Mangaluru: ಮೂರೂವರೆ ತಿಂಗಳಲ್ಲಿ ಎರಡು ಸರಕು “ನೌಕೆ’ಗಳು ಮುಳುಗಡೆ

ಹಳೆಬಂದರು-ಲಕ್ಷದ್ವೀಪ ವಾಣಿಜ್ಯ ವ್ಯಾಪಾರದಲ್ಲಿ ಆತಂಕ

Team Udayavani, Mar 21, 2024, 9:15 AM IST

2-mng

ಮಂಗಳೂರು: ಘಟನೆ 1: ಹಳೆ ಮಂಗಳೂರು ಬಂದರಿ ನಿಂದ ಕಳೆದ ವರ್ಷ ನ.30ರಂದು ಹೊರಟ ಲಕ್ಷದ್ವೀಪ ಮೂಲದ “ಎಂಎಸ್‌ವಿ ಅಲ್‌ ಕದಾರಿ’ “ಹಾಯಿ ಹಡಗು’ (ನೌಕೆ) ಲಕ್ಷದ್ವೀಪದ ಕಿಲ್ಟಾನ್‌ ಎಂಬಲ್ಲಿ ಡಿ. 3ರಂದು ಕಡಲು ಪಾಲಾಯಿತು. ಅದರಲ್ಲಿದ್ದ ಸರಕು ವಸ್ತುಗಳೂ ನೀರು ಪಾಲಾದವು.

ಘಟನೆ 2: ತಮಿಳುನಾಡು ಮೂಲದ ಎಂಎಸ್‌ವಿ ವರದರಾಜ ಹೆಸರಿನ ಹಾಯಿ ಹಡಗು ಮಂಗಳೂರು ಹಳೆಬಂದರಿನಿಂದ ಮಾ. 12ರಂದು ಸರಕು ಸಾಮಗ್ರಿ ಹೇರಿಕೊಂಡು ಲಕ್ಷದ್ವೀಪದ ಅಂದ್ರೋತ್‌ ಮೂಲಕ ಅಗತಿ ದ್ವೀಪಕ್ಕೆ ಹೋಗುವಾಗ ಮಾ. 13ರ ಮಧ್ಯರಾತ್ರಿ ಅರ್ಧದಾರಿಯಲ್ಲಿ ಮುಳುಗಿ ಕಡಲು ಪಾಲಾಗಿದೆ. ಅದರಲ್ಲಿದ್ದ 8 ಸಿಬಂದಿ ಪವಾಡ ಸದೃಶರಾಗಿ ಪಾರಾಗಿದ್ದಾರೆ.

ಕಳೆದ ಮೂರೂವರೆ ತಿಂಗಳ ಅಂತರದಲ್ಲಿ ಹಳೆ ಬಂದರಿನಿಂದ ಲಕ್ಷದ್ವೀಪಕ್ಕೆ ತೆರಳಿದ ಸರಕು ತುಂಬಿದ 2 “ಹಾಯಿ ಹಡಗು’ಗಳು ಕಡಲು ಪಾಲಾಗಿವೆ. ಅಲ್ಲಿನ ಹವಾಮಾನ ವೈಪರೀತ್ಯದ ಕಾರಣ ದಿಂದ ಮುಳುಗುವ ಘಟನೆ ನಡೆಯುತ್ತಿದ್ದು, ವ್ಯಾಪಾರ-ವಹಿವಾಟಿಗೆ ನಷ್ಟ ಎದುರಾದಂತಾಗಿದೆ.

ಬದಲಾಗದ ಮರದ “ಹಾಯಿ ಹಡಗು‘!

ಪ್ರಸಕ್ತ ಮಂಗಳೂರು ವ್ಯಾಪ್ತಿಯಿಂದ ಸರಕು ಸಾಗಿಸುತ್ತಿರುವ ನೌಕೆಗಳು ಮರದಿಂದಲೇ ನಿರ್ಮಿಸಿದವು. ಮೀನುಗಾರಿಕೆ ಬೋಟುಗಳು ಈಗ ಆಧುನಿಕ ಸೌಲಭ್ಯ ಹೊಂದಿದ್ದು ಸುರಕ್ಷತೆಯ ದೃಷ್ಟಿಯಿಂದ “ಸ್ಟೀಲ್‌’ ಸ್ವರೂಪದಲ್ಲಿದೆ. ಆದರೆ, ಸರಕು ಸಾಗಿಸುವ ನೌಕೆಯನ್ನು ಮರದ ಬದಲು ಸ್ಟೀಲ್‌ ರೂಪಕ್ಕೆ ಬದಲಿಸುವ ಪ್ರಯತ್ನ ನಡೆಯಲೇ ಇಲ್ಲ. ಇದು ಕೆಲವೊಮ್ಮೆ ಅವಘಡಗಳಿಗೆ ಮುಖ್ಯ ಕಾರಣ ಎಂಬ ಅಭಿಪ್ರಾಯವಿದೆ. ಸರಕು ಸಾಗಾಟ ಮಾಡುವ ಪ್ರಮುಖರೊಬ್ಬರು “ಉದಯವಾಣಿ’ ಜತೆಗೆ ಮಾತನಾಡಿ, “ಸ್ಟೀಲ್‌ನಿಂದ ಹಾಯಿ ಹಡಗು ನಿರ್ಮಾಣವಾದರೆ ನಿಯಮಾವಳಿಯಂತೆ ಕ್ಯಾಪ್ಟನ್‌, ಎಂಜಿನಿಯರ್‌ ಅಗತ್ಯ ಇರುತ್ತದೆ. ಇದು ನಿರ್ವಹಣೆಗೆ ದುಬಾರಿ. ಹೀಗಾಗಿ ಮರದ ಹಡಗು ಮೂಲಕವೇ ಸರಕು ಸಾಗಾಟ ಮಾಡಲಾಗುತ್ತದೆ. ಆದರೆ ಸ್ಟೀಲ್‌ ಅಥವಾ ಇತರ ಬದಲಾವಣೆಗೆ ಸರಕಾರ ಪ್ರೋತ್ಸಾಹ ನೀಡಿದರೆ ಅದನ್ನು ಅನುಷ್ಠಾನಿಸಬಹುದಾಗಿದೆ’ ಎಂದು ಹೇಳುತ್ತಾರೆ.

ವಾಣಿಜ್ಯ ವ್ಯವಹಾರಕ್ಕೆ ಹಲವು ವರ್ಷದ ಇತಿಹಾಸ

ಮಂಗಳೂರು ಮತ್ತು ಲಕ್ಷದ್ವೀಪ ನಡುವೆ ವಾಣಿಜ್ಯ ವ್ಯವಹಾರಕ್ಕೆ ಒಂದು ಐತಿಹಾಸಿಕ ಹಿನ್ನೆಲೆಯಿದೆ. ಮಂಗಳೂರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಸರಕು- ಸಾಮಗ್ರಿಗಳನ್ನು ಲಕ್ಷದ್ವೀಪಕ್ಕೆ ಕಳುಹಿಸಲಾಗುತ್ತಿದೆ.

ಅಲ್ಲಿಂದ ಕೆಲವು ಉತ್ಪನ್ನಗಳನ್ನು ಇಲ್ಲಿಗೆ ತರಲಾಗುತ್ತಿದೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಮಂಗಳೂರಿನಿಂದ ಸುಮಾರು 365 ಕಿ.ಮೀ. ದೂರದಲ್ಲಿ ಪ್ರಾರಂಭ ವಾಗುತ್ತವೆ ಲಕ್ಷದ್ವೀಪ ಸಮೂಹ. ಅಲ್ಲಿನವರು ತಮ್ಮ ಪ್ರಮುಖ ಆವಶ್ಯಕತೆಗಳಿಗೆ ಮುಖ್ಯವಾಗಿ ಆಶ್ರಯಿಸುವುದು ಕೇರಳದ ಕೊಚ್ಚಿ ಹಾಗೂ ಕರ್ನಾಟಕದ ಮಂಗಳೂರನ್ನು. ಮಂಜಿ/ಹಾಯಿ ಹಡಗು (ನೌಕೆ)ಮೂಲಕ ಅಲ್ಲಿನ ವ್ಯಾಪಾರಿಗಳು ಇಲ್ಲಿಗೆ ಬಂದು ಮಂಗಳೂರಿನಿಂದ ಕಟ್ಟಡ ಸಾಮಗ್ರಿ, ಆಹಾರ ಧಾನ್ಯಗಳು, ಸಂಬಾರ ಪದಾರ್ಥಗಳನ್ನು ಜೀವನಾವಶ್ಯಕ ವಸ್ತುಗಳನ್ನು ತುಂಬಿಸಿಕೊಂಡು ಲಕ್ಷದ್ವೀಪಕ್ಕೆ ಹೋಗುತ್ತಿದ್ದಾರೆ.

ಸರಕು ಸಾಗಾಟದಲ್ಲಿ ಇಳಿಕೆ!

ಹಳೆಬಂದರಿನಿಂದ ಲಕ್ಷದ್ವೀಪಕ್ಕೆ ಪ್ರತೀ ವರ್ಷ ಸೆ.15ರಿಂದ ಮೇ 15ರವರೆಗೆ ಮಾತ್ರ (ಮೇ 16ರಿಂದ ಸೆ. 14ರವರೆಗೆ ನಿಷೇಧ)ಸರಕು ಸಾಗಾಟಕ್ಕೆ ನಿಯಮಾವಳಿ ಪ್ರಕಾರ ಅವಕಾಶ. ಅಕ್ಕಿ, ಆಹಾರ ವಸ್ತುಗಳು, ತರಕಾರಿ, ಕಲ್ಲು, ಮಣ್ಣು, ಜಲ್ಲಿ, ಸಿಮೆಂಟ್‌, ಇಟ್ಟಿಗೆ, ಬ್ಲಾಕ್‌, ಸ್ಟೀಲ್‌ ಅನ್ನು ಮಂಗಳೂರಿನಿಂದ ಸಾಗಿಸಲಾಗುತ್ತದೆ. 2021-22ರಲ್ಲಿ 54,958 ಮೆ.ಟನ್‌, ಕಳೆದ ವರ್ಷ 48,368 ಮೆ.ಟನ್‌ ಹಾಗೂ ಈ ಬಾರಿ ಫೆಬ್ರವರಿ ವರೆಗೆ 41,449 ಮೆ.ಟನ್‌ ಆಹಾರ ವಸ್ತುಗಳ ಸಾಗಾಟ ನಡೆದಿದೆ. 2019-20ರಲ್ಲಿ 73,840 ಮೆ. ಟನ್‌ ಸಾಗಾಟ ಆಗಿತ್ತು. ಬಳಿಕ ಇಷ್ಟು ಪ್ರಮಾಣದ ಸರಕು ಸಾಗಾಟ ಇಲ್ಲಿಯವರೆಗೆ ನಡೆದಿಲ್ಲ. ಇಳಿಕೆ ಕಾಣುತ್ತಿದೆ!

ಕಳೆದ 5 ವರ್ಷಗಳಲ್ಲಿ ಮಂಗಳೂರು ಬಂದರಿನಿಂದ ನಿರ್ಗಮಿಸಿದ ಸರಕು ನೌಕೆಯ ಸಂಖ್ಯೆ

2019 20ರಲ್ಲಿ 562 2020 21ರಲ್ಲಿ 172 2021 22ರಲ್ಲಿ 379 2022 23ರಲ್ಲಿ 294 2023 24 (ಫೆ.29ರವರೆಗೆ) 262

ಟಾಪ್ ನ್ಯೂಸ್

1-frr

Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

16-flipkart

Flipkart Big Billion Day ಸೆ. 27 ರಿಂದ ಆರಂಭ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

ಸಂಸದ ಜಗದೀಶ್ ಶೆಟ್ಟರ್

Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ‌: ಶೆಟ್ಟರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mulki: ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mangaluru: ನೂತನ ಮೇಯರ್‌ ಮನದಾಳ:ಜನಸ್ನೇಹಿ ಆಡಳಿತ, ಸ್ಮಾರ್ಟ್‌ ಸಿಟಿಗೆ ವೇಗ

Mangaluru: ನೂತನ ಮೇಯರ್‌ ಮನದಾಳ:ಜನಸ್ನೇಹಿ ಆಡಳಿತ, ಸ್ಮಾರ್ಟ್‌ ಸಿಟಿಗೆ ವೇಗ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-frr

Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

16-flipkart

Flipkart Big Billion Day ಸೆ. 27 ರಿಂದ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.