Lok Sabha Election 2024: ಗಡಿ ಭಾಗಗಳಲ್ಲಿ ತಪಾಸಣೆ ಬಿರುಸು
Team Udayavani, Mar 19, 2024, 1:33 AM IST
ಉಳ್ಳಾಲ, ಕೊಣಾಜೆಯಲ್ಲಿ 7 ಚೆಕ್‌ಪೋಸ್ಟ್
ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಉಳ್ಳಾಲ ಮತ್ತು ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 7 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.
ಅವುಗಳ ಪೈಕಿ 3ರಲ್ಲಿ ಕರ್ನಾಟಕ ಪೊಲೀಸರು ತಪಾಸಣೆ ನಡೆಸಲಿದ್ದು, ಒಂದರಲ್ಲಿ ಕರ್ನಾಟಕ ಮತ್ತು ಕೇರಳ ಪೊಲೀಸರು ಜಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಮೂರು ಚೆಕ್‌ಪೋಸ್ಟ್‌ಗಳನ್ನು ಕೇರಳ ಪೊಲೀಸರು ನಿರ್ವಹಿಸಲಿದ್ದಾರೆ.
ಪ್ರತೀ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು, ಕೇಂದ್ರ ಮೀಸಲು ಪಡೆಯ ಪೊಲೀಸರು ಸೇರಿದಂತೆ ನೋಡೆಲ್ ಅಧಿಕಾರಿಗಳು ಸಿಬಂದಿ ತಪಾಸಣೆ ನಡೆಸಲಿದ್ದಾರೆ. ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್ ಗಡಿಭಾಗದ ಚೆಕ್‌ಪೊಸ್ಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಮುಂಡ್ಕೂರು ಜಾರಿಗೆಕಟ್ಟೆ ಚೆಕ್‌ಪೋಸ್ಟ್ ಮತ್ತೆ ಸಕ್ರಿಯ
ಬೆಳ್ಮಣ್: ಬಹುತೇಕ ನೇಪಥ್ಯಕ್ಕೆ ಸೇರಿದ್ದ ಮುಂಡ್ಕೂರು ಜಾರಿಗೆಕಟ್ಟೆ ಚೆಕ್‌ಪೋಸ್ಟ್ ಮತ್ತೆ ಸಕ್ರಿಯಗೊಂಡಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತಿಗಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳ ನೇತೃತ್ವದಲ್ಲಿ ಇಲಾಖೆಯ ಸಿಬಂದಿ ಕರ್ತವ್ಯದಲ್ಲಿ ತೊಡಗಿದ್ದು ಕಾರ್ಕಳ ತಾಲೂಕಿನ ಶಿಕ್ಷಕರು ಸಹಕರಿಸುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಲಾಕ್‌ಡೌನ್‌ಗಾಗಿ ಇಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿತ್ತು.
ಶಿರೂರು ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ
ಬೈಂದೂರು: ಉತ್ತರ ಕನ್ನಡ – ಉಡುಪಿ ಜಿಲ್ಲೆ ಗಡಿ ಭಾಗವಾದ ಶಿರೂರಿನಲ್ಲಿ ವಾಹನ ತಪಾಸಣೆ ಆರಂಭಗೊಂಡಿದೆ. ವಿವಿಧ ಇಲಾಖೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜಿಲ್ಲೆಗೆ ಪ್ರವೇ ಶಿಸುವ ಪ್ರತೀ ವಾಹನಗಳ ವಿವರ ದಾಖಲಿಸಿ ತಪಾಸಣೆ ನಡೆಸ ಲಾಗುತ್ತಿದೆ. ಜತೆಗೆ ವಿವಿಧ ಸರಕಾರಿ ಜಾಹಿರಾತುಗಳಲ್ಲಿ ಇರುವ ರಾಜಕೀಯ ವ್ಯಕ್ತಿಗಳ ಭಾವಚಿತ್ರವನ್ನು ಮರೆ ಮಾಡ ಲಾಗಿದೆ ಹಾಗೂ ಬ್ಯಾನರ್‌ಗಳನ್ನು ತೆರವು ಗೊಳಿಸಲಾಗಿದೆ.
ಸಹಾಯಕ ಚುನಾವಣಾಧಿಕಾರಿ ಎ.ಆರ್. ಮಂಜುನಾಥ, ಬೈಂದೂರು ತಹಶೀಲ್ದಾರ್ ಪ್ರದೀಪ್ ಆರ್., ಕಂದಾಯ ನಿರೀಕ್ಷಕ ಮಂಜು, ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ್ ಕುಮಾರ್, ಚುನಾವಣೆ ಉಸ್ತುವಾರಿ ಚಂದ್ರಶೇಖರ ಹಾಗೂ ಬೈಂದೂರು ಪೊಲೀಸ್ ಸಿಬಂದಿ ಹಾಜರಿದ್ದರು.
ಸಾಹೇಬ್ರಕಟ್ಟೆ, ಸೋಮೇಶ್ವರ ಚೆಕ್‌ಪೋಸ್ಟ್‌ಗೆ ಡಿಸಿ, ಎಸ್‌ಪಿ ಭೇಟಿ
ಕೋಟ: ಚುನಾವಣೆ ಹಿನ್ನಲೆಯಲ್ಲಿ ಬ್ರಹ್ಮಾವರ ತಾಲೂಕಿನ ಸಾಹೇಬ್ರಕಟ್ಟೆಯಲ್ಲಿ ತೆರೆದಿರುವ ಪೊಲೀಸ್ ಚೆಕ್‌ಪೋಸ್ಟ್ ಗೆ ಜಿಲ್ಲಾಧಿಕಾರಿ ಡಾ| ವಿದ್ಯಾ ಕುಮಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕುಮಾರ್ ರವಿವಾರ ಸಂಜೆ ಭೇಟಿ ನೀಡಿದರು. ಎಲ್ಲ ವಾಹನಗಳನ್ನು ಪರಿಶೀಲಿಸಿ ಅಕ್ರಮ ಕಂಡುಬಂದರೆ ಕಠಿನ ಕ್ರಮ ಕೈಗೊಳ್ಳುವಂತೆ ಸಿಬಂದಿಗೆ ತಿಳಿಸಿದರು. ಸ್ಥಳೀಯ ಕಂದಾಯ, ಪೊಲೀಸ್ ಅಧಿಕಾರಿಗಳು ಈ ಸಂದರ್ಭ ಸ್ಥಳದಲ್ಲಿದ್ದರು.
ಹೆಬ್ರಿ: ಹೆಬ್ರಿ ತಾಲೂಕಿನ ಸೋಮೇಶ್ವರ ಚೆಕ್‌ಪೋಸ್ಟ್‌ಗೆ ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೋಡಾರ್‌ನಲ್ಲಿ ದಾಖಲೆ ಇಲ್ಲದ 1.32 ಲ.ರೂ. ವಶ
ಮಂಗಳೂರು: ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಗೊಂಡ ಬೆನ್ನಿಗೆ ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 1.32 ಲಕ್ಷ ರೂ. ನಗದನ್ನು ಚುನಾವಣ ಆಯೋಗ ಮಂಗಳೂರು ಸಮೀಪ ರವಿವಾರ ರಾತ್ರಿ ವಶಪಡಿಸಿಕೊಂಡಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೋಡಾರ್ - ಎಡಪದವು ಚೆಕ್ ಪೋಸ್ಟ್‌ನಲ್ಲಿ ರಾತ್ರಿ 11ರ ಸುಮಾರಿಗೆ ಚುನಾವಣಾ ಧಿಕಾರಿಗಳ ತಂಡ ವಾಹನಗಳ ತಪಾಸಣೆ ನಡೆಸು ತ್ತಿದ್ದು, ಆಗ ಆಗಮಿಸಿದ ಕೈಕಂಬ ನಿವಾಸಿಯೊಬ್ಬರ ಕಾರನ್ನು ಪರಿಶೀಲಿಸಿ ದಾಗ 1.32 ಲಕ್ಷ ರೂ. ನಗದು ದೊರಕಿದೆ. ಸೂಕ್ತ ದಾಖಲೆ ನೀಡುವಂತೆ ಅಧಿಕಾರಿಗಳು ತಿಳಿಸಿದರೂ ಕಾರಿನಲ್ಲಿದ್ದವರು ದಾಖಲೆ ನೀಡದ ಕಾರಣ ವಶಪಡಿಸಿ ಕೊಳ್ಳಲಾಗಿದೆ.
ಈ ಕುರಿತಂತೆ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ ಕೆ. ಜಾನ್ಸನ್ ಅವರು “ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ 50 ಸಾವಿರ ರೂ.ಗಳಿಗಿಂತ ಹೆಚ್ಚು ಹಣ ಸಾಗಿಸುವಂತಿಲ್ಲ. ಒಂದುವೇಳೆ ಸಾಗಿಸುವುದಾದರೆ ಸರಿಯಾದ ದಾಖಲೆ ಒದಗಿಸ ಬೇಕು. 50 ಸಾವಿರಕ್ಕಿಂತ ಹೆಚ್ಚು ಹಣ ಸಾಗಿಸಿದಾಗ ದಾಖಲೆ ನೀಡದಿದ್ದರೆ ಅದನ್ನು ವಶಕ್ಕೆ ಪಡೆಯಲಾಗುತ್ತದೆ. ಸಂಬಂಧ ಪಟ್ಟವರು ದಾಖಲೆಯನ್ನು ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿಯವರ ಅಪೀಲು ಕಮಿಟಿಗೆ ಮನವಿ ಸಲ್ಲಿಸಿ ಹಣ ವಾಪಸ್ ಪಡೆಯಲೂ ಅವಕಾಶ ಇದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ
Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.