4 ತಿಂಗಳುಗಳಿಂದ ವೇತನ ಬಾಕಿ: “108 ಆರೋಗ್ಯ ಕವಚ’ ಸಿಬಂದಿಯಿಂದ ಮುಷ್ಕರದ ಎಚ್ಚರಿಕೆ
Team Udayavani, Mar 23, 2024, 12:24 AM IST
ಮಂಗಳೂರು: ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಯಾಗದೆ “ಸುವರ್ಣ ಕರ್ನಾಟಕ ಆರೋಗ್ಯ ಕವಚ (108)’ ನೌಕರರು ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ವೇತನ ಪಾವತಿ ಮಾಡಬೇಕು ಎಂದು 108 ನೌಕರರ ಸಂಘ ಒತ್ತಾಯಿಸಿದೆ.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ್ ಅವರು, ವೇತನ ವಿಚಾರವಾಗಿ “108 ಆರೋಗ್ಯ ಕವಚ’ದ ಸಿಬಂದಿ ನಿರಂತರವಾಗಿ ತೊಂದರೆ ಅನುಭವಿಸುತ್ತ ಬಂದಿದ್ದಾರೆ. ವೇತನ ಬಾಕಿ ಜತೆಗೆ ವೇತನ ಕಡಿತದಿಂದಲೂ ಸಮಸ್ಯೆಯಾಗಿದೆ. ಸರಕಾರ ಮತ್ತು ಜಿವಿಕೆ ಸಂಸ್ಥೆಯ ಒಡಂಬಡಿಕೆ ಪ್ರಕಾರ ಆಗಬೇಕಾಗಿದ್ದ ವಾರ್ಷಿಕ ವೇತನ ಹೆಚ್ಚಳವೂ ಆಗಿಲ್ಲ. ಸಿಬಂದಿಗೆ ಕನಿಷ್ಠ ವೇತನ 36,008 ರೂ. ನಿಗದಿ ಮಾಡಲಾಗಿತ್ತು.
ಈ ವೇತನವನ್ನು ಸುಮಾರು 6 ತಿಂಗಳ ಕಾಲ ಮಾತ್ರ ನೀಡಿ ಅನಂತರ ಏಕಾಏಕಿ 6,000 ರೂ. ಕಡಿತಗೊಳಿಸಲಾಯಿತು. ಇದೀಗ ಮತ್ತಷ್ಟು ವೇತನ ಕಡಿಮೆ ಮಾಡುವ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಿಬಂದಿ ಆತಂಕಿತರಾಗಿದ್ದಾರೆ ಎಂದರು.
ಸೇವೆ ಸ್ಥಗಿತ ಎಚ್ಚರಿಕೆ
ಸರಕಾರ 108 ಸಿಬಂದಿಯ ಸಮಸ್ಯೆಯನ್ನು 10 ದಿನಗಳೊಳಗೆ ಬಗೆಹರಿಸಬೇಕು. ಇಲ್ಲವಾದರೆ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ನರಸಿಂಹ ನಾಯಕ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೇಶವ ಕೆ., ಜಿಲ್ಲಾ ಖಜಾಂಚಿ ಮನೋಜ್ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.