Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
Team Udayavani, Mar 19, 2024, 3:23 PM IST
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ʼಟಾಕ್ಸಿಕ್ʼ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಮುಖ್ಯವಾಗಿ ಸಿನಿಮಾ ಯಾವಾಗ ಆರಂಭವಾಗುತ್ತದೆ. ಪಾತ್ರವರ್ಗ ಯಾರೆಲ್ಲಾ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಟ್ರೆಂಡ್ ನಲ್ಲಿರುತ್ತದೆ.
ಇದೀಗ ಯಶ್ ʼಟಾಕ್ಸಿಕ್ʼ ಬಗ್ಗೆ ಮತ್ತೊಂದು ಗಾಸಿಪ್ ಅಪ್ಡೇಟ್ ಹೊರಬಿದ್ದಿದೆ. ಗೀತು ಮೋಹನ್ ದಾಸ್ ಅವರ ʼಟಾಕ್ಸಿಕ್ʼ ನಲ್ಲಿ ಯಶ್ ಜೊತೆ ಯಾರು ಕಾಣಿಸಿಕೊಳ್ಳುತ್ತಾರೆ ಎನ್ನುವ ವಿಚಾರ ಫ್ಯಾನ್ಸ್ ಗಳಲ್ಲಿ ಕುತೂಹಲ ಹುಟ್ಟಿಸಿದೆ.
ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಬೇಬೋ ,” “ನಾನೀಗ ಹೇಳಿದಂತೆ ನಾನು ದೊಡ್ಡ ಸೌತ್ ಚಿತ್ರ ಮಾಡುತ್ತಿರಬಹುದು. ಈಗ ಅದು ಪ್ಯಾನ್ ಇಂಡಿಯಾ ಆಗಿದೆ ಮತ್ತು ನಾನು ಎಲ್ಲಿ ಶೂಟಿಂಗ್ ಮಾಡುತ್ತೇನೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಇದನ್ನು ಮಾಡುತ್ತಿರುವುದು ಮೊದಲು ಎಂದು ಹೇಳುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ” ಎಂದು ಫ್ಯಾನ್ಸ್ ಗಳ ಜೊತೆಗಿನ ಮೀಟ್ ನಲ್ಲಿ ಅವರು ಹೇಳಿದ್ದರು.
ಇದು ಯಶ್ ಜೊತೆ ಕರೀನಾ ನಟಿಸೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಈ ನಡುವೆ ಇದೀಗ ಮತ್ತೊಬ್ಬ ಸ್ಟಾರ್ ನಟಿಯ ಹೆಸರು ಕೇಳಿಬಂದಿದೆ.
ಬಹುಭಾಷಾ ನಟಿ ಶ್ರುತಿ ಹಾಸನ್ ʼಟಾಕ್ಸಿಕ್ʼ ಸಿನಿಮಾದಲ್ಲಿ ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ʼಇ ಟೈಮ್ಸ್ʼ ವರದಿ ಮಾಡಿದೆ.
ʼಟಾಕ್ಸಿಕ್ʼ ಸಿನಿಮಾದ ಟೀಸರ್ ನಲ್ಲಿ ಶ್ರುತಿ ಹಾಸನ್ ಧ್ವನಿಯಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು. ಇದೀಗ ಶ್ರುತಿ ಹಾಸನ್ ಸಿನಿಮಾದ ಭಾಗವಾಗಲಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಚಿತ್ರತಂಡ ಯಾವ ಮಾಹಿತಿಯನ್ನು ನೀಡಿಲ್ಲ.
ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ್ ʼಟಾಕ್ಸಿಕ್ʼ ನಿರ್ಮಾಣ ಮಾಡಲಿದ್ದು, ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಪಟ್ಟಿಯಲ್ಲಿ ಕರೀನಾ ಕಪೂರ್ ಮಾತ್ರವಲ್ಲದೆ ಸಾಯಿಪಲ್ಲವಿ, ರಾಶಿ ಖನ್ನಾ ಹಾಗೂ ಮೃಣಾಲ್ ಠಾಕೂರು ಅವರ ಹೆಸರು ಕೂಡ ಕೇಳಿ ಬಂದಿದೆ.
ಗೋವಾ ಡ್ರಗ್ಸ್ ಮಾಫಿಯಾದ ಕಥೆಯನ್ನು ʼಟಾಕ್ಸಿಕ್ʼ ಒಳಗೊಂಡಿದೆ ಎನ್ನಲಾಗಿದೆ. 2025 ರ ಏ.10 ರಂದು ಸಿನಿಮಾ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.