ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ ಪಾದಯಾತ್ರೆ ಕುತ್ತಾರು ದೆಕ್ಕಾಡಿನಲ್ಲಿ ಸಂಪನ್ನ
Team Udayavani, Mar 18, 2024, 11:54 AM IST
ಉಳ್ಳಾಲ: ಸಮಸ್ತ ಹಿಂದೂ ಸಮಾಜದ ಏಕತೆ ಮತ್ತು ಲೋಕ ಕಲ್ಯಾಣಕ್ಕಾಗಿ ವಿಹಿಂಪ ಮಂಗಳೂರು ಆಶ್ರಯದಲ್ಲಿ ಕದ್ರಿ ಶ್ರೀ ಕ್ಷೇತ್ರದಿಂದ ಕುತ್ತಾರು ದೆಕ್ಕಾಡಿನ ಶ್ರೀ ಕೊರಗಜ್ಜನ ಆದಿಕ್ಷೇತ್ರದ ವರೆಗೆ ನಾಲ್ಕನೇ ವರುಷದ ಪಾದಯಾತ್ರೆ “ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ’ ರವಿವಾರ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಕೊರಗಜ್ಜನ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆಯ ಬಳಿಕ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಪಾದಯಾತ್ರೆಯ ಮೂಲಕವೇ ಸನಾತನ ಧರ್ಮವನ್ನು ಸಂಘಟಿಸಲು ಸಾಧ್ಯವಿದ್ದು, ಜಿಲ್ಲೆಯ ವಿವಿಧೆಡೆ ಕೊರಗಜ್ಜನ ಕ್ಷೇತ್ರವನ್ನು ಅಪವಿತ್ರಗೊಳಿಸಿದಾಗ ಹಿಂದೂ ಸಮಾಜವು ಒಗ್ಗಟ್ಟಾಗಿ ಅಜ್ಜನ ಆದಿ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ಸಾತ್ವಿಕ ಹೋರಾಟ ನಡೆಸಿ ಯಶಸ್ವಿಯಾಗಿತ್ತು ಎಂದರು.
ವಿಹಿಂಪ ಮಾಜಿ ಅಧ್ಯಕ್ಷ ಜಗದೀಶ ಶೇಣವ ಮಾತನಾಡಿ, ಹಿಂದೂ ಸಮಾಜದ ಏಕತೆಗಾಗಿ ವಿಹಿಂಪ ಈ ಪಾದಯಾತ್ರೆ ನಡೆಸುತ್ತಿದ್ದು, 10ರಿಂದ 12 ಸಾವಿರ ಜನರು ಭಾಗವಹಿಸುತ್ತಿದ್ದಾರೆ. ಶ್ರೀ ಪಂಜದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟ್ ಸಹಕಾರ ಅಪಾರ ಎಂದರು.
ಗಣ್ಯರಾದ ವಿವೇಕ್ ಶೆಟ್ಟಿ ಬೊಲ್ಯಗುತ್ತು, ಜಯರಾಮ ಶೆಟ್ಟಿ ಕುತ್ತಾರುಗುತ್ತು, ಬಾಲಕೃಷ್ಣ ಸಾಲಿಯಾನ್ ಕಂಪ, ಮಾಯಿಲ, ಶಿವಾನಂದ ಮೆಂಡನ್, ಎಚ್.ಕೆ. ಪುರುಷೋತ್ತಮ, ಗೋಪಾಲ ಕುತ್ತಾರು, ಪ್ರವೀಣ್ ಕುತ್ತಾರು, ರವಿ ಅಸೈಗೋಳಿ, ನಾರಾಯಣ ಕುಂಪಲ, ಜಗದೀಶ್ ಆಳ್ವ ಕುವೆತ್ತಬೈಲು, ಜಯರಾಮ ಭಂಡಾರಿ ಮಾಗಣತ್ತಡಿ, ಮಹಾಬಲ ಹೆಗ್ಡೆ ಮಾಗಣತ್ತಡಿ, ದೇವಿಪ್ರಸಾದ್ ಶೆಟ್ಟಿ, ಜೈಕಿಶನ್ ರೈ, ಶ್ರೀರಾಮ ರೈ, ಪ್ರೀತಮ್ ಶೆಟ್ಟಿ, ರಂಜಿತ್ ಸುಲಾಯ, ವಿದ್ಯಾಚರಣ್ ಭಂಡಾರಿ, ಪ್ರಬಂಧಕ ಬಾಲಕೃಷ್ಣ ರೈ, ಮನೋಜ್ ಹೆಗ್ಡೆ, ಯತೀಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ ಮಾಗಣತ್ತಡಿ, ಕುತ್ತಾರುಗುತ್ತು ರತ್ನಾಕರ ಕಾವ, ದೀಪಕ್ ಶೆಟ್ಟಿ ಕುತ್ತಾರುಗುತ್ತು, ಬೊಲ್ಯ ಗುತ್ತು ವಿನೋದ್ ಶೆಟ್ಟಿ, ಪದ್ಮನಾಭ ಶೆಟ್ಟಿ ಗೇಣಿ ಮನೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.