Deepfake videos: ಇಟಲಿ ಪಿಎಂ ಜಾರ್ಜಿಯಾ ಮೆಲೊನಿಗೂ ಡೀಪ್ಫೇಕ್ ಕಾಟ
Team Udayavani, Mar 22, 2024, 6:45 AM IST
ರೋಮ್: ಭಾರತದಲ್ಲಿ ನಟಿಯರಾದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಸೇರಿದಂತೆ ಸೇರಿದಂತೆ ಹಲವರಿಗೆ ಕೃತಕ ಬುದ್ಧಿಮತ್ತೆ (ಎ.ಐ.) ಆಧಾರಿತ ಡೀಪ್ಫೇಕ್ ತಂತ್ರಜ್ಞಾನ ಆಧಾರಿತ ವಿಡಿಯೋದಿಂದ ಮುಜುಗರ ಉಂಟಾಗಿತ್ತು. ಇದೀಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೇ ಇಂಥ ಸಂಕಷ್ಟ ಬಂದೊದಗಿದೆ.
ತಂತ್ರಜ್ಞಾನದ ಮೂಲಕ ನಕಲಿ ವಿಡಿಯೋಗಳನ್ನು ಸೃಷ್ಟಿಸಿ ಅಮೆರಿಕದ ಪೋರ್ನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದರ ವಿರುದ್ಧ ಕೋರ್ಟ್ ಮೊರೆ ಹೋಗಿರುವ ಮೆಲೋನಿ, 90 ಲಕ್ಷ ರೂ. (1 ಲಕ್ಷ ಯೂರೋ) ಪರಿಹಾರ ಕೋರಿದ್ದಾರೆ.
ವಿಡಿಯೋದಲ್ಲಿ ಪೋರ್ನ್ ಸ್ಟಾರ್ ಒಬ್ಬಳ ಮುಖಕ್ಕೆ ಮೆಲೋನಿ ಅವರ ಮುಖವನ್ನು ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ಮಾರ್ಫ್ ಮಾಡಿ, ಆ ವಿಡಿಯೋಗಳನ್ನು ಪೋರ್ನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಪ್ರಕರಣ ಸಂಬಂಧ ಇಟೆಲಿಯ ಪೊಲೀಸರು 40 ವರ್ಷದ ವ್ಯಕ್ತಿ ಮತ್ತು ಆತನ 73 ವರ್ಷದ ತಂದೆಯನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಇವರಿಬ್ಬರೇ ಈ ಡೀಪ್ ಫೇಕ್ ಹಿಂದಿನ ರೂವಾರಿಗಳು ಎನ್ನಲಾಗಿದೆ. ದರ ವಿರುದ್ಧ ಮೆಲೋನಿ ಇಟೆಲಿಯ ಸಸ್ಸಾರಿ ಕೋರ್ಟ್ನಲ್ಲಿ ದಾವೆ ಹೂಡಿದ್ದು, ಜು.2ರಂದು ವಿಚಾರಣೆ ನಿಗದಿಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.