ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಲ್ಡ್‌ವೈಡ್‌ ?

ಹೌಟ್‌ ಮಾಂಡೆ ಮಿಸಸ್‌ ಇಂಡಿಯಾ ಫೈನಲಿಸ್ಟ್‌ ಆಗಿ ಆಯ್ಕೆ

Team Udayavani, Mar 23, 2024, 1:25 PM IST

ಜರ್ಮನಿ ಕನ್ನಡತಿಯ ಸ್ಫೂರ್ತಿಯ ಪಯಣ; ಏನಿದು ಮಿಸಸ್‌ ಇಂಡಿಯಾ ವರ್ಡ್‌ವೈಡ್‌ ?

ಅಖಿಲ ತನ್ನ ಹೆಸರಿಗನ್ವರ್ಥವಾಗಿ ತಾನಿರುವೆಡೆಯೆಲ್ಲ ಆವರಿಸುತ್ತಾ ತನ್ನ ಛಾಪನ್ನು ಮೂಡಿಸುವ ಸಹಜ ಸುಂದರಿ. ಬೆಂಗಳೂರಿನ ಶಾಮಲಾ ದೇವಿ ಮತ್ತು ಸುಪರ್ಣಾ ದಂಪತಿಗಳ ಮುದ್ದಿನ ಮಗಳು. ಬಾಲ್ಯದಿಂದಲೂ ಓದಿಗೂ ಸೈ, ಹಾಡಿಗೂ ಸೈ. ವಿನಾಯಕ ಅವರ ಕೈ ಹಿಡಿದು ವೈವಾಹಿಕ ಜೀವನಕ್ಕೆ ಕಾಲಿರಿಸಿ ಮುದ್ದಾದ ಮಗಳ ಅಮ್ಮ ಎನಿಸಿಕೊಂಡಾಗ್ಯೂ ಜೀವನದ ಉತ್ಸಾಹ ಕುಂಠಿತಗೊಳಿಸಿಕೊಳ್ಳಲಿಲ್ಲ. 2004ರಿಂದ ಜರ್ಮನಿಯ ಫ್ರಾಂಕ್‌ಫ‌ರ್ಟ್‌ನಲ್ಲಿ ನೆಲೆಸಿ ಸಂಸಾರದ ನೌಕೆಯನ್ನು ಸರಿಯಾದ ದಿಕ್ಕಿನತ್ತ ಹುಟ್ಟುಹಾಕುತ್ತಾ, ಸೀನಿಯರ್‌ ಅಜಿಲ್‌ ಕೋಚ್‌ ಆಗಿ ಉದ್ಯೋಗವನ್ನು ಮಾಡುತ್ತಾ ಕೇವಲ ಸಂಸಾರ, ಕೆಲಸ, ಸಂಬಳ ಎಂದು ಕಳೆದು ಹೋಗದೆ ತನ್ನ ಹಾಗೆ ಮದುವೆಯಾಗಿ, ಮಕ್ಕಳಾಗಿ, ಅದರಲ್ಲೇ ಕಳೆದು ಹೋದ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗುವಂತೆ ಬಾಳ ಪಯಣದಲ್ಲಿ ತನ್ನ ಸ್ವಂತ ಕನಸನ್ನು ಜೀವಂತಗೊಳಿಸಿಕೊಳ್ಳಬಹುದು ಎಂಬುದಕ್ಕೆ ನಿದರ್ಶನವಾಗಿದ್ದಾರೆ.

ಹೌಟ್‌ ಮಾಂಡೆ ಮಿಸಸ್‌ ಇಂಡಿಯಾ ವರ್ಡ್‌ವೈಡ್‌ ಸೌಂದರ್ಯ ಸ್ಪರ್ಧೆಯಲ್ಲಿ 15,000 ಸ್ಪರ್ಧಾಳುಗಳ ಜತೆ ಸ್ಪರ್ಧಿಯಾಗಿ ಫೈನಲಿಸ್ಟ್‌ ಆಗಿ ಹೊರಹೊಮ್ಮಿರುವುದು ಅವರ ಪರಿಶ್ರಮ ಹಾಗೂ ಅವರ ಜೀವನೋತ್ಸಾಹದಿಂದ. ತಮ್ಮ ಪುಟ್ಟ ಸಂಸಾರ, ಕೆಲಸದ ಜತೆಗೆ ಇದರ ಹಾದಿಗೆ ತನ್ನನ್ನು ತಾನು ತೂಕ ಇಳಿಸಿಕೊಳ್ಳುವುದರಿಂದ ಹಿಡಿದು ವೇದಿಕೆಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಂಡಿರುವ ಪಯಣ ಮತ್ತೊಬ್ಬ ಮಹಿಳೆಗೂ ಮಾದರಿ.

ಏನಿದು ಮಿಸಸ್‌ ಇಂಡಿಯಾ ವರ್ಲ್ಡ್‌ವೈಡ್‌ ?
ಪ್ರಪಂಚದಾದ್ಯಂತ ಇರುವ ವಿವಾಹಿತ ಮಹಿಳೆಯರಿಗಾಗಿ ಅವರ ಸ್ಫೂರ್ತಿಗಾಗಿ ತಾವೂ ಕೂಡ ಮಾನಸಿಕವಾಗಿ ಬಲಿಷ್ಠರು ಹಾಗೂ ಸುಂದರರು ಎಂಬುದನ್ನು ಅರಿತು ತನ್ಮೂಲಕ ಹಲವು ವಿವಾಹಿತ ಮಹಿಳೆಯರನ್ನೂ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪ್ರೇರೇಪಿಸುವ ದೃಷ್ಟಿಯಿಂದ ಸಕಾರಾತ್ಮಕವಾಗಿ ನಡೆಸುತ್ತಿರುವಂತಹ, ಹೆಣ್ಣಿಂದ ಹೆಣ್ಣಿಗಾಗಿ ನಡೆಸುತ್ತಿರುವ ಯೋಜನೆ. ತಮ್ಮ ಪ್ರತಿಭೆಯನ್ನು ಬೆಳಕಿಗೆ ತರಲು ಮತ್ತು ತಮ್ಮಲ್ಲಿರುವ ಸ್ಥಿರತೆ, ಸಮಗ್ರತೆಯನ್ನು ಹೆಚ್ಚಿಸುತ್ತಾ ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಲು ಅನುವು ಮಾಡಿಕೊಡುವ ವಿಶಿಷ್ಟವಾದ ಕೇಂದ್ರಿಯ ಮತ್ತು ಪ್ರಗತಿಪರ ವೇದಿಕೆಯನ್ನು ಒದಗಿಸುವ ಮೂಲಕ ಭಾರತದಲ್ಲಿ ಮಹಿಳೆಯರನ್ನು ಮುಖ್ಯ ಭೂಮಿಕೆಗೆ ತರಲು ಸಹಕಾರಿಯಾಗಿದೆ. ಇದರಿಂದ ಕೇವಲ ಮಹಿಳಾ ಸಶಕ್ತೀಕರಣವಲ್ಲದೆ, ತನ್ನೊಳಗಿನ ತನ್ನನ್ನು ಹುರಿದುಂಬಿಸಿ ಚೈತನ್ಯವನ್ನು ಪ್ರೇರೇಪಿಸಿ ಮನೆ ಮತ್ತು ಮನಸ್ಸನ್ನು ಬೆಳಗಿಸಿಕೊಳ್ಳಲು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಪಥದಲ್ಲಿ ಸಾಗುತ್ತಾ ಸೌಂದರ್ಯ ಸ್ಪರ್ಧೆಗಳ ಜಗತ್ತನ್ನು ಬದಲಾಯಿಸುವ ಗುರಿಯೆಡೆಗೆ ಕಾರ್ಯ ಪ್ರವೃತ್ತವಾಗುವ ಕಾರ್ಯಕ್ರಮ.

ಹೌಟ್‌ ಮಾಂಡೆ ಇಂಡಿಯಾ ಗ್ರೂಪ್‌ನ ಅಧ್ಯಕ್ಷರಾದ ಎಂ.ಆರ್‌. ಭರತ್‌ ಕುಮಾರ್‌ ಭ್ರಮರ್‌ರವರು ಶಿಕ್ಷಣ ಸಂಸ್ಥೆಗಳು, ಪ್ರಯಾಣ, ಫ್ಯಾಷನ್‌, ನಿಯತಕಾಲಿಕೆಗಳು ಹಾಸ್ಪಿಟಾಲಿಟಿ ಮತ್ತು ಬ್ಯೂಟಿ ಪೆಜೆಂಟ್ಸ್‌ ಕ್ಷೇತ್ರಗಳಲ್ಲಿ ಉದ್ಯಮಿಯಾಗಿ 26ಕ್ಕಿಂತ ಹೆಚ್ಚು ವರ್ಷಗಳ ರೋಮಾಂಚನಕಾರಿ ಪ್ರಯಾಣದೊಂದಿಗೆ ಫ್ಯಾಷನ್‌ ಉದ್ಯಮವನ್ನು ನಡೆಸುತ್ತಿದ್ದಾರೆ.

2008ರಲ್ಲಿ ‘ಮಿಸ್‌ ನಾರ್ತ್‌ ಇಂಡಿಯಾ’ ಸೌಂದರ್ಯ ಸ್ಪರ್ಧೆಯೊಂದಿಗೆ ಆರಂಭಿಸಿ ಮುಂದೆ ಭರತ್‌ ಅವರ ನಿರ್ದೇಶನದಲ್ಲಿ ಮತ್ತಷ್ಟೂ ಸ್ಪರ್ಧೆಯನ್ನು ವಿಸ್ತರಿಸಿತು. “Mr. India Worldwide, “Mrs., “Mrs. India Worldwide” ನಂತಹ ಸ್ಪರ್ಧೆಗಳು ಉತ್ತಮ ಸೌಂದರ್ಯ ಸ್ಪರ್ಧೆಯಾಗಿ ಗುರುತಿಸಲ್ಪಟ್ಟಿದೆ. ಭರತ್‌ರವರ ಉತ್ಸಾಹದ ಸಂಧಿ ಮ್ಯಾಗಜಿನ್‌ ವಲಯಕ್ಕೂ ವಿಸ್ತರಿಸಿ ಮುದ್ರಣ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮದಲ್ಲಿ Haut. Monde ಫ್ಯಾಷನ್‌ ಮ್ಯಾಗಜೀನ್‌ಗಳು ಹೊರಬಂದಿವೆ.

ಶಾಂತಿ ಸಜಲ್‌ ರಿಸರ್ಚ್‌ ಆ್ಯಂಡ್‌ ಚಾರಿಟೇಬಲ್‌ ಟ್ರಸ್ಟ್‌ :
2021, ಜುಲೈ 5ರಂದು ಸ್ಥಾಪಿತವಾದ ಶಾಂತಿ ಸಜಲ್‌ ರಿಸರ್ಚ್‌ ಆ್ಯಂಡ್‌ ಚಾರಿಟೇಬಲ್‌ ಟ್ರಸ್ಟ್‌ ನಾವಾಡ ಜಿಲ್ಲೆಯ ಏರೂರಿ ಗ್ರಾಮದಲ್ಲಿ ವಾಸಿಸುವ ಸಮುದಾಯದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯ ಪ್ರೇರಕಶಕ್ತಿಯಾಗಿದೆ. ಇದರ ಸಂಸ್ಥಾಪಕರಾದ ಭರತ್‌ರವರು ಪ್ರಾರಂಭಿಕವಾಗಿ ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಮತ್ತು ಅವಕಾಶಗಳು ಎಂತಹ ಪರಿಸ್ಥಿತಿಯಲ್ಲೂ ಸಮಾನವಾಗಿ ಒದಗಬೇಕೆಂಬ ದೃಷ್ಟಿಯೊಂದಿಗೆ ಕಾರ್ಯಪ್ರವೃತ್ತರಾದರು. ಈ ಮೂಲಕ ಸಮುದಾಯಗಳನ್ನು ಸಶಕ್ತೀಕರಣಗೊಳಿಸುವ ಮತ್ತು ಸಂಸ್ಕೃತಿಯನ್ನು ಪೋಷಿಸುವ ಉದ್ದೇಶದಿಂದ ಮುಂದುವರೆದಿದೆ.

ಮಾನವೀಯತೆಯ ಬದ್ಧತೆಯೊಂದಿಗೆ ಗ್ರಾಮೀಣ ಭಾಗಗಳಲ್ಲಿ ಆವಶ್ಯಕವಿರುವ ಸಂಪನ್ಮೂಲಗಳು ದೊರೆಯುವ ಮತ್ತು ಕಡೆಗಣಿಸಲ್ಪಟ್ಟವರ ಜೀವನವನ್ನು ಉನ್ನತೀಕರಿಸುವ ಮತ್ತು ಸಶಕ್ತಗೊಳಿಸುವ ಧ್ಯೇಯದೊಂದಿಗೆ ಹೌಟ್‌ ಮಾಂಡೆ ಇಂಡಿಯಾ ಗ್ರೂಪ್‌ನ ಅಧ್ಯಕ್ಷರೂ ಮತ್ತು ಸ್ಪರ್ಧಿಗಳೂ ಇದರ ಭಾಗವಾಗಿ ಸಹಾಯಹಸ್ತ ನೀಡಿ, ಆವಶ್ಯಕತೆಯಿರುವವರಿಗೆ ಭರವಸೆಯ ದಾರಿದೀಪವಾಗುವ ಮಹದುದ್ದೇಶ ಹೊಂದಿದ್ದಾರೆ.

ಸೀಸನ್‌ 13ರ ಹೌಟ್‌ ಮಾಂಡೆ ಮಿಸಸ್‌ ಇಂಡಿಯಾ ವರ್ಡ್‌ವೈಡ್‌ ಸೌಂದರ್ಯ ಸ್ಪರ್ಧೆಯಲ್ಲಿ ತಮ್ಮ ಕನಸಿನ ಬೆನ್ನತ್ತಿ ಇಂದು ಫೈನಲಿಸ್ಟ್‌ ಆಗಿ ಹೊರಹೊಮ್ಮಿರುವ ಅಖಿಲ ವಿನಾಯಕ್‌ರವರಿಗೆ ಮತ್ತಷ್ಟೂ ಗೆಲುವುಗಳು ಅವರ ಬಾಳಲ್ಲಿ ಸಿಗಲಿ. ಅವರ ಮಾರ್ಗದರ್ಶನ, ಸ್ಫೂರ್ತಿ ಹಲವಾರು ಮಹಿಳೆಯರಿಗೆ ಬೆಳಕು ಚೆಲ್ಲಲಿ. ಒಬ್ಬ ಸಮರ್ಥ ಮಹಿಳೆ ತಮ್ಮ ಜತೆಯಿರುವ ಮಹಿಳೆಯರನ್ನು ಸಮರ್ಥವಾಗಿಸಬಲ್ಲಳು. ಈ ಸೀಸನ್‌ನ ವಿಜೇತರಾಗಲಿ ಎಂದು ಸ್ನೇಹಿತರಾಗಿ ನಾವು ಆಶಿಸುತ್ತೇವೆ.

*ಶೋಭಾ ಚೌಹಾಣ್‌, ಫ್ರಾಂಕ್‌ಫ‌ರ್ಟ್‌

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

6-tulsi

Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್:‌ 21 ವರ್ಷದ ಹಿಂದೆ ನಡೆದಿದ್ದೇನು?

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.