Lok Sabha Elections; ಮೈಕ್, ಸ್ಟೇಜ್ ಇಲ್ಲ; ಬಿಜೆಪಿ ಹೊಸ ಪ್ರಚಾರ: ಕಟ್ಟೆ ಸಭೆ
ಮೊದಲ ಹಂತದ ಚುನಾವಣೆಗೆ ಬಿಜೆಪಿ ವಿಶೇಷ ಸಿದ್ಧತೆ; ಬೀದಿ ಬದಿಯಲ್ಲಿ ಸಣ್ಣಸಣ್ಣ ಸಭೆ ನಡೆಸಲು ನಿರ್ಧಾರ
Team Udayavani, Mar 21, 2024, 7:20 AM IST
ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುವ, 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಮನೆಗಳನ್ನು ಎಪ್ರಿಲ್ 5ರೊಳಗೆ ತಲುಪುವುದಕ್ಕೆ ಬಿಜೆಪಿ ಕಾರ್ಯ ತಂತ್ರ ರೂಪಿಸಿದೆ. ಈ ಬಾರಿ ವಿನೂತನ ಕಟ್ಟೆ ಸಭೆ ಹಾಗೂ ಬೀದಿಬದಿ ಸಭೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಜಿ.ವಿ. ರಾಜೇಶ್ ಹಾಗೂ ಚುನಾ ವಣೆ ನಿರ್ವಹಣೆ ಸಮಿತಿ ಸಂಚಾಲಕ ವಿ. ಸುನೀಲ್ ಕುಮಾರ್ ನೇತೃತ್ವದಲ್ಲಿ ನಡೆದ, ವಿವಿಧ ಪ್ರಕೋಷ್ಠಗಳ ಸಭೆಯಲ್ಲಿ ಲೋಕ ಸಭಾ ಚುನಾವಣೆಯ ಪ್ರಚಾರ ತಂತ್ರಗಳ ಸ್ವರೂಪ ಹೇಗಿರ ಬೇಕೆಂಬ ಬಗ್ಗೆ ವಿವರಣೆ ನೀಡಲಾಗಿದೆ. ಎ.5ರೊಳಗೆ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ (ಮಂಡಲ) ಕಾರ್ಯಕರ್ತರ ಸಭೆ ಪೂರ್ಣಗೊಳಿಸುವಂತೆ ಹಾಗೂ ಮೊದಲ ಹಂತದಲ್ಲಿ ಚುನಾವಣೆ ನಡೆಯುವಲ್ಲಿ ಜನಸಂಪರ್ಕ ಸಭೆಯನ್ನೂ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಬಿಜೆಪಿಯಲ್ಲಿ ಒಟ್ಟು 22 ಪ್ರಕೋಷ್ಠಗಳಿವೆ. ಚುನಾ ವಣೆ ಮುಕ್ತಾಯಗೊಳ್ಳುವವರೆಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಪ್ರಕೋಷ್ಠಗಳ ತಲಾ 22 ಸಣ್ಣಸಣ್ಣ ಸಮಾವೇಶ ನಡೆಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ನಿರ್ಧರಿಸಲಾಗಿದೆ. ಈ ಸಣ್ಣ ಸಭೆಗಳು ಪ್ರತ್ಯೇಕವಾಗಿ ನಡೆಯುವುದರಿಂದ ಪ್ರಚಾರ ಕಾರ್ಯವನ್ನು ನಿರಂತರವಾಗಿ ಇರಿಸಬಹುದೆಂಬುದು ಬಿಜೆಪಿ ಲೆಕ್ಕಾಚಾರ.
ಕಟ್ಟೆ ಸಭೆ
ಜತೆಗೆ ಎಲ್ಲ ಲೋಕಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಕಟ್ಟೆ ಸಭೆ ಹಾಗೂ ಬೀದಿ ಬದಿ ಸಭೆ ನಡೆಸಲಾಗುತ್ತದೆ. ಇದು ಸಣ್ಣಸಣ್ಣ ಗುಂಪುಗಳ ಮೇಲೆ ಪ್ರಭಾವ ಬೀರಲು ನೆರವಾಗುತ್ತದೆ. ಇದಕ್ಕೆೆ ಬೇಕಾದಷ್ಟು ಚರ್ಚೆ ವಿಚಾರಗಳು ಕೇಂದ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಕಷ್ಟಿವೆ. ಕೇಂದ್ರದ ಸಾಧನೆ ಜತೆಗೆ ರಾಜ್ಯದ ವೈಫÂಲ್ಯ ವನ್ನೂ ಜನರಿಗೆ ತಿಳಿಸಲು ಅನುಕೂಲವಾಗುತ್ತದೆ.
ರಾಜ್ಯ ಸರಕಾರ ಗ್ಯಾರಂಟಿಗಳನ್ನು ನೀಡಿದರೂ, ತೆರಿಗೆ ಹೆಚ್ಚಳ ಹಾಗೂ ಬೆಲೆ ಏರಿಕೆ ಮೂಲಕ ಜನರಿಗೆ ಸಂಕಷ್ಟವನ್ನು ತಂದಿಟ್ಟಿರುವ ವಿಚಾರವನ್ನು ಕಟ್ಟೆ ಸಭೆ ಯಲ್ಲಿ ಪ್ರಸ್ತಾವಿಸಲು ನಿರ್ಧರಿಸಲಾಗಿದೆ. ರಾಜ್ಯ ಸರಕಾರದ ವೈಫಲ್ಯ ವಿರುದ್ಧ ಕೆಲವು ಘೋಷವಾಕ್ಯ ಗಳನ್ನು ಜನರ ಮುಂದಿಡಲು ಬಿಜೆಪಿ ನಿರ್ಧರಿಸಿದೆ.
ಒಂದೇ ವೇದಿಕೆಯಲ್ಲಿ ಮೋದಿ, ಎಚ್‌ಡಿಡಿ
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುವ ಇನ್ನೂ 8 ಸಮಾವೇಶಗಳು ನಡೆಯುವ ಸಾಧ್ಯತೆ ಇದೆ. ಎಲ್ಲಾದರೂ ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಒಂದೇ ವೇದಿಕೆಗೆ ಕರೆತರಲು ಬಿಜೆಪಿ ಕಾರ್ಯಯೋಜನೆ ರೂಪಿಸಿದೆ. 8 ಕ್ಲಸ್ಟರ್‌ಗಳಲ್ಲಿ ಮೋದಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶಿವಮೊಗ್ಗ ಹಾಗೂ ಕಲಬುರಗಿ ಕ್ಲಸ್ಟರ್ ಪ್ರಚಾರ ಮುಕ್ತಾಯಗೊಂಡಿದೆ. ಉಳಿದ 6 ಸ್ಥಳಗಳು ಬಾಕಿ ಉಳಿದಿದ್ದು, ತುಮಕೂರು ಅಥವಾ ಮೈಸೂರಿನಲ್ಲಿ ಮೋದಿ ಹಾಗೂ ದೇವೇಗೌಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
14 ಎಂಪಿ ಕ್ಷೇತ್ರಗಳ
ಮನೆ ಭೇಟಿ: ಎ. 5 ಗಡುವು
ರಾಜ್ಯದಲ್ಲಿ ಮೊದಲ ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುವ, 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಮನೆಗಳನ್ನು ಎಪ್ರಿಲ್ 5ರೊಳಗೆ ತಲುಪುವುದಕ್ಕೆ ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಎ.26ಕ್ಕೆ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ.
ಪ್ರತೀ ವಿಧಾನಸಭಾ
ಕ್ಷೇತ್ರದಲ್ಲಿ 22 ಸಣ್ಣಸಣ್ಣ ಸಭೆ
ಚುನಾವಣೆ ಮುಕ್ತಾಯಗೊಳ್ಳುವವರೆಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 22 ಸಣ್ಣಸಣ್ಣ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರ ಪ್ರಚಾರದ ಜತೆಗೆ, ಈ ಸಣ್ಣ ಸಭೆಗಳಿಂದ ಜನರನ್ನು ತಲುಪುವುದು ಬಿಜೆಪಿ ಲೆಕ್ಕಾಚಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.