Yakshagana ಕಲೆ ಅಪಾಯದಂಚಿನಲ್ಲಿ: ಪ್ರಭಾಕರ ಜೋಷಿ
ಎಂ.ಎಲ್. ಸಾಮಗ ಅವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ
Team Udayavani, Mar 19, 2024, 12:18 AM IST
ಹೊನ್ನಾವರ: ಇಂದಿನ ಯಕ್ಷಗಾನ ಅಪಾಯದ ಸ್ವರೂಪದಲ್ಲಿದೆ. ಪಾರಂಪರಿಕ ವೇಷಗಳು ಮತ್ತು ಪೌರಾಣಿಕ ಪ್ರಸಂಗಗಳನ್ನು ಆಧುನಿಕ ಯಕ್ಷಗಾನ ಪರಂಪರೆ ಮರೆಮಾಚಿದೆ. ಈ ಅಪಾಯವನ್ನು ತಡೆಯುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಹಿರಿಯ ವಿಮರ್ಶಕ ಎಂ. ಪ್ರಭಾಕರ್ ಜೋಷಿ ಅಭಿಪ್ರಾಯಪಟ್ಟರು.
ಅವರು ಗುಣವಂತೆ ಕೆರಮನೆ ಶಂಭು ಹೆಗಡೆ ಬಯಲು ರಂಗಮಂದಿರದಲ್ಲಿ 14ನೇ ರಾಷ್ಟ್ರೀಯ ನಾಟ್ಯೋತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಜಾನನ ಹೆಗಡೆ ಅಭಿನಯದ ರಹಸ್ಯವನ್ನು ತಿಳಿದ ಅಪರೂಪದ ಕಲಾವಿದರಾಗಿದ್ದರು ಎಂದ ಅವರು, ಡಾ| ಎಂ.ಎಲ್. ಸಾಮಗರು ಗಜಾನನ ಹೆಗಡೆ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂದರು.
ಹಿರಿಯ ಕಲಾವಿದ, ಚಿಂತಕ ಎಂ.ಎಲ್. ಸಾಮಗ ಮಲ್ಪೆ ಅವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಂ.ಎಲ್. ಸಾಮಗರು ಯಾವ ವೃತ್ತಿ ಕಲಾವಿದನಿಗೂ ಕಡಿಮೆ ಇಲ್ಲದ, ಉಭಯತಿಟ್ಟುಗಳಲ್ಲಿ ಸೈ ಎನಿಸಿ ಕೊಂಡು ಕಲಾ ಪ್ರೌಢಿಮೆ ಮೆರೆದ ಕಲಾವಿದರು ಎಂದು ಹಿರಿಯ ಉಪನ್ಯಾಸಕ ನಾರಾಯಣ ಹೆಗಡೆ ಅವರು ಅಭಿ ನಂದನಾ ನುಡಿಯಲ್ಲಿ ತಿಳಿಸಿದರು.
ಧನ್ಯತಾ ಭಾವ: ಸಾಮಗಪ್ರಶಸ್ತಿ ಸ್ವೀಕರಿಸಿದ ಎಂ.ಎಲ್. ಸಾಮಗ ಮಾತನಾಡಿ, ಸಾಮಗ ಮನೆತನಕ್ಕೂ, ಕೆರೆಮನೆ ಮನೆತನಕ್ಕೂ ಅನಾದಿಕಾಲದ ನಂಟಿದೆ. ಆದಕಾರಣ ಸಂತೋಷ ಮತ್ತು ಸಂಕೋಚ ಭಾವದಿಂದ ಪ್ರಶಸ್ತಿಯನ್ನು ಧನ್ಯತಾ ಭಾವದಿಂದ ಸ್ವೀಕರಿಸಿದ್ದೇನೆ. ಕೆರೆಮನೆಯ ಮೂರು ತಲೆಮಾರಿನ ಕಲಾವಿದರ ಸಂಗಡ ವೇಷ ಮಾಡಿ ಸಾರ್ಥಕತೆ ಮತ್ತು ಸಾತ್ವಿಕಭಾವ ಪಡೆದಿದ್ದೇನೆ ಎಂದರು.
ಕೆರಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಪ್ರಶಸ್ತಿ
ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ, ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ್ ಶೆಟ್ಟಿ ಮತ್ತು ಶಿಕ್ಷಣ ತಜ್ಞ, ಬರಹಗಾರ ಡಾ| ಚಂದ್ರಶೇಖರ ದಾಮ್ಲೆ ಅವರಿಗೆ ಕೆರಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉದ್ಯಮಿ, ಕಲಾಪೋಷಕ ಕೃಷ್ಣಮೂರ್ತಿ ಮಂಜರು, ಕಲಾಪೋಷಕರಾದ ವೆಂಕಟರಮಣ ಹೆಗಡೆ, ಅಪೋಲೋ ಆಸ್ಪತ್ರೆ ಸರ್ಜನ್ ಡಾ| ನಾರಾಯಣ ಹೆಗಡೆ ಮತ್ತು ಸ್ಥಳೀಯ ಮುಖಂಡ ಗಣಪಯ್ಯ ಗೌಡರು ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.