DVS ಕಾಂಗ್ರೆಸ್ ಸೇರ್ಪಡೆ: ಡಿಸಿಎಂ ಒಲವು, ಸಿಎಂ ನಿರಾಸಕ್ತಿ
ಶೆಟ್ಟರ್ ಕಲಿಸಿದ ಪಾಠ ನೆನಪಿಸಿ ಬೇಡ ಎಂದ ಸಿದ್ದು
Team Udayavani, Mar 20, 2024, 7:20 AM IST
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಕಾಂಗ್ರೆಸ್ ಸೇರುವ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆಯೇ ಭಿನ್ನಾಭಿಪ್ರಾಯ ವ್ಯಕ್ತ ವಾಗಿದ್ದು, ಡಿವಿಎಸ್ ಸೇರ್ಪಡೆಗೆ ಡಿಸಿಎಂ ಒಪ್ಪಿದರೂ, ಸಿಎಂ ಒಲ್ಲೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕರು ತಮ್ಮನ್ನು ಸಂಪರ್ಕ ಮಾಡಿರುವುದು ನಿಜ ಎಂದಿರುವ ಡಿವಿಎಸ್ ಬಿಜೆಪಿಯ ಕೆಲವು ನಾಯಕರ ವಿರುದ್ಧ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ವಿಚಾರ ದಲ್ಲಿ ಸಿಎಂ ಡಿಸಿಎಂ ನಡುವೆ ಒಮ್ಮತ ಮೂಡಿಲ್ಲ.
ಮಂಗಳವಾರ ಹೊಸದಿಲ್ಲಿಯಲ್ಲಿ ಕೇಂದ್ರ ಚುನಾ ವಣ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾವಿ ಸಲು ಡಿಸಿಎಂ ಉತ್ಸುಕರಾಗಿದ್ದರು. ಆದರೆ ಇದಕ್ಕೆ ಸಿಎಂ ತಣ್ಣೀರೆರಚಿದ್ದು, ಯಾವುದೇ ಕಾರಣಕ್ಕೂ ಪಕ್ಷಕ್ಕೆ ಕರೆತರುವುದು ಬೇಡ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಶೆಟ್ಟರ್ ಕಲಿಸಿದ ಪಾಠ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಬಿಜೆಪಿ ವಿರುದ್ಧ ಅಸಮಾ ಧಾನಗೊಂಡಿದ್ದರೆಂದು ಕಾಂಗ್ರೆಸ್‌ಗೆ ಕರೆತಂದದ್ದೂ ಅಲ್ಲದೆ, ವಿಧಾನಪರಿಷತ್ ಸದಸ್ಯ ಸ್ಥಾನವನ್ನು ಕೂಡ ಕೊಡಲಾಗಿತ್ತು. ಆದರೆ ಕೊನೆಗೆ ಎಲ್ಲವನ್ನೂ ಬಿಟ್ಟು ಬಿಜೆಪಿಗೆ ಮರಳಿದರು. ಇದರಿಂದ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಮುಜುಗರ ಆಗಿದೆ. ಹಲವಾರು ವರ್ಷಗಳಿಂದ ಬಿಜೆಪಿಯಲ್ಲೇ ಇರುವ ಸದಾನಂದ ಗೌಡರನ್ನು ಕರೆತಂದರೆ ಮತ್ತೆ ಮುಜುಗರ ಅನುಭವಿಸಬೇಕಾಗುತ್ತದೆ. ಹೀಗಾಗಿ ಈ ದುಸ್ಸಾಹಸಕ್ಕೆ ಕೈಹಾಕುವುದು ಬೇಡ ಎಂಬ ನಿಲುವಿಗೆ ಸಿಎಂ ಬಂದಂತಿದೆ.
ನನ್ನನ್ನು ಯಾರೂ ಕರೆದಿಲ್ಲ
ಈ ನಡುವೆ ಕೊಪ್ಪಳದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರ ಗೊಂಡಿರುವ ಸಂಗಣ್ಣ ಕರಡಿ ಬುಧವಾರ ಸಭೆ ನಡೆಸಿ ತಮ್ಮ ಮುಂದಿನ ನಿಲುವು ಪ್ರಕಟಿಸುವುದಾಗಿ ಹೇಳಿದ್ದರು. ಅವರ ನ್ನೂ ಕಾಂಗ್ರೆಸ್ ಸೆಳೆಯುವ ಪ್ರಯತ್ನ ನಡೆಸಿದೆ ಎಂಬ ಚರ್ಚೆಗಳು ಇದ್ದವು. ಆದರೆ ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದು, ಕಾಂಗ್ರೆಸ್‌ನ ಶಿವರಾಜ್ ತಂಗಡಗಿ
ಸಹಿತ ಅನೇಕರು ಸಂಪರ್ಕಿಸಿದ್ದಾರೆ ಯೇ ವಿನಾ ಕಾಂಗ್ರೆಸ್ ಟಿಕೆಟ್ ಬಗ್ಗೆಯಾಗಲೀ, ಪಕ್ಷಕ್ಕೆ ಬರುವಂತೆ ಯಾಗಲೀ ಯಾರೂ ಪ್ರಸ್ತಾವಿಸಿಲ್ಲ ಎಂದಿದ್ದಾರೆ.
ಬಿಜೆಪಿಯಲ್ಲಿರುವ ಅಸಮಾಧಾನಿ ತರನ್ನು ಕರೆತರುವ ವಿಚಾರವನ್ನು ಕೈ ಬಿಡುವುದೇ ಒಳ್ಳೆಯದು. ಪಕ್ಷದಲ್ಲಿ ಸ್ಪರ್ಧಿಗಳಿಲ್ಲದೆ ಸೆಳೆಯುತ್ತಿದ್ದೇವೆ ಎನ್ನುವ ಸಂದೇಶ ರವಾನೆಯಾಗುತ್ತಿದೆ. ಅಲ್ಲದೆ ಪಕ್ಷಕ್ಕೆ ಬಂದವರಿಗೆ ಸ್ಥಾನಮಾನ ಕೊಡಲೇಬೇಕಾಗುತ್ತದೆ. ಇದರಿಂದ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಭುಗಿಲೇಳಬಹುದು. ಎಲ್ಲವನ್ನೂ ನಿಭಾಯಿಸಿ ಸ್ಥಾನಮಾನ ಕೊಟ್ಟರೂ ಕೆಲವು ಸಮಯದ ಆನಂತರ ಬಿಜೆಪಿಗೆ ಮರಳಿದರೆ ಕಷ್ಟ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ಮನೆಯಲ್ಲಿ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.