Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?
ಇಂದು ದಿಲ್ಲಿಯಲ್ಲಿ ಸಿಇಸಿ ಸಭೆ ನಡೆದರೆ ನಾಳೆ ಪಟ್ಟಿ ಪ್ರಕಟ ಸಾಧ್ಯತೆ
Team Udayavani, Mar 19, 2024, 7:15 AM IST
ಬೆಂಗಳೂರು: ಮೈತ್ರಿ ಪಾಲಿನ ಮೂರು ಸೇರಿ ಒಟ್ಟು ಎಂಟು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡುವುದು ಬಿಜೆಪಿ ಪಾಲಿಗೆ ಜಟಿಲವಾಗಿದ್ದು, ಇನ್ನೂ ಎರಡು ದಿನ ವಿಳಂಬವಾಗುವ ಸಾಧ್ಯತೆ ಇದೆ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಟಿಕೆಟ್ ಇತ್ಯರ್ಥಗೊಳಿಸುವುದು ವರಿಷ್ಠರಿಗೆ “ಅನಂತ’ ಸಮಸ್ಯೆಯಾಗಿ ಪರಿಣಮಿಸಿದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರೆಂದು ನಿರ್ಧರಿಸುವುದು ವರಿಷ್ಠರಿಗೆ ತೀವ್ರ ಸಮಸ್ಯೆ ತಂದೊಡ್ಡಿತ್ತು. ತೇಜಸ್ವಿನಿ ಅನಂತಕುಮಾರ್ ಅವರ ಬದಲು ತೇಜಸ್ವಿ ಸೂರ್ಯರಿಗೆ ಎಲ್ಲರಿಗಿಂತ ಕೊನೆಯಲ್ಲಿ ಪ್ರಕಟಿಸಲಾಗಿತ್ತು. ಈ ಬಾರಿ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿ ಯಾರೆಂಬುದನ್ನು ನಿರ್ಧರಿಸುವ ವಿಚಾರವೂ ಇದೇ ತಿರುವು ಪಡೆದುಕೊಳ್ಳುವತ್ತ ಸಾಗಿದೆ.
ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತ ಪ್ರವಾಸ ಮುಗಿಸಿ ದಿಲ್ಲಿಗೆ ಮರಳಿದ ಬಳಿಕ ಸಿಇಸಿ ಸಭೆ ನಡೆಯುವ ಸಾಧ್ಯತೆ ಇದೆ. ಮಂಗಳವಾರ ಸಭೆ ಸೇರಿ ಬುಧವಾರ ರಾತ್ರಿಯ ವೇಳೆಗೆ ಪಟ್ಟಿ ಪ್ರಕಟಿಸಬಹುದು ಎಂಬುದು ಬಿಜೆಪಿ ಮೂಲಗಳ ಅಭಿಪ್ರಾಯ. ಜೆಡಿಎಸ್ ಕೂಡ ಟಿಕೆಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಕೋರ್ ಕಮಿಟಿ ಸಭೆ ನಡೆಸಿದ್ದು, ಜೆಡಿಎಸ್ ಪಟ್ಟಿ ಇತ್ಯರ್ಥಗೊಂಡ ಬಳಿಕ ಎಲ್ಲದಕ್ಕೂ ಒಟ್ಟಿಗೆ ಹಸುರು ನಿಶಾನೆ ತೋರಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ.
ದಿಲ್ಲಿಗೆ ಹೋದರಾ ಅನಂತ್?
ಸಂಸದ ಅನಂತ್‌ಕುಮಾರ್ ಹೆಗಡೆ ನಡೆ ಇನ್ನೂ ನಿಗೂಢವಾಗಿದೆ. ಎರಡು ದಿನಗಳಿಂದ ಕ್ಷೇತ್ರದಲ್ಲಿ ಅವರ ಪ್ರಚಾರದ ಅಬ್ಬರ ಕಡಿಮೆಯಾಗಿದೆ. ಗುಟ್ಟಾಗಿ ಅವರು ದಿಲ್ಲಿಗೆ ತೆರಳಿದ್ದಾರೆಂಬ ಸುದ್ದಿಗಳು ಕ್ಷೇತ್ರದಲ್ಲಿವೆ. ಆದರೆ ಯಾರೂ ದೃಢಪಡಿಸಿಲ್ಲ. ದಿಲ್ಲಿಯಲ್ಲೂ ಅವರೂ ಪಕ್ಷದ ಪಡಸಾಲೆಯಲ್ಲಿ ಕಾಣಿಸಿಕೊಂಡಿಲ್ಲ. ಪತ್ರಕರ್ತರ ಸಂಪರ್ಕಕ್ಕೂ ಸಿಕ್ಕಿಲ್ಲ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅನಂತ್ ಅಭಿಮಾನಿ ಬಳಗ ಮಾತ್ರ ಟಿಕೆಟ್ ವಿಚಾರದಲ್ಲಿ ಇನ್ನೂ ಭರವಸೆ ಹೊಂದಿದೆ.
ಮೂಲಗಳ ಪ್ರಕಾರ ಸಂಘ ಪರಿವಾರದ ಸ್ಥಳೀಯ ಮುಖಂಡರು ಹಾಗೂ ನಾಗಪುರದ ಹಿರಿಯರು ಅನಂತ್‌ಕುಮಾರ್ ವಿಚಾರದಲ್ಲಿ ಇನ್ನೂ ಸಹಾನುಭೂತಿ ಹೊಂದಿದ್ದಾರೆ. ಅವರಿಗೆ ಟಿಕೆಟ್ ಕೊಡಬೇಕೆಂದು ಬಿಜೆಪಿ ವರಿಷ್ಠರಿಗೆ ಸಂದೇಶ ರವಾನೆ ಮಾಡಿದ್ದಾರೆ. ಆದರೆ ಬಿಜೆಪಿ ವರಿಷ್ಠರು ಮಾತ್ರ ಈ ಬಗ್ಗೆ ಬಿಗಿ ನಿಲುವು ತಾಳಿದ್ದಾರೆ. ಅನಂತ್‌ಕುಮಾರ್ ಪಕ್ಷಕ್ಕೆ ಅವಿಧೇಯ ಎಂಬ ಅಭಿಪ್ರಾಯವನ್ನು ಮೋದಿ ಹಾಗೂ ಅಮಿತ್ ಶಾ ಮನಸ್ಸಿನಲ್ಲಿ ಗಟ್ಟಿಗೊಳಿಸಲಾಗಿದೆ. ಬಿಎಸ್‌ವೈ ಹೊರತು ಉಳಿದೆಲ್ಲರೂ ಅನಂತ್‌ಕುಮಾರ್‌ಗೆ ಟಿಕೆಟ್ ಬೇಡ ಎನ್ನುತ್ತಿದ್ದಾರೆ. ಆದರೆ ಸಂಘ ಹಿಡಿದ ಪಟ್ಟು ಈಗ ಪಕ್ಷಕ್ಕೆ ಇರಿಸುಮುರಿಸು ಉಂಟು ಮಾಡುತ್ತಿದೆ.
ಬೆಳಗಾವಿ: ಶೆಟ್ಟರ್‌ಗೂ ಇಕ್ಕಟ್ಟು
ಬೆಳಗಾವಿ ಟಿಕೆಟ್ ಹಂಚಿಕೆ ವಿಚಾರವೂ ಹೈಕಮಾಂಡ್‌ಗೆ ತಲೆಬಿಸಿ ಸೃಷ್ಟಿಸಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೊಟ್ಟರೆ ಅವರ ವಿರುದ್ಧ “ಬೆಳಗಾವಿ ರಿಪಬ್ಲಿಕ್’ ತಿರುಗಿ ಬೀಳಬಹುದು ಎಂಬ ಭಯ ಕಾಡುತ್ತಿದೆ. ಈ ಮಧ್ಯೆ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ಹೆಸರು ಕೂಡ ಪಂಚಮಸಾಲಿ ಕೋಟಾದಲ್ಲಿ ಮುನ್ನೆಲೆಗೆ ಬರಲಾರಂಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.