![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Mar 23, 2024, 1:02 AM IST
ಬೆಳ್ತಂಗಡಿ: ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳ ಸಿಬಂದಿ ದಾಳಿ ಮಾಡಿ ಮದ್ಯ ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಿನಂದೆಲ್ ಬಾನಿ ಮೆನ್ಸ್ ಪಾರ್ಲರ್‌ನ ಹಿಂಭಾಗದ ಗೋದಾಮಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಬಾರ್ ಅಥವಾ ವೈನ್ ಶಾಪ್‌ನಿಂದ ಖರೀದಿಸಿ ಅಕ್ರಮವಾಗಿ ಮದ್ಯ ಶೇಖರಿಸಿಟ್ಟಿರುವ ಬಗ್ಗೆ ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಮಾ. 21ರಂದು ಸಂಜೆ 6 ಗಂಟೆಗೆ ದಾಳಿ ಮಾಡಿದ್ದಾರೆ.
67.950 ಲೀ. ಅಕ್ರಮ ಮದ್ಯ ಮತ್ತು 68.680 ಲೀ. ಬಿಯರ್ ವಶಕ್ಕೆ ಪಡೆದುಕೊಂಡಿದ್ದು, ಇದರ ಮೌಲ್ಯ ಸುಮಾರು 45,000 ರೂ. ಆಗಿದೆ. ಆರೋಪಿ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಮಿನಂದೆಲ್ ನಿವಾಸಿ ಶೀನಾ ಗೌಡರ ಮಗ ದಯಾನಂದ ಗೌಡ (47) ಎಂಬಾತನನ್ನು ಬಂಧಿಸಲಾಗಿದೆ. ಬೆಳ್ತಂಗಡಿ ಅಬಕಾರಿ ದಳ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಅಬಕಾರಿ ಡಿಸಿ ವಿಶೇಷ ಪತ್ತೆ ದಳದ ಇನ್‌ಸ್ಪೆಕ್ಟರ್‌ಮತ್ತು ಸಿಬಂದಿ ಭಾಗವಹಿಸಿದರು.
You seem to have an Ad Blocker on.
To continue reading, please turn it off or whitelist Udayavani.