SSE-Side B: ಓಟಿಟಿಯಲ್ಲಿ ಸಿಗುತ್ತಿಲ್ಲ ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್ -ಬಿʼ; ಕಾರಣವೇನು?
Team Udayavani, Mar 21, 2024, 3:13 PM IST
ಬೆಂಗಳೂರು: ರಕ್ಷಿತ್ ಶೆಟ್ಟಿ ಅವರ ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್ -ಎ, ಬಿʼ ಕಳೆದ ವರ್ಷ ಪ್ರೇಕ್ಷಕರ ಗಮನ ಸೆಳೆದ ಸಿನಿಮಾಗಳು. ಲವ್ ಸ್ಟೋರಿ ಮಾದರಿಯ ಈ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ಅವರ ಅಭಿನಯ ಗಮನ ಸೆಳೆದಿತ್ತು.
ಮನು – ಪ್ರಿಯಾ ಅವರ ಪ್ರೇಮಕಥೆ ಥಿಯೇಟರ್ ನಲ್ಲಿ ಸದ್ದು ಮಾಡಿತ್ತು. ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್ -ಎ ಸಿನಿಮಾ ʼಸೈಡ್ – ಬಿʼ ಗಿಂತ ಹೆಚ್ಚು ಗಮನ ಸೆಳೆದಿತ್ತು. ಥಿಯೇಟರ್ ನಲ್ಲಿ ತೆರಕಂಡ ಬಳಿಕ ಓಟಿಟಿಯಲ್ಲೂ ಸೈಡ್ ಎ ಹೆಚ್ಚು ಸದ್ದು ಮಾಡಿತ್ತು.
ʼಸೈಡ್-ಎʼ ಕನ್ನಡದ ಬಳಿಕ ತೆಲುಗಿನಲ್ಲೂ ಡಬ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದಾದ ಬಳಿಕ ನವೆಂಬರ್ 17 ರಂದು ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್ – ಬಿ ತೆರೆಕಂಡಿತ್ತು. ಆದರೆ ನಿರೀಕ್ಷೆಗಿಂತ ಸಿನಿಮಾ ಬಹುಬೇಗನೇ ಥಿಯೇಟರ್ ನಿಂದ ಮಾಯಾವಾಯಿತು. ಮೊದಲ ಭಾಗಕ್ಕೆ ಸಿಕ್ಕ ರೆಸ್ಪಾನ್ಸ್ ಎರಡನೇ ಭಾಗಕ್ಕೆ ಸಿಕ್ಕಿಲ್ಲ. ಜನವರಿ 26 ರಿಂದ ಅಮೇಜಾನ್ ಪ್ರೈಮ್ ನಲ್ಲಿ ಸಿನಿಮಾ ಸ್ಟ್ರೀಮ್ ಆಗುತ್ತಿತ್ತು.
ಇದನ್ನೂ ಓದಿ: Yuva Trailer: ಕೆಣಕಿದರೆ ಕೆಂಡ.. ಪಕ್ಕಾ ಲೋಕಲ್ ಆಗಿ ಆ್ಯಕ್ಷನ್ ಅವತಾರ ತಾಳಿದ ʼಯುವʼ
ಆದರೆ ಇದೀಗ ಅವರ ʼಸಪ್ತ ಸಾಗರದಾಚೆ ಎಲ್ಲೋʼ ಸೈಡ್ -ಬಿʼ ಸಿನಿಮಾ ದಿಢೀರನೇ ಓಟಿಟಿಯಿಂದ ಮಾಯಾವಾಗಿದೆ. ಕಳೆದ ಕೆಲ ದಿನದಂದ ಓಟಿಟಿಯಲ್ಲಿ ಸಿನಿಮಾವನ್ನು ಜನ ಹುಡುಕುತ್ತಿದ್ದಾರೆ. ಮೂಲಗಳ ಪ್ರಕಾರ ಸಣ್ಣ ಅವಧಿವರೆಗೆ ಮಾತ್ರ ಸಿನಿಮಾ ಸ್ಟ್ರೀಮಿಂಗ್ ಮಾಡಿಕೊಳ್ಳುವ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಮುಂದೆ ಸಿನಿಮಾ ಜೀ5ಯಲ್ಲಿ ಸ್ಟ್ರೀಮ್ ಆಗಲಿದೆ ಎನ್ನಲಾಗಿದೆ.
ಆದರೆ ಈ ಬಗ್ಗೆ ಇದುವರೆಗೆ ಚಿತ್ರತಂಡ ಇದುವರೆಗೆ ಯಾವ ಮಾಹಿತಿಯನ್ನು ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagheera OTT Release: ಭರ್ಜರಿ ಸಕ್ಸಸ್ ಕಂಡ ʼಬಘೀರʼ ಓಟಿಟಿ ಎಂಟ್ರಿಗೆ ಡೇಟ್ ಫಿಕ್ಸ್
Sandalwood: ಸಂತು ಡಬಲ್ ಧಮಾಕಾ: ಡಿಸ್ಕೋ ಜೊತೆ ಕಂಗ್ರಾಜ್ಯುಲೇಶನ್ಸ್ ಬ್ರದರ್!
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
Mahaveera Hanuma: ಆಲ್ಬಂನಲ್ಲಿ ಹನುಮ ಗಾನ
Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ
MUST WATCH
ಹೊಸ ಸೇರ್ಪಡೆ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.