IPL ಉದ್ಘಾಟನೆಗೆ ರೆಹಮಾನ್ ಮತ್ತು ಬಾಲಿವುಡ್ ತಾರೆಯರು
Team Udayavani, Mar 21, 2024, 6:20 AM IST
ಚೆನ್ನೈ: ಹದಿನೇಳನೇ ಐಪಿಎಲ್ ಪಂದ್ಯಾವಳಿಗೆ ಶುಕ್ರವಾರ ಸಂಜೆ ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ವರ್ಣರಂಜಿತ ಆರಂಭ ಲಭಿಸಲಿದೆ. ಎಂದಿನಂತೆ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆದರೆ ಇದರಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎಂಬುದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.
ಮೂಲವೊಂದರ ಪ್ರಕಾರ ಚೆನ್ನೈನವರೇ ಆದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಖ್ಯಾತ ಗಾಯಕ ಸೋನು ನಿಗಮ್ ಸೇರಿಕೊಂಡು ಕಾರ್ಯಕ್ರಮ ನಡೆಸಿಕೊಡಲಿದ್ದಾರೆಂದು ತಿಳಿದು ಬಂದಿದೆ.
ಉದ್ಘಾಟನ ಸಮಾರಂಭ ಸಂಜೆ 6.30ಕ್ಕೆ ಮೊದಲ್ಗೊಂಡು ಒಂದು ಗಂಟೆ ಕಾಲ ಸಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್ನಲ್ಲಿ ಇದು ನೇರ ಪ್ರಸಾರ ಕಾಣಲಿದೆ. ಉದ್ಘಾಟನ ಕಾರ್ಯಕ್ರಮದಿಂದಾಗಿ ಆರ್ಸಿಬಿ-ಚೆನ್ನೈನಡುವಿನ ಪಂದ್ಯ ಅರ್ಧ ಗಂಟೆ ವಿಳಂಬವಾಗಿ, ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಉಳಿದ ರಾತ್ರಿ ಪಂದ್ಯಗಳ ಆರಂಭದ ಸಮಯ 7.30. ಹಗಲು ಪಂದ್ಯಗಳು ಅಪರಾಹ್ನ 3.30ಕ್ಕೆ ಮೊದಲ್ಗೊಳ್ಳಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್ ಪ್ರವೇಶಿಸಿದ ಭಾರತ ಹಾಕಿ ತಂಡ
International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು
ENGvsAUS: ಏಕದಿನ ಸರಣಿಗೂ ಬಟ್ಲರ್ ಅಲಭ್ಯ; ಎಸ್ಆರ್ಎಚ್ ಆಟಗಾರನಿಗೆ ನಾಯಕತ್ವ
B–G Trophy: ಈತನೇ ಭಾರತದ ಮುಂದಿನ ಸೂಪರ್ ಸ್ಟಾರ್ ಎಂದ ಸ್ಟೀವ್ ಸ್ಮಿತ್, ಸ್ಟಾರ್ಕ್
Asian Champions Trophy ಸೆಮಿಫೈನಲ್ : ಕೊರಿಯಾ ವಿರುದ್ಧ ಭಾರತ ಫೇವರಿಟ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.