Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
ತಂದೆಗೆ ಕಿಡ್ನಿ ದಾನ ಮಾಡಿರುವ ರೋಹಿಣಿ...
Team Udayavani, Mar 19, 2024, 6:40 AM IST
ಪಟ್ನಾ: ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಪುತ್ರಿ ಡಾ| ರೋಹಿಣಿ ಆಚಾರ್ಯ ಮೊದಲ ಬಾರಿಗೆ ಚುನಾವಣ ಅಖಾಡಕ್ಕೆ ಧುಮುಕು ತ್ತಿದ್ದಾರೆ. ತಮ್ಮ ತಂದೆ ಲಾಲು ಪ್ರಸಾದ್‌ಗೆ ಕಿಡ್ನಿ ದಾನ ಮಾಡಿರುವ ರೋಹಿಣಿ ಬಿಹಾರದ ಸರನ್ ಕ್ಷೇತ್ರದಿಂದ ಸ್ಪರ್ಧಿಸಲಿ ದ್ದಾರೆ ಎನ್ನಲಾಗಿದೆ. ರೋಹಿಣಿ ರಾಜಕೀಯ ಪ್ರವೇಶಿಸು ತ್ತಿರುವ ಬಿಹಾರ ಮಾಜಿ ಸಿಎಂಗಳಾದ ಲಾಲೂ- ರಾಬ್ರಿ ದೇವಿ ದಂಪತಿಯ ನಾಲ್ಕನೇ ಕುಡಿ. ಸರನ್ ಕ್ಷೇತ್ರದ ಹಾಲಿ ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಅವರ ಒಡಹುಟ್ಟಿದವರಾದ ತೇಜಸ್ವಿ, ತೇಜ್‌ಪ್ರತಾಪ್, ಮಿಸಾ ಭಾರತಿ ಈಗಾಗಲೇ ರಾಜಕೀಯದಲ್ಲಿದ್ದಾರೆ.
2 ದಿನಗಳಲ್ಲಿ ಕೈ ಜತೆಗೆ ಸ್ಥಾನ ಹೊಂದಾಣಿಕೆ ಫೈನಲ್: ತೇಜಸ್ವಿ
ಬಿಹಾರಕ್ಕೆ ಸಂಬಂಧಿಸಿದಂತೆ ಇನ್ನು 2-3 ದಿನಗಳಲ್ಲಿ ಇಂಡಿಯಾ ಒಕ್ಕೂಟದ ನಡುವೆ ಸ್ಥಾನ ಹೊಂದಾಣಿಕೆ ಪೂರ್ತಿಯಾಗಲಿದೆ. ಈ ಬಗ್ಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ. ಪಟ್ನಾದಲ್ಲಿ ಸೋಮವಾರ ಮಾತನಾಡಿದ ಅವರು, ಕೆಲವೊಂದು ವಿಚಾರಗಳು ಇನ್ನಷ್ಟೇ ಅಂತಿಮ ಗೊಳ್ಳಬೇಕಾಗಿದೆ. ಅದನ್ನು ಇತ್ಯರ್ಥಪಡಿಸಿದ ಬಳಿಕ 2-3 ದಿನಗಳಲ್ಲಿ ಸೀಟು ಹಂಚಿಕೆ ಅಂತಿಮ ಗೊಳ್ಳಲಿದೆ ಎಂದು ಹೇಳಿದ್ದಾರೆ.
40 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 9-11, ಸಿಪಿಐ-ಎಂಎಲ್ 2, ಉಳಿದ 26ರಿಂದ 28 ಕ್ಷೇತ್ರಗಳಲ್ಲಿ ಆರ್‌ಜೆಡಿ ಸ್ಪರ್ಧಿಸುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.