ಬೃಹತ್ ಅಡ್ಡಪಲ್ಲಕ್ಕಿ ಉತ್ಸವ; ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು
Team Udayavani, Mar 23, 2024, 4:24 PM IST
ಉದಯವಾಣಿ ಸಮಾಚಾರ
ಸವಣೂರು: ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದ ನವ ದಂಪತಿಗಳು ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಹಂಚಿಕೊಂಡು ಉತ್ತಮವಾದ ಜೀವನವನ್ನು ನಡೆಸುವ ಮೂಲಕ ಪ್ರತಿಯೊಬ್ಬರೂ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕಾಶಿ ಜ್ಞಾನಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಡಾ| ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರ ಸ್ವಾಮೀಜಿ ತಿಳಿಸಿದರು.
ರೇಣುಕಾಚಾರ್ಯರ ಜಯಂತಿ, ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಬೃಹತ್ ಅಡ್ಡಪಲ್ಲಕ್ಕಿ ಮಹೋತ್ಸವ ಅಂಗವಾಗಿ ಪಟ್ಟಣದಲ್ಲಿ ರೇಣುಕರ ಮಂದಿರದಲ್ಲಿ ಏರ್ಪಡಿಸಿದ್ದ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೀರಶೈವ ಧರ್ಮವನ್ನು ಯಾವುದೇ ಜಾತಿಗೆ ಸೀಮಿತಗೊಳಿಸದೇ ಮಾನವ ಕುಲಕ್ಕೆ ಜಯವಾಗಲಿ ಎಂದು ಸಾರಿದವರು ರೇಣುಕರು. ವೀರಶೈವ ಲಿಂಗಾಯತದಲ್ಲಿ ಪುರುಷ ಮತ್ತು ಮಹಿಳೆಗೆ ಸಮಾನವಾದ ಅಧಿಕಾರ ನೀಡುವ ಮೂಲಕ ಪಂಚಾಚಾರ್ಯರು ಸಮಾನತೆಯ ಸಂದೇಶ ಸಾರಿದರು. ಸನಾತನ ಧಾರ್ಮಿಕ ಅಚರಣೆಗಳ ಮೂಲಕ ತನ್ನದೇ ಆದ ವೈಭವವನ್ನು ಹೊಂದಿರುವ ಭಾರತ ಮಾತೆಯ ಗೌರವವನ್ನು ಕಾಪಾಡಲು ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕನ್ನು ಕಳೆದುಕೊಳ್ಳದೆ, ಮತದಾನದಲ್ಲಿ ಭಾಗವಹಿಸಿ ಯೋಗ್ಯವಾದ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಹಿರೇಮಣಕಟ್ಟಿ ಮುರಘರಾಜೇಂದ್ರಮಠದ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೂಡಲ ಗುರುನಂಜೇಶ್ವರಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಾವೇರಿ ಹರಸೂರಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿ ಆಶೀರ್ವದಿಸಿದರು. ರಾಜಕುಮಾರ ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸುಭಾಸ ಗಡೆಪ್ಪನವರ, ಮಹೇಶ ಸಾಲಿಮಠ, ಶಂಬಣ್ಣ ಮಟಿಗಾರ, ವಿ.ಎಸ್. ಸಿಂಧೂರ, ಬಿ.ಎಂ. ಪಾಟೀಲ, ಸುಮಂತ ಸಿಂಧೂರ, ಸಂಗಮೇಶ ಏರೇಶಿಮಿ, ನಂದೀಶ ಕಂಬಾಳಿಮಠ, ಮಂಜುನಾಥ ಗಾಣಗೇರ, ಪ್ರವೀಣ ಚರಂತಿಮಠ, ರವತಪ್ಪ ಬಿಕ್ಕಣ್ಣನವರ, ಆನಂದಯ್ಯ ಕಲ್ಮಠ, ಬಾಬಣ್ಣ ಹಾವಣಗಿ, ಮಂಜುನಾಥ ಬೆಣ್ಣಿ, ಮಂಜುನಾಥ ಶೆಟ್ಟರ, ಮಾಂತೇಶ ಹಾವಣಗಿ, ಬಸಯ್ಯ ಮಹಾಂತಿನಮಠ, ಮಹೇಶ ಮುದಗಲ್ ಹಾಗೂ ಇತರರು ಪಾಲ್ಗೊಂಡಿದ್ದರು.
ಭಕ್ತಿ ಧರ್ಮ ಮಹಾಪೂರವಾಗಿ ಸವಣೂರಿನಲ್ಲಿ ಹರಿದಿದೆ. ನಾಡಿನ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದವರು ರೇಣುಕರು. ಸಾವು ನಮ್ಮ ಕೈಯಲ್ಲಿ ಇಲ್ಲಾ. ಯಾವುದು ನಮ್ಮ ಕೈಯಲ್ಲಿ ಇಲ್ಲವೋ ಅದರ ಬಗ್ಗೆ ಹೆಚ್ಚಿನ ಚಿಂತನೆ ಮಾಡುವುದು ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ನ್ಯಾಯ, ನೀತಿ, ಧರ್ಮಕ್ಕೆ ತಮ್ಮ ಸೇವೆ ಸಲ್ಲಿಸಿದರು ಭೂಮಂಡಲವನ್ನು ಬಿಟ್ಟುಹೋಗಿ ದೈವ ಸ್ವರೂಪ ತಾಳಿದ್ದಾರೆ.
ಕ್ಷೇತ್ರದ ಜನತೆ ನೀಡಿದ ಪ್ರೀತಿ, ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ. ನನ್ನ ಜೀವಮಾನದ ಕೊನೆವರೆಗೂ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತೇನೆ.
ಬಸವರಾಜ ಬೊಮ್ಮಾಯಿ, ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ
ನಮ್ಮ ದೇಶದ ಪರಂಪರೆ, ಸಂಸ್ಕೃತಿ ಉಳಿವಿಗೆ ರೇಣುಕರ ಕೊಡುಗೆ ಅಪಾರ. ನಮ್ಮಲ್ಲಿನ ಅಪಾರವಾದ ಧಾರ್ಮಿಕತೆ ದೇಶದಲ್ಲಿ ನೆಮ್ಮದಿ ಶಾಂತಿ ಉಳಿವಿಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಸನಾತನ ಧರ್ಮ ಉಳಿವಿಗೆ ಹಗಲಿರುಳು ಶ್ರಮವಹಿಸುವುದರ ಜೊತೆಗೆ ದೇಶದ ಅಭಿವೃದ್ಧಿಯನ್ನು ಅತ್ಯಂತ ಸಮೃದ್ಧ ಪಡಿಸಲಾಗುತ್ತಿದೆ.
ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.