ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
Team Udayavani, Mar 19, 2024, 4:09 PM IST
ಹೈದರಾಬಾದ್: ಮಾಲಿವುಡ್ ಸ್ಟಾರ್ ನಟ ಫಾಹದ್ ಫಾಸಿಲ್ ಸದ್ಯ ಬಹು ನಿರೀಕ್ಷಿತ ʼ ಆವೇಶಮ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದರೊಂದಿಗೆ ಪ್ಯಾನ್ ಇಂಡಿಯಾ ʼಪುಷ್ಪ-2ʼ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೌತ್ ಸಿನಿರಂಗದ ಬಹುಬೇಡಿಕೆಯ ನಟನಾಗಿರುವ ಫಾಹದ್ ಫಾಸಿಲ್ ಮತ್ತೊಮ್ಮೆ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಎರಡು ತೆಲುಗು ಸಿನಿಮಾಗಳು ಅನೌನ್ಸ್ ಆಗಿದೆ.
ಈ ಚಿತ್ರಗಳನ್ನು ಎಸ್‌ಎಸ್ ರಾಜಮೌಳಿ ಪ್ರಸ್ತುತಪಡಿಸುತ್ತಿದ್ದಾರೆ. ಅವರ ಮಗ ಎಸ್‌ಎಸ್ ಕಾರ್ತಿಕೇಯ ಅವರು ಚಿತ್ರದ ನಿರ್ಮಾಪಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಫಾಹದ್ ಅಭಿನಯದ ಎರಡೂ ಚಿತ್ರಗಳ ಫಸ್ಟ್ ಲುಕ್ ನ್ನು ಸ್ವತಃ ನಿರ್ಮಾಪಕರೇ ಹಂಚಿಕೊಂಡಿದ್ದಾರೆ.
ʼಡೋಟ್ ಟ್ರಬಲ್ ದಿ ಟ್ರಬಲ್ʼ ಎನ್ನುವ ಸಿನಿಮಾ ಫ್ಯಾಂಟಸಿ ಹಾಗೂ ಥ್ರಿಲ್ಲರ್ ಕಥೆಯನ್ನೊಳಗೊಂಡಿದ್ದು, ಈ ಸಿನಿಮಾವನ್ನು ಶಶಾಂಕ್ ಯೆಲೇಟಿ ಅವರು ನಿರ್ದೇಶನ ಮಾಡಲಿದ್ದಾರೆ. ಅರ್ಕಾ ಮೀಡಿಯಾವರ್ಕ್ಸ್ ಮತ್ತು ಶೋಯಿಂಗ್ ಬ್ಯುಸಿನೆಸ್ ಬ್ಯಾನರ್ ಅಡಿಯಲ್ಲಿ ರಾಜಮೌಳಿ ಅವರ ಪುತ್ರ ಎಸ್‌ಎಸ್ ಕಾರ್ತಿಕೇಯ ಅವರು ನಿರ್ಮಾಣ ಮಾಡಲಿದ್ದಾರೆ.
ಸ್ನೇಹದ ಕಥೆ… ನೈಜ ಘಟನೆಗಳಿಂದ ಪ್ರೇರಿತವಾಗಿದೆ ಎಂದಿರುವ ʼಆಕ್ಸಿಜನ್ʼ ಎನ್ಜುವ ಸಿನಿಮಾವನ್ನು ಸಿದ್ಧಾರ್ಥ ನಾಡೆಲ್ಲಾ ಅವರು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾವನ್ನು ಕೂಡ ಅರ್ಕಾ ಮೀಡಿಯಾವರ್ಕ್ಸ್ ಮತ್ತು ಶೋಯಿಂಗ್ ಬ್ಯುಸಿನೆಸ್ ಬ್ಯಾನರ್ ಎಸ್‌ಎಸ್ ಕಾರ್ತಿಕೇಯ ಅವರು ನಿರ್ಮಾಣ ಮಾಡಲಿದ್ದಾರೆ.
ಎಸ್‌ಎಸ್ ಕಾರ್ತಿಕೇಯ ಇತ್ತೀಚೆಗೆ ಮಲಯಾಳಂ ‘ಪ್ರೇಮಲುʼ ಸಿನಿಮಾವನ್ನು ತೆಲುಗಿನಲ್ಲಿ ವಿತರಣೆಯನ್ನು ಮಾಡಿ ಗೆದ್ದಿದ್ದಾರೆ.
A fantasy that takes you on a rollercoaster ride of fun, thrills, and emotions. #DontTroubleTheTrouble
Starring #FahadhFaasil.
Directed by Shashank Yeleti.
Produced by Arka Mediaworks & Showing Business.@Shobu_ #PrasadDevineni @ShashankYeleti @ArkaMediaWorks @SBbySSK pic.twitter.com/ltbvWU6xj7— S S Karthikeya (@ssk1122) March 19, 2024
A tale of Transformation and Friendship… Inspired by true events. #OXYGEN…
Starring #FahadhFaasil…
Directed by Siddhartha Nadella. Produced by Arka Mediaworks & Showing Business. @Shobu_ #PrasadDevineni @nadesid @ArkaMediaWorks @SBbySSK pic.twitter.com/sn36TfXNGO
— S S Karthikeya (@ssk1122) March 19, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.