ಆಮರಣಾಂತ ಉಪವಾಸ ಸತ್ಯಾಗ್ರಹಿ ಶಿವಕುಮಾರ ನಾಟೀಕಾರ ಅಸ್ವಸ್ಥ: ವಿಜಯಪುರ ಆಸ್ಪತ್ರೆಗೆ ರವಾನೆ
ಭೀಮಾಗೆ ಮಹಾರಾಷ್ಟ್ರ ಉಜ್ಜನಿ ನೀರು ಬಿಡಲು ಆಗ್ರಹಿಸಿ ನಡೆದಿದ್ದ ಉಪವಾಸ: ಸರಕಾರದ ನಿರ್ಲಕ್ಷ
Team Udayavani, Mar 22, 2024, 2:04 PM IST
ಕಲಬುರಗಿ: ಕಳೆದ ಒಂದು ವಾರದಿಂದ ಭೀಮಾನದಿಗೆ ಮಹಾರಾಷ್ಟ್ರದ ಉಜ್ಜನಿ ಡ್ಯಾಂನಿಂದ ಜನ, ಜಾನುವಾರುಗಳ ನೀರಿನ ಹಾಹಾಕಾರ ನೀಗಿಲು ನೀರು ಬಿಡುವವಂತೆ ಒತ್ತಾಯಿಸಿ ಅಫಜಲಪುರ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ ಹಠಾತ್ತನೆ ಅಸ್ವಸ್ಥರಾಗಿದ್ದು ಅವರನ್ನು ವಿಜಯಪುರದ ಆಸ್ಪತ್ರೆಗೆ ರವಾನಿಸಲಾಗುತ್ತಿದೆ.
ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಬದಲು ವಿಜಯಪುರಕ್ಕೆ ಕೊಂಡೊಯ್ಯುತ್ತಿರುವುದರಿಂದ ಅಫಜಲಪುರ ಸತ್ಯಾಗ್ರಹ ಸ್ಥಳದಲ್ಲಿ ತುಸು ಗೊಂದಲ ಉಂಟಾಗಿದ್ದು, ಪೊಲೀಸರು, ತಾಲೂಕು ಆಡಳಿತದ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಆದರೆ, ಇದು ಹೋರಾಟಗಾರ ನಾಟೀಕಾರ ಹಾಗೂ ಅವರ ತಂಡದ ನಿರ್ಧಾರ ಎನ್ನಲಾಗುತ್ತಿದೆ.
ಶಿವಕುಮಾರ ನಾಟೀಕಾರ್ ಭೀಮಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿ ಕಳೆದ ಒಂದು ವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. ಈ ಹಂತದಲ್ಲಿ ಅಧಿಕಾರಿಗಳು ಪ್ರತಿದಿನ ಬಂದು ನಾಟೀಕಾರ ಜತೆ ಮಾತನಾಡಿ, ಉಪವಾಸ ಸತ್ಯಾಗ್ರಹ ಕೈ ಬಿಡಲು ಮನವಿ ಮಾಡಿದ್ದರು. ಈಗ ಚುನಾವಣೆಯೂ ಇದೆ. ಇನ್ನೊಂದೆಡೆ ಉಜ್ಜನಿಯಲ್ಲಿ ನೀರಿಲ್ಲವೆಂದು ಮಹಾರಾಷ್ಟ್ರ ಸರಕಾರ ಹೇಳುತ್ತಿದೆ. ನಮ್ಮ ರಾಜ್ಯದಲ್ಲಿನ ಕೃಷ್ಣಾ ಮತ್ತು ಬಸವಸಾಗರದಿಂದ ನೀರು ಬಿಡಿಸುವ ಪ್ರಯತ್ನಗಳನ್ನು ನಡೆದಿದೆ ಎಂದು ಹೇಳಿದ್ದರು.
ಆದರೆ, ನಮ್ಮ ಸರಕಾರವೂ ಕೂಡ ಕೃಷ್ಣಾ ಅಥವಾ ಬಸವಸಾಗರದಿಂದ ನೀರು ಬಿಡಿಸುವ ಪ್ರಕ್ರಿಯೆಯನ್ನು ಆಮೆಗತಿಯಲ್ಲಿ ಮಾಡಲಾಗುತ್ತಿತ್ತು. ಇದರಿಂದಾಗಿ ದಿನಗಳು ದೂಡಲಾಯಿತೇ ವಿನಃ ಚರ್ಚೆಯ ಅಂತಿಮ ರೂಪ ಫಲಿತಾಂಶವಾಗಿ ಹೊರ ಬೀಳಲಿಲ್ಲ ಮತ್ತು ನೀರು ಬಿಡುಸುವ ಪ್ರಯತ್ನಗಳು ವಿಳಂಭವಾದವು ಎಂದು ಶುಕ್ರವಾರ ಬೆಳಗ್ಗೆಯೇ “ಉದಯವಾಣಿ”ಗೆ ಯೊಂದಿಗೆ ಮಾತನಾಡಿದ ಶಿವಕುಮಾರ ನಾಟೀಕಾರ್, ವಿಜಯಪುರ, ಕಲಬುರಗಿ ಜಿಲ್ಲೆಯ ಜನರು, ರಾಜಕಾರಣಿಗಳು, ಶಾಸಕರು ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ತೋರಿದ ಬೆಂಬಲವನ್ನು ನೆನಪಿಸಿಕೊಂಡರು. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಲಭ್ಯ ನೀರನ್ನು ಕೃಷ್ಣ ಮತ್ತು ಬಸವಸಾಗರದಿಂದ ಬಿಡಿಸಲು ಕಲಬುರಗಿ ಆರ್ ಸಿ ಮತ್ತು ಬೆಳಗಾವಿ ಆರ್ ಸಿ ಮಧ್ಯದ ಸರಣಿ ವಿಸಿ ಸಭೆಗಳು ಪಫಲ ನೀಡುತಿಲ್ಲ ಎಂದು ದುಗುಡ ವ್ಯಕ್ತ ಪಡಿಸಿದ್ದರು.
ಅಲ್ಲದೆ, ನೀರು ಬರದೇ ಹೋದರೆ ಮುಂದಿನ ದಿನಗಳಲ್ಲಿ ಉಂಟಾಗುವ ಭೀಕರ ಹಾಹಾಕಾರಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಈ ಮಧ್ಯೆ ಮಾರ್ಚ ೭ ರಂದು ಮಹಾರಾಷ್ಟ್ರ ಕ್ಕೆ ಸಿಎಂ ಸಿದ್ಧರಾಮಯ್ಯ ಪತ್ರ ಬರೆದಿದ್ದರೂ ಮಹಾ ಸರಕಾರ ಸ್ಪಂಧಿಸಿಲ್ಲ. ಇದರಿಂದಾಗಿ ನೀರು ಬಿಡುವ ಪ್ರಕ್ರಿಯೆ ಯಲ್ಲೂ ವಿಳಂಭವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.