜನಿಕರಲ್ಲಿ ಭಾರೀ ಕುತೂಹಲ ಕೆರಳಿಸಿರುವ ಚುನಾವಣ ಬಾಂಡ್‌ಗಳ ಕುರಿತಾದ ಮತ್ತೂಂದು ಸುತ್ತಿನ ಮಾಹಿತಿ ಯನ್ನು ಕೇಂದ್ರ ಚುನಾವಣ ಆಯೋಗ ರವಿವಾರ ಬಹಿ ರಂಗಗೊಳಿಸಿದೆ.
ಈ ಮಾಹಿತಿ 2019ರ ಎ. 19ಕ್ಕಿಂತ ಹಿಂದಿನದ್ದು ಎನ್ನಲಾಗಿದೆ. ಕಳೆದ ಶುಕ್ರವಾರ ಬಹಿರಂಗವಾಗಿರುವುದು 2019ರ ಎ.19ರ ಬಳಿಕದ ಮಾಹಿತಿ ಆಗಿತ್ತು.
ಬಾಂಡ್ ಖರೀದಿ ದಾರರು ಮತ್ತು ನಗದು ಮಾಡಿದ ಪಕ್ಷಗಳ ಮಾಹಿತಿ ಯನ್ನು ಚು. ಆಯೋಗ ಮಾ. 14ರಂದು ಬಹಿರಂಗ ಪಡಿಸಿತ್ತು.
ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರ ಎಸ್‌ಬಿಐ ಈ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಿತ್ತು. ರವಿವಾರ ಆಯೋಗ ಬಹಿರಂಗಪಡಿಸಿರುವ ಹೊಸ ದಾಖಲೆಗಳಲ್ಲಿ ಬಾಂಡ್‌ಗಳ ದಿನಾಂಕ, ಮುಖಬೆಲೆ, ಬಾಂಡ್‌ಗಳ ಒಟ್ಟು ಸಂಖ್ಯೆ, ವಿತರಣೆ ಮಾಡಿದ ಎಸ್‌ಬಿಐ ಶಾಖೆಗಳ ಹೆಸರು, ಬಾಂಡ್ ಸ್ವೀಕರಿಸಿದ ದಿನಾಂಕ, ಕ್ರೆಡಿಟ್ ಆದ ದಿನಾಂಕವನ್ನು ನಮೂದಿಸಲಾಗಿದೆ. ಆದರೆ ಬಾಂಡ್‌ಗಳ ವಿಶಿಷ್ಟ ಸಂಖ್ಯೆಯನ್ನು ಇಲ್ಲೂ ನಮೂದಿಸಲಾಗಿಲ್ಲ.
ಇದೇವೇಳೆ 2018ರ ಮಾ. 1ರಿಂದ 2019ರ ಎ. 11ರ ವರೆಗಿನ ಬಾಂಡ್‌ಗಳ ಮಾಹಿತಿ ಬಹಿರಂಗ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಿಟಿಜೆನ್ಸ್ ರೈಟ್ಸ್ ಟ್ರಸ್ಟ್ ಮತ್ತೂಂದು ಅರ್ಜಿ ದಾಖಲಿಸಿದೆ.
ಜೆಡಿಎಸ್‌ಗೆ 89.5
ಕೋಟಿ ರೂ. ದೇಣಿಗೆ
ಜೆಡಿಎಸ್‌ಗೆ 89.75 ಕೋಟಿ ರೂ. ದೇಣಿಗೆ ಚುನಾವಣ ಬಾಂಡ್‌ಗಳ ಮೂಲಕ ಬಂದಿದೆ. ಈ ಪೈಕಿ ಮೇಘಾ ಎಂಜಿನಿಯರಿಂಗ್ 50 ಕೋಟಿ ರೂ. ನೀಡಿದೆ. ಎಂಬೆಸಿ ಗ್ರೂಪ್, ಇನ್ಫೋಸಿಸ್, ಬಯೋಕಾನ್ ದೇಣಿಗೆ ನೀಡಿದ ಇತರ ಕಂಪೆನಿಗಳಾಗಿವೆ.
ದೇಣಿಗೆ ಬಗ್ಗೆ ಚುನಾವಣ ಆಯೋಗಕ್ಕೆ ಪಕ್ಷಗಳ ವಿವರ
ಚುನಾವಣ ಆಯೋಗಕ್ಕೆ ದೇಣಿಗೆ ದಾರರ ಮಾಹಿತಿ ನೀಡಿದ ರಾಜಕೀಯ ಪಕ್ಷಗಳ ಪೈಕಿ ಡಿಎಂಕೆ ಕೂಡ ಒಂದಾಗಿದೆ. ಆದರೆ ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಆಪ್ ದೇಣಿಗೆದಾರರ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ
Jammu-Kashmir: ಕುಪ್ವಾರದಲ್ಲಿ ಸೇನಾ ಕಾರ್ಯಾಚರಣೆ… ಉಗ್ರನ ಹ*ತ್ಯೆ, ಶಸ್ತ್ರಾಸ್ತ್ರ ವಶ
Supreme court: ರಾಜಿ ಮಾಡಿಕೊಂಡರೂ ಲೈಂ*ಗಿಕ ಕಿರುಕುಳ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ…
LMV ಲೈಸನ್ಸ್ ಇದ್ದರೆ ಸರಕು ವಾಹನ ಚಲಾಯಿಸಿ… 7.5 ಟನ್‌ವರೆಗಿನ ವಾಹನ ಓಡಿಸಲು ಅನುಮತಿ
Jammu and Kashmir Assembly: ಕಾಶ್ಮೀರ ವಿಶೇಷ ಸ್ಥಾನಮಾನ ಕೋರಿ ಅಸೆಂಬ್ಲಿಯಲ್ಲಿ ಗಲಾಟೆ
MUST WATCH
ಹೊಸ ಸೇರ್ಪಡೆ
Hagaribommanahalli: ಹಳಿ ದಾಟುತ್ತಿರುವಾಗ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು
Mangalore: ಲೋವರ್ ಬೆಂದೂರ್‌ವೆಲ್-ಕರಾವಳಿ ವೃತ್ತ ರಸ್ತೆ ಅವ್ಯವಸ್ಥೆ
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
Mullikatte: ಟ್ರಕ್ ಬೇ, ವಿಶ್ರಾಂತಿ ಕೊಠಡಿ ಆರಂಭಕ್ಕೆ ಗ್ರಹಣ
Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.