Mascow ದಾಳಿ ಮಾಡಿದ್ದು ಐಸಿಸ್ ಎಂಬುದು ಖಚಿತವೇ? ಅಮೆರಿಕಕ್ಕೆ ರಷ್ಯಾ ಪ್ರಶ್ನೆ
Team Udayavani, Mar 25, 2024, 9:18 PM IST
ಮಾಸ್ಕೋ: 150 ಜನರ ಸಾವಿಗೆ ಕಾರಣವಾದ ಮಾಸ್ಕೋ ದಾಳಿಗೆ ಐಸಿಸ್-ಖೊರಾಸಾನ್ ಉಗ್ರರು ಕಾರಣ ಎಂದು ಅಮೆರಿಕ ಹೇಳಿದೆ. ಈ ದಾಳಿಯ ಹಿಂದಿರುವುದು ಉಕ್ರೇನ್ ಎಂಬ ಆರೋಪ ಮಾಡಿದ್ದ ರಷ್ಯಾ, ಈ ದಾಳಿ ಐಸಿಸ್ ನಡೆಸಿದ್ದು ಎಂಬುದು ನಿಮಗೆ ಖಚಿತವಾಗಿದೆಯೇ ಎಂದು ಅಮೆರಿಕವನ್ನು ಪ್ರಶ್ನಿಸಿದೆ.
ಉಕ್ರೇನ್ ಮೇಲೆ 2 ವರ್ಷಗಳಿಂದ ಯುದ್ಧ ನಡೆಸುತ್ತಿರುವ ರಷ್ಯಾ ಈ ದಾಳಿಯ ಹಿಂದೆ ಉಕ್ರೇನ್ ಇದೆ ಎಂದು ಆರೋಪಿಸಿದೆ. ಇದರ ನಡುವಲ್ಲೇ ದಾಳಿಯ ಹೊಣೆಯನ್ನು ಐಸಿಸ್-ಕೆ ಹೊತ್ತುಕೊಂಡಿದ್ದರೂ, ಅವರು ಉಕ್ರೇನ್ನಿಂದ ಬೆಂಬಲದಿಂದಲೇ ಹೀಗೆ ನಡೆದುಕೊಂಡಿದ್ದಾರೆ ಎಂದು ಪುಟಿನ್ ಹೇಳಿದ್ದರು. ಇದರ ನಡುವೆ ದಾಳಿಗೆ ಐಸಿಸ್ ಕಾರಣ ಎಂದು ಅಮೆರಿಕ ಹೇಳಿರುವುದಕ್ಕೆ ಕೋಪಗೊಂಡಿರುವ ರಷ್ಯಾ, ನಿಜವಾಗಿಯೂ ಇದು ಐಸಿಸ್ ನಡೆಸಿರುವ ದಾಳಿ ಎಂಬುದು ನಿಮಗೆ ಖಚಿತವಿದೆಯೇ ಎಂದು ಪ್ರಶ್ನಿಸಿದೆ.
ಇಬ್ಬರು ಉಗ್ರರ ತಪ್ಪೊಪ್ಪಿಗೆ?
ಮಾಸ್ಕೋ ದಾಳಿಗೆ ಸಂಬಂಧಿಸಿ ಬಂಧಿತರಾದ ನಾಲ್ವರು ಉಗ್ರರನ್ನು ಸೋಮವಾರ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಇಬ್ಬರು ಆರೋಪಿಗಳು ಈಗಾಗಲೇ ತಪ್ಪೊಪ್ಪಿಕೊಂಡಿದ್ದಾರೆ ಎಂದು ಕೋರ್ಟ್ಗೆ ಮಾಹಿತಿ ನೀಡಲಾಗಿದೆ. ಆದರೆ, ರಷ್ಯಾದ ಕೆಲವು ಮಾಧ್ಯಮಗಳು ನಾಲ್ವರೂ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.