ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ದೇಗುಲದ ಬ್ರಹ್ಮಕಲಶ : ಧಾರ್ಮಿಕ ಸಭೆ
"ಶಿಲ್ಪ , ದಾರು ವೈಭವ ಪೆರ್ಣಂಕಿಲ ಕ್ಷೇತ್ರದ ಶ್ರೇಷ್ಠತೆಗೆ ಸಾಕ್ಷಿ
Team Udayavani, Mar 21, 2024, 3:32 PM IST
ಉಡುಪಿ: ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ – ಮಹಾಗಣಪತಿ ದೇವಾಲಯದ ಶಿಲ್ಪ, ದಾರುವೈಭವಗಳು ಈ ಕ್ಷೇತ್ರದ ಶ್ರೇಷ್ಠತೆಗೆ ಸಾಕ್ಷಿಯಾಗಿವೆ. ಒಂದು ವರ್ಷದೊಳಗೆ ಇಷ್ಟು ಭವ್ಯವಾಗಿ ಈ ದೇವಾಲಯ ಪುನಃ ರ್ನಿರ್ಮಾಣಗೊಂಡಿರುವುದು ಪೇಜಾವರ ಮಠ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಂಕಲ್ಪ ಶಕ್ತಿ ಮತ್ತು ಒಳಗಿರುವ ದೇವರ ಕಾರಣಿಕ ಶಕ್ತಿ ಕಾರಣ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಶ್ರೀ ಮಹಾಲಿಂಗೇಶ್ವರ – ಮಹಾ ಗಣಪತಿ ದೇವಾಲಯದಲ್ಲಿ ಮಾ.19ರಂದು ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪ್ರಸ್ತುತ ಮನುಷ್ಯನ ನೆಮ್ಮದಿ ನಾಶಕ್ಕೆ ನಾನಾ ತರಹದ ಆಮಿಷ, ಆಕರ್ಷಣೆ ಕಾರಣ ವಾಗುತ್ತಿವೆ. ಇದಕ್ಕೆ ಪರಿಹಾರ ಮನೋ ನಿಯಾಮಕವಾದ ಮಹಾಲಿಂಗೇಶ್ವರನ ಅರಾಧನೆ. ಅಪ್ಪ ಮಹಾಲಿಂಗೇಶ್ವರ ಮತ್ತು ಮಗ ಮಹಾಗಣಪತಿ ಜತೆಯಾಗಿರು ವುದು ಈ ಕ್ಷೇತ್ರದ ಶಕ್ತಿಯ ಇನ್ನಷ್ಟು ವೃದ್ಧಿಗೆ ಸಾಕ್ಷಿಯಾಗಿದೆ ಎಂದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ತಿಂಗಳುಗಟ್ಟಲೆ ಊರಿನ ಮತ್ತು ಪರವೂರಿನವರು ಕರಸೇವೆಯ ಮೂಲಕ ಈ ದೇಗುಲವನ್ನು ಪುನಃನಿರ್ಮಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದರು.
ವಿದ್ವಾನ್ ಪಂಜ ಭಾಸ್ಕರ ಭಟ್ ವಿಶೇಷ ಧಾರ್ಮಿಕ ಉಪನ್ಯಾಸ ನೀಡಿದರು. ಪೇಜಾವರ ಮಠದ ದಿವಾನ ಎಂ. ರಘುರಾಮ ಆಚಾರ್ಯ, ಕಾರ್ಯ ನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ಮಾರ್ಗದರ್ಶಕರಾದ ವಿದ್ವಾನ್ ಮಧುಸೂದನ ತಂತ್ರಿ, ಸುಬ್ರಹ್ಮಣ್ಯ ಅವಧಾನಿ, ದೇಗುಲದ ವಿಶ್ವಸ್ಥ ನ್ಯಾಯವಾದಿ ಸತೀಶ್ ಪೂಜಾರಿ, ಸಮಿತಿ ಸಂಘಟನ ಕಾರ್ಯದರ್ಶಿ ಸದಾನಂದ ಪ್ರಭು, ಉಪಾಧ್ಯಕ್ಷ ಶ್ರೀಕಾಂತ್ ನಾಯಕ್ ಅಲೆವೂರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಹರಿದಾಸ್ ಭಟ್ ಸ್ವಾಗತಿಸಿದರು, ಸಮಿತಿಯ ಕಾರ್ಯದರ್ಶಿ ಉಮೇಶ್ ನಾಯಕ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್ ವಂದಿಸಿದರು.
ಗಮನ ಸೆಳೆದ ಸಾಂಸ್ಕೃತಿಕ ವೈಭವ, ನೃತ್ಯ ವೈವಿಧ್ಯ
ಉಡುಪಿ: ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ – ಶ್ರೀ ಮಹಾಗಣಪತಿ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವವು ಮಾ.16ರಿಂದ ಎ.2ವರೆಗೆ ನಡೆಯಲಿದೆ.
ಇದರ ಪ್ರಯುಕ್ತ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯೋಗೀಶ್ ಆಚಾರ್ಯ ಕಾರ್ಕಳ ಇವರಿಂದ ಮಸ್ತ್ ಮಜಾ ಮ್ಯಾಜಿಕ್, ಪೆರ್ಣಂಕಿಲ ಶಾಲಾ ಮಕ್ಕಳಿಂದ ಮತ್ತು ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ, ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ನೃತ್ಯ ಸಿಂಚನ, ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ಮಹಿಳಾ ಯಕ್ಷಗಾನ ಬಳಗ ಪೆರ್ಣಂಕಿಲ ತಂಡದ ಸದಸ್ಯರಿಂದ ಯಕ್ಷಗಾನ, ವಿವಿಧ ಭಜನೆ ತಂಡದಿಂದ ಭಜನೆ ನಡೆಯಿತು.
ಸಿದ್ಧಾರ್ಥ್ ಬೆಳ್ಮಣ್ ಬಳಗದವರಿಂದ ಹಿಂದುಸ್ಥಾನಿ ಗಾಯನ, ಕಾವ್ಯಶ್ರೀ ಅಜೇರು ಮತ್ತು ಬಳಗದವರಿಂದ ಯಕ್ಷಗಾನ ಗಾನ ವೈಭವ, ಖ್ಯಾತ ಹಿನ್ನೆಲೆ ಸಂಗೀತ ವಾದಕ ವೀಕ್ಷಿತ್ ಕೊಡಂಚ ಮತ್ತು ಬಳಗದಿಂದ ಭಕ್ತಿಗಾನ ಸಿಂಚನ, ಯಕ್ಷಗುರು ರಾಕೇಶ ರೈ ಅಡ್ಕ ಇವರ ನಿರ್ದೇಶನದಲ್ಲಿ ಸನಾತನ ಯಕ್ಷಾಲಯ ಮಂಗಳೂರು ಇವರಿಂದ ಗಜೇಂದ್ರ ಮೋಕ್ಷ ಯಕ್ಷಗಾನ, ಕಲ್ಲಡ್ಕ ವಿಟಲ್ ನಾಯಕ್ ಮತ್ತು ಬಳಗದವರಿಂದ ಗಾನ ಸಾಹಿತ್ಯ ಸಂಭ್ರಮ, ಸಂಗೀತ ವಿದ್ವಾನ್ ವಿದ್ಯಾಭೂಷನ್ ಮತ್ತು ಬಳಗದವರಿಂದ ಭಕ್ತಿರಸಮಂಜರಿ, ಪದ್ಮಶ್ರೀ ಪುರಸ್ಕೃತ ವಿಶ್ವವಿಖ್ಯಾತ ಡ್ರಮ್ ವಾದಕ ಆನಂದನ್ ಶಿವ ಮಣಿ, ಮ್ಯಾಂಡೋಲಿನ್ ವಾದಕ ಯು.ರಾಜೇಶ ಚೆನೈ ಇವರಿಂದ ಸಂಗೀತ ಜುಗಲ್ ಬಂದಿ, ಮಾಂತ್ರಿಕ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ ಬಳಗದವರಿಂದ ವಿಸ್ಮಯ ಜಾದೂ, ಸ್ವಷ್ಟಿ ನೃತ್ಯ ಕಲಾ ಕುಟೀರ ವಿದುಷಿ ಮಂಜರಿ ಮತ್ತು ಬಳಗದವರಿಂದ ಭರತನಾಟ್ಯ, ನೃತ್ಯರೂಪಕ, ಅಕ್ಷತಾ ಮತ್ತು ಬಳಗದಿಂದ ಸ್ಯಾಕೊÕàಪೋನ್ ವಾದ್ಯ ವೈಭವ, ಜಗದೀಶ್ ಪುತ್ತೂರು ತಂಡದವರಿಂದ ಭಕ್ತಿ ರಸಮಂಜರಿ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಇವರಿಂದ ತುಳು ಹಾಸ್ಯಮಯ ನಾಟಕ ಪುದರ್ ದೀದಾಂಡ್, ಲಕ್ಷ್ಮೀ ಗುರುರಾಜ್ ಮತ್ತು ಕಲಾವಿದರಿಂದ ನೃತ್ಯ ನೀರಾಂಜನಂ ನ್ಯತ್ಯ ವೈಭವ, ಪೆರ್ಣಂಕಿಲ ಸರಸ್ವತಿ ಸಂಗೀತ ಶಾಲೆಯ ವಿದುಷಿ ಮಾಧವಿ ಎಸ್. ಭಟ್ ಅವರಿಂದ ಸಂಗೀತ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿದ್ವಾನ್ ಹರಿದಾಸ್ ಭಟ್, ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.