LokSabha ಚುನಾವಣೆ: ಚಟುವಟಿಕೆ ಚುರುಕು


Team Udayavani, Mar 20, 2024, 10:00 AM IST

6-election-check-post

ಕಾರ್ಕಳ: ಚೆಕ್‌ಪೋಸ್ಟ್‌ ಗಳಿಗೆ ಡಿಸಿ ಭೇಟಿ, ಪರಿಶೀಲನೆ

ಕಾರ್ಕಳ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಕಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 6 ಕಡೆ ಕಡೆಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ.

ಪೊಲೀಸ್‌ ಸಹಿತ ಇತರ ಸಿಬಂದಿಯನ್ನು ನಿಯೋಜಿಸಿದ್ದು ಕಾರ್ಯನಿರತ ಸಿಬಂದಿ ವಾಹನಗಳ ತಪಾಸಣೆ ಸಹಿತ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಸೂಚನೆ ನೀಡಿದರು.

ಕಾಸರಗೋಡು ಜಿಲ್ಲೆಯಲ್ಲಿ ಕಠಿನ ಪೊಲೀಸ್‌ ಕ್ರಮ; ಗಡಿಪ್ರದೇಶಗಳಲ್ಲಿ ಬಿಗು ತಪಾಸಣೆ

ಕಾಸರಗೋಡು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಗಡಿ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ತಪಾಸಣೆ ಆರಂಭಗೊಂಡಿದೆ.

ಚುನಾವಣ ನೀತಿಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಬೆಲೆಬಾಳುವ ವಸ್ತುಗಳು, ಚಿನ್ನ, ನಗದು ಇತ್ಯಾದಿಗಳನ್ನು ಜತೆಗೆ ಸಾಗಿಸುವವರು ಅದಕ್ಕೆ ಸರಿಯಾದ ದಾಖಲೆ ಪತ್ರಗಳನ್ನು ಜತೆಗೆ ಇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು. 50 ಸಾವಿರ ರೂ.ಗಿಂತಲೂ ಹೆಚ್ಚು ಹಣ ಇಟ್ಟುಕೊಂಡು ಪ್ರಯಾಣಿಸುವವರು ಕೂಡ ಸೂಕ್ತ ದಾಖಲು ಪತ್ರವನ್ನು ತಪಾಸಣೆ ವೇಳೆ ಹಾಜರುಪಡಿಸಬೇಕು. ಇಲ್ಲವಾದಲ್ಲಿ ಅನಧಿಕೃತ ಹಣವಾಗಿ ಪರಿಗಣಿಸಿ ಮುಟ್ಟುಗೋಲು ಹಾಕಲಾಗುವುದು.

ಜಿಲ್ಲೆಯ ತಲಪಾಡಿ, ಆನೆಕಲ್ಲು, ಈಶ್ವರಮಂಗಲ, ಸಾಲೆತ್ತೂರು, ಜಾಲೂÕರು, ಪೆರ್ಲ ಸಹಿ ಎಲ್ಲ ಗಡಿಪ್ರದೇಶಗಳಲ್ಲಿ ಬಿಗಿ ತಪಾಸಣೆ ನಡೆಯುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಗೆ ಮದ್ಯ, ಅಮಲು ಪದಾರ್ಥ ಹರಿದು ಬರುವುದನ್ನು ತಡೆಯಲು ಪೊಲೀಸರು ಹಾಗೂ ಅಬಕಾರಿ ದಳ ಕ್ರಮ ತೆಗೆದುಕೊಂಡಿವೆ. ಕಾಳಧನ ಹರಿದು ಬರದಂತೆ ಚುನಾವಣ ಆಯೋಗ ಹದ್ದಿನ ಕಣ್ಣಿರಿಸಿದೆ.

24 ಹಳೆ ಮಂದಿಯ ಬಂಧನಕ್ಕೆ ಸೂಚನೆ

ಚುನಾವಣೆ ವೇಳೆ ಕಾನೂನು ಸುವ್ಯವಸ್ಥೆ ಪಾಲಿಸುವ ಸಲುವಾಗಿ ಹಲವು ಪ್ರಕರಣಗಳ ಆರೋಪಿಗಳಾಗಿರುವ 24 ಮಂದಿ ವಿರುದ್ಧ ಕಾಪಾ ಕಾನೂನು ಪ್ರಕಾರ ಬಂಧಿಸಿ ಅವರನ್ನು ಜೈಲಿಗಟ್ಟುವಂತೆ ಪೊಲೀಸರು ವರದಿ ಸಲ್ಲಿಸಿದ್ದಾರೆ. 12 ಮಂದಿ ವಿರುದ್ಧ ಪೊಲೀಸರು ಈಗಾಗಲೇ ಅಗತ್ಯದ ಕ್ರಮ ಕೈಗೊಂಡಿದ್ದಾರೆ. ವಾರಂಟ್‌ ಪ್ರಕರಣಗಳ ಆರೋಪಿಗಳು ಶೀಘ್ರ ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಜರಾಗಬೇಕು. ಇಲ್ಲವಾದಲ್ಲಿ ಅವರನ್ನು ಬಂಧಿಸಲಾಗುವುದು ಎಂಬ ಮುನ್ನೆಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.

ಈ ಮಧ್ಯೆ ತಲೆಮರೆಸಿಕೊಂಡಿರುವ ಹಲವು ಆರೋಪಿಗಳು ಈಗ ನ್ಯಾಯಾಲಯದಲ್ಲಿ ನೇರವಾಗಿ ಶರಣಾಗುತ್ತಿದ್ದಾರೆ. ತಲೆಮರೆಸಿಕೊಂಡಿದ್ದ 180 ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಮೂವರ ವಿರುದ್ಧ ಗೂಂಡಾಕಾಯಿದೆ ಅಡಿ ಪ್ರಕರಣ

ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಪೊಲೀಸ್‌ ಆಯುಕ್ತರು ಮೂವರು ಕ್ರಿಮಿನಲ್‌ ಗಳ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಳ್ಳಾಲ ಕೋಟೆಪುರ ಮೊಹಮ್ಮದ್‌ ಕಬೀರ್‌ ಆಲಿಯಾಸ್‌ ಚಬ್ಬಿ (31), ಗುರುಪುರ ಮಠದಗುಡ್ಡೆಯ ನವಾಜ್‌ (30), ಶಕ್ತಿನಗರದ ಜಯ ಪ್ರಶಾಂತ್‌ (30) ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಹಿಂದೆ ಮೊಹಮ್ಮದ್‌ ಕಬೀರ್‌ ಒಂದು ಕೊಲೆ ಪ್ರಕರಣ, 3 ಕೊಲೆಯತ್ನ ಪ್ರಕರಣ ಸೇರಿದಂತೆ 14 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ನವಾಜ್‌ ವಿರುದ್ಧ ಬಜಪೆ, ಕಾವೂರು, ಮಂಗಳೂರು ಗ್ರಾಮಾಂತರ, ಮಂಗಳೂರು ಪೂರ್ವ ಮತ್ತು ಬರ್ಕೆ ಠಾಣೆಗಳಲ್ಲಿ 1 ಕೊಲೆ, 1 ಕೊಲೆಯತ್ನ ಸೇರಿದಂತೆ 8 ಪ್ರಕರಣ ದಾಖಲಾಗಿವೆ. ಜಯಪ್ರಶಾಂತ್‌ ವಿರುದ್ಧ 3 ಗಲಭೆ, 1 ಕೊಲೆಯತ್ನ ಸೇರಿದಂತೆ 8 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು ತಿಳಿಸಿದ್ದಾರೆ.

ಅಬಕಾರಿ ಅಕ್ರಮ ತಡೆಗೆ ವಿಚಕಣ ದಳ ರಚನೆ

ಮಂಗಳೂರು: ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಅವ ಧಿಯಲ್ಲಿ ನಡೆಯಬಹುದಾದ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಅಬಕಾರಿ ಇಲಾಖೆ ವತಿಯಿಂದ ಜಿಲ್ಲಾ ಹಾಗೂ ಉಪ ವಿಭಾಗ ಮಟ್ಟದಲ್ಲಿ ವಿಚಕ್ಷಣ ದಳಗಳನ್ನು ರಚಿಸಲಾಗಿದೆ.

ಸಾರ್ವಜನಿಕರು ಅಬಕಾರಿ ಅಕ್ರಮಗಳ ಬಗ್ಗೆ ಮಾಹಿತಿಯನ್ನು ವಿಚಕ್ಷಣದಳಗಳ ನಿಯಂತ್ರಣಾಧಿಕಾರಿಗಳಿಗೆ ದೂರು ನೀಡಬಹುದು.

ವಿವರ ಇಂತಿದೆ

ಜಿಲ್ಲಾ ಮಟ್ಟ: ಟಿ.ಎಂ. ಶ್ರೀನಿವಾಸ, ಅಬಕಾರಿ ಉಪ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲೆ. ಮಂಗಳೂರು (9449597103), ಉಪವಿಭಾಗ ಮಟ್ಟ: ಸಯ್ಯದ್‌ ತಫ್‌ಜಿಲ್‌ ಉಲ್ಲಾ, ಅಬಕಾರಿ ಉಪ ಅ ಧೀಕ್ಷಕರು, ಮಂಗಳೂರು ಉಪ ವಿಭಾಗ-1 (7019121007), ಚಂದ್ರಶೇಖರ್‌, ಅಬಕಾರಿ ಉಪ ಅ ಧೀಕ್ಷಕರು, ಮಂಗಳೂರು ಉಪ ವಿಭಾಗ-2 (7019285120), ಬಸವರಾಜ್‌ ಕರಮಣ್ಣವರ, ಅಬಕಾರಿ ಉಪ ಅ ಧೀಕ್ಷಕರು, ಬಂಟ್ವಾಳ ಉಪ ವಿಭಾಗ (8197985522), ಅಶೋಕ್‌ ಪೂಜಾರ, ಅಬಕಾರಿ ಉಪ ಅಧೀಕ್ಷಕರು, ಪುತ್ತೂರು ಉಪ ವಿಭಾಗ (9449597111)

ಅಪರಾಧ ಹಿನ್ನೆಲೆಯ 19 ಮಂದಿ ಗಡೀಪಾರು

ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಕ್ರಿಮಿನಲ್‌ ಹಿನ್ನೆಲೆಯುಳ್ಳ 19 ಮಂದಿಯನ್ನು ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ.

ಮೂಡುಬಿದಿರೆಯ ಅತುರ್‌ ನಸೀಬ್‌, ಕಾಟಿಪಳ್ಳದ ಶ್ರೀನಿವಾಸ, ಬಜಪೆಯ ಮಹಮ್ಮದ್‌ ಸ ಫ್ವಾನ್‌, ಕಾವೂರಿನ ಜಯೇಶ್‌, ನೀರುಮಾರ್ಗದ ವರುಣ್‌ ಪೂಜಾರಿ, ಕೋಡಿಕಲ್‌ನ ಮೊಹಮ್ಮದ್‌ ಅಜೀಜ್‌, ಕಾವೂರಿನ ಅಬ್ದುಲ್‌ ಇಶಾಂ, ಸುರತ್ಕಲ್‌ ನ ಕಾರ್ತಿಕ್‌ ಶೆಟ್ಟಿ, ಕೈಕಂಬದ ದೀಕ್ಷಿತ್‌ ಪೂಜಾರಿ, ಕೃಷ್ಣಾಪುರದ ಲಕ್ಷ್ಮೀಶ, ಬೊಂಡಂತಿಲದ ಕಿಶೋರ್‌ ಸನಿಲ್‌, ಉಳ್ಳಾಲದ ಹಸೈನಾರ್‌ ಸಯ್ಯದ್‌ ಆಲಿ, ಕುದ್ರೋಳಿಯ ಅಬ್ದುಲ್‌ ಜಲೀಲ್‌, ಅಶೋಕನಗರದ ರೋಶನ್‌ ಕಿಣಿ, ಕಸಬಾ ಬೆಂಗ್ರೆಯ ಅಹ್ಮದ್‌ ಸಿನಾನ್‌, ಜೆಪ್ಪು ಮೊಗರಿನ ನಿತೇಶ್‌ ಕುಮಾರ್‌, ಬಜಾಲ್‌ನ ಗುರುಪ್ರಸಾದ್‌, ಬಿಜೈಯ ಭರತ್‌ ಪೂಜಾರಿ, ಜೆಪ್ಪುವಿನ ಸಂದೀಪ್‌ ಶೆಟ್ಟಿ ಗಡೀಪಾರುಗೊಂಡವರು.

ಶಸ್ತ್ರಾಸ್ತ್ರ ಠೇವಣಿಗೆ ಸೂಚನೆ

ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಸಾರ್ವಜನಿಕ ಶಾಂತಿ ಸುರಕ್ಷೆ ದೃಷ್ಟಿಯಿಂದ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯಲ್ಲಿ ಆಯುಧ ಪರವಾನಿಗೆ ಹೊಂದಿರುವವರು ತಮ್ಮ ಎಲ್ಲ ರೀತಿಯ ಶಸ್ತ್ರಾಸ್ತ್ರಗಳನ್ನು ಎ. 1ರೊಳಗೆ ಠೇವಣಿ ಇರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಆದೇಶ ಹೊರಡಿಸಿದ್ದಾರೆ.

ಆತ್ಮ ರಕ್ಷಣೆ, ಕೃಷಿ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿ ದವರು ಎಲ್ಲ ಶಶಸ್ತ್ರಾಸ್ತ್ರಗಳನ್ನು (ರಿವಾಲ್ವರ್‌ / ಪಿಸ್ತೂಲ್‌ / ಎಸ್‌ಬಿಬಿಎಲ್‌/ ಡಿಬಿಬಿಎಲ್‌/ ಎಸ್‌ಬಿಎಂಎಲ್‌/ ಡಿಬಿಎಂಎಲ್‌/ ಎನ್‌ಪಿಬಿ ರೈಫಲ್‌) ಹತ್ತಿರದ ಪೊಲೀಸ್‌ ಠಾಣೆ ಅಥವಾ ಜಿಲ್ಲೆಯಲ್ಲಿನ ನಮೂನೆ ನಂಬರ್‌ 8ರ ಪರವಾನಿಗೆ ಹೊಂದಿರುವ ಅ ಧಿಕೃತ ಕೋವಿ ಮದ್ದು ಗುಂಡು ವ್ಯಾಪಾರಿಗಳಲ್ಲಿ ಎ. 1ರ ಮೊದಲು ಠೇವಣಿ ಇಡಬೇಕು. ಜೂ. 11ರ ಬಳಿಕ ಶಸ್ತ್ರಾಸ್ತ್ರಗಳನ್ನು ಮರಳಿ ಪಡೆದುಕೊಳ್ಳಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !

ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.