K S Eshwarappa: ಕಳೆದ ಬಾರಿಯೇ ಸ್ಪರ್ಧಿಸಿದ್ದರೆ ಎಂಎಲ್‌ಎ ಆಗುತ್ತಿದ್ದೆ; ಈಶ್ವರಪ್ಪ
Team Udayavani, Mar 21, 2024, 8:35 PM IST
ಶಿವಮೊಗ್ಗ: ಪಕ್ಷ ಸರಿ ಮಾಡಲು ನಾನು ಸ್ಪರ್ಧಿಸುತ್ತಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕಳೆದ ಬಾರಿಯೇ ಗಟ್ಟಿ ನಿರ್ಧಾರ ಮಾಡಿ ಸ್ಪರ್ಧಿಸಿದ್ದರೆ ಎಂಎಲ್‌ಎ ಆಗುತ್ತಿದ್ದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಂಸ್ಕೃತಿ ಬಿಜೆಪಿಗೆ ಬಂದಿದೆ. ಕಾರ್ಯಕರ್ತರಿಗೆ ಅವಮಾನ ಆಗಲು ಬಿಡುವುದಿಲ್ಲ. ಭಗವಂತ ಲೋಕಸಭೆಗೆ ಸ್ಪರ್ಧಿಸುವಂತೆ ಮಾಡಿದ್ದಾನೆ. ಅಭಿಮಾನಿಗಳ ನಂಬಿಕೆಗೆ ಚ್ಯುತಿ ತರುವುದಿಲ್ಲ. ಮೋದಿ ಹೇಳುತ್ತಿರುವಂತೆ ಒಂದು ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು ಎಂದರು.
ಯಾರಿಗೂ ಕೇಳದೆ ಶೋಭಾರನ್ನು ನಿಲ್ಲಿಸುತ್ತೇವೆ, ಗೆಲ್ಲಿಸಬೇಕು ಎಂದು ಬಿಎಸ್‌ವೈ ಹೇಳಿದ್ದರು. ನಾನು ಇಡೀ ರಾಜ್ಯದ ಕಾರ್ಯಕರ್ತರ ನೋವಿನ ಧ್ವನಿಯಾಗಿ ಸ್ಪರ್ಧಿಸುತ್ತಿದ್ದೇನೆ. ಲಿಂಗಾಯತ ಯತ್ನಾಳ್ ಬೇಡ, ಒಕ್ಕಲಿಗರ ಸಿ.ಟಿ.ರವಿ ಬೇಡ, ಕುರುಬ ಸಮಾಜದ ನಾನೂ ಬೇಡ. ಬಿಎಸ್‌ವೈಗೆ ಅವರ ಮಗ ಮಾತ್ರ ಬೇಕು ಎಂದರು.
ಈಗಾಗಲೇ ಮಠಾಧೀಶರು ಆಶೀರ್ವಾದ ಮಾಡಿದ್ದಾರೆ. ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ಮಾರುತಿಗೆ ಪೂಜೆ ಮಾಡಿದಾಗ ಪ್ರಸಾದ ಸಿಕ್ಕಿದೆ ಎಂದು ಹೇಳಿದರು.
ಅಪ್ಪ, ಮಕ್ಕಳು ಎಷ್ಟು ದುಡ್ಡು ಸುರಿದರೋ ಗೊತ್ತಿಲ್ಲ. ವಿಜಯೇಂದ್ರ ಕೇವಲ 11 ಸಾವಿರ ಬಹುಮತದಲ್ಲಿ ಗೆದ್ದರು. ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿರುವುದರಿಂದ ಹಳ್ಳಿ ಹಳ್ಳಿಗಳಲ್ಲಿ ಚರ್ಚೆ ಆಗುತ್ತಿದೆ. ಇದನ್ನೇ ನಾನು ಬಯಸಿದ್ದೆ. ಲೋಕಸಭಾ ಚುನಾವಣೆ ಬಳಿಕ ವಿಜಯೇಂದ್ರ ಬದಲಾಗಿ ಒಳ್ಳೆಯ ರಾಜ್ಯಾಧ್ಯಕ್ಷರು ಬರುತ್ತಾರೆ.– ಕೆ.ಎಸ್.ಈಶ್ವರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಕಾಂಗ್ರೆಸ್‌ನ ಒಳ ಜಗಳ ಸಾಬೀತುಪಡಿಸಿದ ಸಮಾವೇಶ: ವಿಜಯೇಂದ್ರ
Waqf ವಿರುದ್ಧ ವಿಜಯೇಂದ್ರ ನೇತೃತ್ವದ ಹೋರಾಟಕ್ಕೆ ಚಾಲನೆ
ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ
BJP Rift; ಆರ್. ಅಶೋಕ್ ದೆಹಲಿಗೆ: ನನಗೆ ಸ್ಪಷ್ಟ ಮಾಹಿತಿ ಇಲ್ಲ ಎಂದ ವಿಜಯೇಂದ್ರ
Earthquake; ತೆಲಂಗಾಣದ ಮುಲುಗುವಿನಲ್ಲಿ ಭೂಕಂಪನ: 5.3 ತೀವ್ರತೆ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.