SRHvsKKR: ಅತ್ಯುತ್ತಮ ಬೌಲಿಂಗ್ ಮಾಡಿದರೂ ಹರ್ಷಿತ್ ರಾಣಾಗೆ ಭಾರೀ ದಂಡ!
Team Udayavani, Mar 24, 2024, 9:50 AM IST
ಕೋಲ್ಕತ್ತಾ: 17ನೇ ಸೀಸನ್ ಐಪಿಎಲ್ ನ ಎರಡನೇ ದಿನ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಆತಿಥೇಯ ತಂಡವು ನಾಲ್ಕು ರನ್ ಅಂತರದ ಗೆಲುವು ಸಾಧಿಸಿದೆ.
ಒಂದು ಹಂತದಲ್ಲಿ ಸಂಪೂರ್ಣ ಹೈದರಾಬಾದ್ ಕಡೆಗೆ ತಿರುಗಿದ್ದ ಪಂದ್ಯವನ್ನು ಕೊನೆಯ ಓವರ್ ನಲ್ಲಿ ಕೆಕೆಆರ್ ಯುವ ಬೌಲರ್ ಹರ್ಷಿತ್ ರಾಣಾ ಅದ್ಭುತ ಓವರ್ ಎಸೆದು ತಂಡಕ್ಕೆ ಗೆಲುವು ತಂದಿದ್ದರು. ಕೊನೆಯ ಓವರ್ ನಲ್ಲಿ ಹೈದರಾಬಾದ್ ಗೆ 13 ರನ್ ಬೇಕಿತ್ತು, ಕ್ಲಾಸನ್ ಮತ್ತು ಶಹಬಾಜ್ ಅಹಮದ್ ಕ್ರೀಸ್ ನಲ್ಲಿದ್ದರು. ಮೊದಲ ಎಸೆತದಲ್ಲಿ ಸಿಕ್ಸರ್ ಹೋದರೂ ನಂತರ ಎರಡು ವಿಕೆಟ್ ಕಿತ್ತ ಹರ್ಷಿತ್ ತಂಡಕ್ಕೆ ಜಯ ತಂದಿತ್ತರು.
ಹರ್ಷಿತ್ ಬೌಲಿಂಗ್ ಮೂಲಕ ಹೀರೋ ಆದರೂ, ಅವರಿಗೆ ದಂಡ ವಿಧಿಸಲಾಗಿದೆ. ಹೈದರಾಬಾದ್ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದ ವೇಳೆ ಹರ್ಷಿತ್ ರಾಣಾ ಅತಿರೇಕದ ಸಂಭ್ರಮಾಚರಣೆ ಮಾಡಿದ್ದರು. ಇದಕ್ಕಾಗಿ ದಂಡ ಹಾಕಲಾಗಿದೆ.
ಅಗರ್ವಾಲ್ ವಿಕೆಟ್ ಪಡೆದ ವೇಳೆ ಭಾರಿ ಸಂಭ್ರಮಾಚರಣೆ ಮಾಡಿದ ರಾಣಾ, ಬ್ಯಾಟರ್ ಗೆ ಫ್ಲೈಯಿಂಗ್ ಕಿಸ್ ಮೂಲಕ ಸೆಂಡ್ ಆಫ್ ಮಾಡಿದರು. ಆಗ ಕಮೆಂಟರಿ ಮಾಡುತ್ತಿದ್ದ ಸುನಿಲ್ ಗಾವಸ್ಕರ್ ಅವರು ರಾಣಾ ನಡೆಯನ್ನು ಟೀಕಿಸಿದರು.
Sledging and Celebration is a part of game
Nothing wrong in that 🙃Harshith Rana 🙇🔥 pic.twitter.com/fiplZl63eP
— CHINNA (@Chinnoooda) March 23, 2024
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ಹರ್ಷಿತ್ ಎರಡು ಲೆವೆಲ್ 1 ಅಪರಾಧಗಳನ್ನು ಎಸಗಿದ್ದಾರೆ. ಕ್ರಮವಾಗಿ ಅವರ ಪಂದ್ಯ ಶುಲ್ಕದ 10 ಮತ್ತು 50 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಮ್ಯಾಚ್ ರೆಫ್ರಿಯ ನಿರ್ಬಂಧಗಳನ್ನು ವೇಗಿ ಒಪ್ಪಿಕೊಂಡಿದ್ದಾರೆ ಎಂದೂ ಹೇಳಿಕೆ ತಿಳಿಸಿದೆ.
“ಮಾರ್ಚ್ 23 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತಮ್ಮ ತಂಡದ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಪಂದ್ಯದ ಸಂದರ್ಭದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ ಹರ್ಷಿತ್ ರಾಣಾ ಅವರ ಒಟ್ಟು ಪಂದ್ಯ ಶುಲ್ಕದ ಒಟ್ಟು 60 ಪ್ರತಿಶತವನ್ನು ದಂಡ ವಿಧಿಸಲಾಗಿದೆ “ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.