ಹಾಡಿನಲ್ಲಿ ‘ಅವತಾರ ಪುರುಷ’ನ ಗುಣಗಾನ: ರ್ಯಾಪ್ ಸಾಂಗಿನಲ್ಲಿ ಶರಣ್ ಮಿಂಚಿಂಗ್
Team Udayavani, Mar 25, 2024, 2:35 PM IST
ನಟ ಶರಣ್ ಅಭಿನಯದ “ಅವತಾರ ಪುರುಷ 2′ ಸಿನಿಮಾದ ಬಿಡುಗಡೆಗೆ ಚಿತ್ರತಂಡ ಭರದ ತಯಾರಿ ನಡೆಸುತ್ತಿದೆ. ಇದೇ ಏಪ್ರಿಲ್ 5ಕ್ಕೆ “ಅವತಾರ್ ಪುರುಷ 2′ ಸಿನಿಮಾ ತೆರೆಗೆ ಬರುತ್ತಿದ್ದು, ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ಸಿನಿಮಾದಲ್ಲಿ ಶರಣ್ ಅವರ ಪಾತ್ರವನ್ನು ಪರಿಚಯಿಸುವ ರ್ಯಾಪ್ ಹಾಡೊಂದನ್ನು ಬಿಡುಗಡೆ ಮಾಡಿದೆ. ಕನ್ನಡದಲ್ಲಿ ಈಗಾಗಲೇ ರ್ಯಾಪ್ ಸಾಂಗ್‌ನಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಎಂ. ಸಿ. ಬಿಜ್ಜು, ಔರಾ ಈ ಹಾಡಿಗೆ ಧ್ವನಿಯಾಗಿದ್ದು, ಅಭಿನಂದನ್ ಕಶ್ಯಪ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.
ಇತ್ತೀಚೆಗೆ ನಡೆದ ಈ ರ್ಯಾಪ್ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಚಿತ್ರತಂಡ “ಅವತಾರ ಪುರುಷ 2′ ಸಿನಿಮಾದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು.
ಮೊದಲಿಗೆ ಮಾತನಾಡಿದ ನಿರ್ದೇಶಕ ಸುನಿ, “ನಿರ್ಮಾಪಕರು ಈ ಥರ ರ್ಯಾಪ್ ಹಾಡನ್ನು ಮಾಡೋಣ ಎಂದಾಗ, ಮೊದಲು ಬೇಡ ಅಂದಿದ್ದೆ. ನಿರ್ಮಾಪಕರು ಪಟ್ಟು ಹಿಡಿದು ಮಾಡೋಣ ಎಂದರು. ಕೆಲವೆ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣವಾಯಿತು. ಶಿಶುನಾಳ ಶರೀಫರ “ತರವಲ್ಲ ತಂಗಿ ನಿನ್ನ ತಂಬೂರಿ’ ಹಾಡಿನ ಮೊದಲ ಸಾಲಿನಿಂದ ಈ ಹಾಡು ಆರಂಭವಾಗುತ್ತದೆ. ತುಂಬ ಚೆನ್ನಾಗಿ ಈ ಹಾಡು ಮೂಡಿ ಬಂದಿದ್ದು ಆಡಿಯನ್ಸ್‌ಗೆ ಇಷ್ಟವಾಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶರಣ್ ಅವರಿಗೆ ಈ ಸಿನಿಮಾದಲ್ಲಿ ಒಂದು ವಿಶೇಷ ಹಾಡೊಂದು ಇದ್ದರೆ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ಸ್ಪೆಷಲ್ ರ್ಯಾಪ್ ಸಾಂಗ್ ಮಾಡಿದ್ದೇವೆ. ಮೊದಲಿಗೆ ನಿರ್ದೇಶಕ ಸುನಿ ಬೇಡವೆಂದರೂ, ಆ ನಂತರ ಅವರನ್ನು ಒಪ್ಪಿಸಿ ಈ ಹಾಡು ಮಾಡಿದೆವು. ಹಾಡು ತುಂಬ ಚೆನ್ನಾಗಿ ಬಂದಿದೆ’ ಎಂಬುದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಾತು.
ಕಾರ್ಯಕ್ರಮದಲ್ಲಿ ಹಾಜರಿದ್ದ ನಟರಾದ ಶರಣ್, ಗಾಯಕರಾದ ಎಂ. ಸಿ. ಬಿಜ್ಜು, ಔರಾ ಹಾಗೂ ಸಂಗೀತ ನಿರ್ದೇಶಕ ಅಭಿನಂದನ್ ಕಶ್ಯಪ್, ಹಾಗೂ ಈ ಹಾಡಿಗೆ ಹೆಜ್ಜೆ ಹಾಕಿರುವ ನಟಿ ಸಾತ್ವಿಕ, ನೃತ್ಯ ಸಂಯೋಜಕ ಮಧು, ವಿತರಕ ಮೋಹನ್ ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸದ್ಯ “ಆನಂದ್ ಆಡಿಯೋ’ ಯು-ಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ನಿಧಾನವಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು “ಅವತಾರ ಪುರುಷ 2′ ಸಿನಿಮಾದಲ್ಲಿ ಶರಣ್ ಅವರಿಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದು, ಉಳಿದಂತೆ ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯಾ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.