![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Mar 20, 2024, 1:05 AM IST
ಬೆಳ್ತಂಗಡಿ: ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ನಿವಾಸಿ ರೆಜಿ ಕೆ.ಎ. (47) ಅವರ ಪುತ್ರ ಅಲ್ಬಿನ್ ಕೆ.ಆರ್. ಅವರಿಗೆ ಪೋಲಂಡ್ ದೇಶದಲ್ಲಿ ಕೆಲಸಕ್ಕೆ ಹೋಗಲು ವೀಸಾ ನೀಡುವುದಾಗಿ ವಂಚಿಸಿದ ಘಟನೆ ನಡೆದಿದೆ.
ಮನೋಜ್ ಎಂಬಾತನು ವೀಸಾ ಕೊಡಿಸುವುದಾಗಿ ನಂಬಿಸಿ, 2023ರ ಮೇ ತಿಂಗಳಿಂದ 2024ರ ಮಾ. 19ರ ಅವಧಿಯಲ್ಲಿ ವಿವಿಧ ಕಾರಣಗಳನ್ನು ನೀಡಿ ಹಂತಹಂತವಾಗಿ ಒಟ್ಟು 2,50,000 ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು, ವೀಸಾವನ್ನು ಕೊಡಿಸದೇ ಪಡೆದ ಹಣವನ್ನು ಹಿಂದಿರುಗಿಸದೇ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಗೇರುಕಟ್ಟೆ: ರಬ್ಬರ್ ತೋಟಕ್ಕೆ ಬೆಂಕಿ
ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಸರಕಾರಿ ಪ್ರೌಢಶಾಲೆಯ ಬಳಿ ರಬ್ಬರ್ ತೋಟಕ್ಕೆ ಮತ್ತು ಖಾಸಗಿ ಕಂಪೆನಿಯ ಮೊಬೈಲ್ ಟವರ್ ಸಮೀಪ ಬೆಂಕಿ ಅವಘಡ ನಡೆದ ಘಟನೆ ಸೋಮವಾರ ನಡೆದಿದೆ.
ವಿಷಯ ತಿಳಿದ ತತ್‌ಕ್ಷಣ ಸ್ಥಳೀಯರು ಬೆಂಕಿ ನಂದಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದರು. ಖಾಸಗಿ ಕಂಪೆನಿಯ ಮೊಬೈಲ್ ಟವರ್ ಪಕ್ಕದಲ್ಲಿರುವ ವಿದ್ಯುತ್ ಪರಿವರ್ತಕದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಜ್ವಾಲೆ ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಗೇರು ತೋಟಕ್ಕೆ ಬೆಂಕಿ
ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬೆಂದ್ರಾಳ ಸಮಿಪ ರಾಮಕೃಷ್ಣ ಇರ್ವತ್ರಾಯ ಅವರ ಗೇರು ತೋಟಕ್ಕೆ ಸೋಮವಾರ ಮಧ್ಯಾಹ್ನ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಕಾರ್ಯ ಪ್ರವೃತ್ತರಾಗಿ ಬೆಂಕಿಯನ್ನು ಹತೋಟಿಗೆ ತಂದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ.
You seem to have an Ad Blocker on.
To continue reading, please turn it off or whitelist Udayavani.