Tragic: Escalators ಅವಾಂತರ-ತಂದೆಯ ಹೆಗಲ ಮೇಲಿದ್ದ ಕಂದಮ್ಮ ಜಾರಿಬಿದ್ದು ಮೃತ್ಯು
Team Udayavani, Mar 20, 2024, 12:19 PM IST
ರಾಯ್ಪುರ್(ಚತ್ತೀಸ್ ಗಢ್): ಸಾವು ಎಲ್ಲಿ, ಹೇಗೆ ಸಂಭವಿಸುತ್ತದೆ ಎಂಬುದು ಊಹಿಸಲು ಅಸಾಧ್ಯ. ಅದಕ್ಕೊಂದು ಸೇರ್ಪಡೆ ಎಂಬಂತೆ ಎಸ್ಕ್ ಲೇಟರ್ ಹತ್ತುವ ವೇಳೆ ಆಯತಪ್ಪಿದ ಪರಿಣಾಮ ತಂದೆಯ ಹೆಗಲ ಮೇಲೆ ಮಲಗಿದ್ದ ಪುಟ್ಟ ಕಂದಮ್ಮ ಹೆಗಲಿನಿಂದ ಜಾರಿ ಕೆಳಗೆ ಬಿದ್ದು ಕೊನೆಯುಸಿರೆಳೆದಿರುವ ದಾರುಣ ಘಟನೆ ಚತ್ತೀಸ್ ಗಢದ ರಾಯ್ಪುರ್ ನ ಶಾಪಿಂಗ್ ಮಾಲ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:
ರಾಯ್ಪುರ್ ಸಿಟಿ ಸೆಂಟರ್ ಮಾಲ್ ನಲ್ಲಿದ್ದ ಸಿಸಿಟಿವಿ ಫೂಟೇಜ್ ನಲ್ಲಿ, ಎಸ್ಕ್ ಲೇಟರ್ಸ್ ಮೇಲೆ ವ್ಯಕ್ತಿಯೊಬ್ಬ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದು, ಮತ್ತೊಬ್ಬ ವ್ಯಕ್ತಿ ಹಾಗೂ ಐದು ವರ್ಷದ ಮಗುವೊಂದು ನಿಂತಿತ್ತು. ಈ ಸಂದರ್ಭದಲ್ಲಿ ಐದು ವರ್ಷದ ಮಗುವನ್ನು ತಡೆಯಲು ಹೋದ ಸಂದರ್ಭದಲ್ಲಿ ಆಯತಪ್ಪಿದ ಪರಿಣಾಮ ಹೆಗಲ ಮೇಲಿದ್ದ ಮಗು ಜಾರಿ ಕೆಳಗೆ ಬಿದ್ದಿರುವ ದೃಶ್ಯ ಸೆರೆಯಾಗಿದೆ.
रायपुर के सिटी सेंटर मॉल में दिलदहला देने वाली घटना
एस्केलेटर चढ़ते परिजन के हाथ से छूटा बच्चा
तीसरे माले से गिरने से मासूम की मौत#raipur #citycentremall#mall #RaipurNews#pandri pic.twitter.com/6HW3IsgsBX— Ammar raza (@Ammarra70427353) March 19, 2024
ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು ಆದರೆ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ತಕ್ಷಣವೇ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
ಈ ಘಟನೆ ಬಗ್ಗೆ ದೇವೇಂದ್ರ ನಗರ ಪೊಲೀಸರು ತನಿಖೆ ನಡೆಸುತ್ತಿದ್ದು, ಮಗುವನ್ನು ಕಳೆದುಕೊಂಡ ಕುಟುಂಬ ಸದಸ್ಯರ ರೋಧನ ಮುಗಿಲುಮುಟ್ಟಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.