ISRO ಸಾಧನೆ: ಅಂತರಿಕ್ಷ ನೌಕೆ ‘ಪುಷ್ಪಕ್’ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ…
Team Udayavani, Mar 22, 2024, 9:16 AM IST
ಚಿತ್ರದುರ್ಗ: ಮರು ಬಳಕೆ ಉಡ್ಡಯನ ವಾಹನ (ಆರ್‌ಎಲ್‌ವಿ) “ಪುಷ್ಪಕ್’ ರಾಕೆಟ್‌ನ ಲ್ಯಾಂಡಿಂಗ್ ಪರೀಕ್ಷೆಯನ್ನು ಶುಕ್ರವಾರ ಯಶಸ್ವಿಯಾಗಿ ನಡೆಸಿದೆ.
ಮರು ಬಳಕೆ ಉಡ್ಡಯನ ವಾಹನ (ಆರ್‌ಎಲ್‌ವಿ)ಯನ್ನು ಇಂದು (ಶುಕ್ರವಾರ) ಬೆಳಗ್ಗೆ 7 ಗಂಟೆಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಚಳ್ಳಕೆರೆ ರನ್ ವೇಯಿಂದ ಬೆಳಗ್ಗೆ 7 ಗಂಟೆ ಸುಮಾರಿಗೆ ರಾಕೆಟ್ ಉಡಾವಣೆಯಾಗಿದೆ. ಇದು ಆರ್‌ಎಲ್‌ವಿಯ ಮೂರನೇ ಲ್ಯಾಂಡಿಂಗ್ ಮಿಷನ್ ಆಗಿದ್ದು, ಈ ಹಿಂದೆ 2016 ರಲ್ಲಿ ಮೊದಲ ಪ್ರಯೋಗ ನಡೆಸಿದ ಬಾಹ್ಯಾಕಾಶ ಸಂಸ್ಥೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಎರಡನೇ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತ್ತು.
ಉಡಾವಣಾ ವಾಹನವನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸುಮಾರು 4.5 ಕಿಮೀ ಎತ್ತರಕ್ಕೆ ಕೊಂಡೊಯ್ಯಲಾಯಿತು ಮತ್ತು ಪೂರ್ವನಿರ್ಧರಿತ ಪಿಲ್‌ಬಾಕ್ಸ್ ನಿಯತಾಂಕಗಳನ್ನು ಪಡೆದ ನಂತರ ಬಿಡುಗಡೆ ಮಾಡಲಾಯಿತು ಈ ವೇಳೆ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ ಎಂದು ಇಸ್ರೋ ಹೇಳಿದೆ.
ಏನಿದು ಪುಷ್ಪಕ್ ರಾಕೆಟ್?
ಪುಷ್ಪಕ್ ಎಂದು ಹೆಸರಿಸಲಾಗಿರುವ ರಾಕೆಟ್ ಮರು ಬಳಕೆ ಮಾಡಬಹುದಾದ ಉಡ್ಡಯನ ವಾಹನವಾಗಿದೆ (ಆರ್‌ಎಲ್‌ವಿ). ವಿಮಾನದ ಮಾದರಿಯ ಅಂತರಿಕ್ಷ ನೌಕೆ ಇದಾಗಿದ್ದು, ಈ ರಾಕೆಟ್‌ನಿಂದ ಕಡಿಮೆ ವೆಚ್ಚದಲ್ಲಿ ವಸ್ತುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದು. ವಾಯುಪಡೆ ಹೆಲಿಕಾಪ್ಟರ್ ಸಹಾಯದಿಂದ ಇದನ್ನು ಉಡಾವಣೆ ಮಾಡಲಾಗುತ್ತದೆ. ಈಗಾಗಲೇ ಅಮೆರಿಕ, ಚೀನ ಇಂತಹ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ಉಡ್ಡಯನ ವಾಹನಗಳನ್ನು ಬಳಸುತ್ತಿದ್ದು, ಭಾರತ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಲಿದೆ.
ಲಾಭವೇನು?
ರಾಕೆಟ್‌ನ ಮೇಲ್ಭಾಗದಲ್ಲಿರುವ ಅತ್ಯಂತ ದುಬಾರಿ ಭಾಗಗಳನ್ನು ಮರು ಬಳಕೆ ಮಾಡುವ ರೀತಿಯಲ್ಲಿ ತಯಾರಿಸಲಾಗಿದೆ. ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಇಂಧನ ಮರುಪೂರಣ ಸಾಮರ್ಥ್ಯ ವನ್ನೂ ಅದು ಹೊಂದಿದೆ. ನವೀಕರಣಕ್ಕಾಗಿ ಉಪಗ್ರಹ ಗಳನ್ನು ವಾಪಸ್ ಪಡೆಯಲು ಇದು ನೆರವು ನೀಡುತ್ತದೆ. ಭಾರತವು ಬಾಹ್ಯಾಕಾಶದಲ್ಲಿ ಕನಿಷ್ಠ ತ್ಯಾಜ್ಯ ಉಳಿಸಲು ಬಯಸುತ್ತಿದ್ದು, ಪುಷ್ಪಕ ರಾಕೆಟ್ ಆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.
RLV-LEX-02 Experiment:
🇮🇳ISRO nails it again!🎯Pushpak (RLV-TD), the winged vehicle, landed autonomously with precision on the runway after being released from an off-nominal position.
🚁@IAF_MCC pic.twitter.com/IHNoSOUdRx
— ISRO (@isro) March 22, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.