Daily horoscope;ಅಧಿಕ ಶುಭಫಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಆನಂದಾನುಭವ
Team Udayavani, Mar 27, 2024, 7:19 AM IST
ಮೇಷ: ಅಧಿಕ ಶುಭಫಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಆನಂದಾನುಭವ ಉದ್ಯಮಿಗಳಿಗೆ ಕೆಲವು ವಿಭಾಗಗಳಲ್ಲಿ ಅಧಿಕ ಲಾಭ. ವ್ಯವಹಾರ ವಿಸ್ತರಣೆಯಿಂದ ಅನುಕೂಲ. ಷೇರು ಹೂಡಿಕೆಯಲ್ಲಿ ಲಾಭ. ದೇವತಾ ಕಾರ್ಯಗಳಲ್ಲಿ ಮಗ್ನತೆ.
ವೃಷಭ: ಎಲ್ಲ ವರಮಾನ ಮೂಲಗಳಲ್ಲೂ ತಡೆಯಿಲ್ಲದ ಪ್ರಗತಿ. ಉದ್ಯೋಗಸ್ಥರಿಗೆ ಶೀಘ್ರವಾಗಿ ಕಾರ್ಯ ಮುಗಿಸುವ ಆತುರ. ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷೆಗಿಂತ ಹೆಚ್ಚು ಲಾಭ.
ಮಿಥುನ: ಉದ್ಯೋಗದಲ್ಲಿ ಗೌರವದ ಸ್ಥಾನ ಹಾಗೂ ಸಂಭಾವನೆ. ಕೃಷಿ ಕ್ಷೇತ್ರದಲ್ಲಿ ಪ್ರಯೋಗಗಳು ಯಶಸ್ವಿ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಯತ್ತ ಗಮನ. ಮನೆಯವರ ಆರೋಗ್ಯ ಸುಧಾರಣೆ.
ಕರ್ಕಾಟಕ: ಉದ್ಯೋಗಸ್ಥಾನದಲ್ಲಿ ಹೊಸ ಬಗೆಯ ಕಾರ್ಯಗಳಿಗೆ ಪ್ರಾಶಸ್ತ್ಯ ಉದ್ಯಮಗಳಲ್ಲಿ ಮಾಲಿಕರು ಮತ್ತು ನೌಕರರ ನಡುವೆ ಆಪ್ತ ಸಂಬಂಧ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ. ಗೃಹೋದ್ಯಮಗಳ ಸ್ಥಿತಿ ಸುಧಾರಣೆ.
ಸಿಂಹ: ಸರಕಾರಿ ನೌಕರರಿಗೆ ಅನಪೇಕ್ಷಿತ ಸ್ಥಳಕ್ಕೆ ವರ್ಗಾವಣೆಯ ಆತಂಕ. ಉದ್ಯಮಿಗಳಿಗೆ ಅನುಕೂಲ. ಸ್ವೋದ್ಯೋಗಿ ಮಹಿಳೆಯರಿಗೆ ಪೂರ್ಣ
ಪ್ರಮಾಣದಲ್ಲಿ ಯಶಸ್ಸು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು.
ಕನ್ಯಾ: ಸಕಾಲದಲ್ಲಿ ಮುಗಿಯುವ ಕಾರ್ಯಗಳು. ಉದ್ಯೋಗದಲ್ಲಿ ನಿಯತ್ತು ಮತ್ತು ಶಿಸ್ತಿಗಾಗಿ ಗೌರವ. ಸರಕಾರಿ ಅಧಿಕಾರಿಗಳಿಗೆ ಅಧಿಕಕೆಲಸದ ಹೊರೆ. ಬಂಧುಗಳ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ಸಂಸಾರದಲ್ಲಿ ಸಾಮರಸ್ಯ.
ತುಲಾ: ಉದ್ಯೋಗ ಸ್ಥಾನದಲ್ಲಿ ಸಮಾಧಾನ. ಸಣ್ಣ ಉದ್ಯಮ ಘಟಕಗಳ ವಿಸ್ತರಣೆ. ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ಕೌಟುಂಬಿಕ ವಿವಾದ ಪರಿಹಾರ.
ವೃಶ್ಚಿಕ: ಸಾಂಸಾರಿಕ ಜೀವನದಲ್ಲಿ ಸಂತೃ ಪ್ತಿಯ ಅನುಭವ. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ.ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಅವಿವಾಹಿತ ಕನ್ಯೆಯರಿಗೆ ಶೀಘ್ರ ವಿವಾಹ ಯೋಗ. ಹಿರಿಯರ ಆರೋಗ್ಯ ಉತ್ತಮ.
ಧನು: ಸ್ಥಿರವಾದ ವರಮಾನ ಮೂಲ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ಕಾರ್ಯಗಳು ಶೀಘ್ರ ಮುಕ್ತಾಯ. ಕೃಷ್ಯುತ್ಪನ್ನಗಳು,ಹಣ್ಣು ತರಕಾರಿ ಮಾರಾಟದಿಂದ ಲಾಭ. ದೂರದ ಬಂಧುಗಳಿಂದ ಶುಭ ಸಮಾ ಚಾರ.ಗುರುಸಮಾನರ ಆಗಮನದಿಂದ ಹರ್ಷ.
ಮಕರ: ಸಮಯಕ್ಕೆ ಸರಿಯಾಗಿ ಕಾರ್ಯ ಗಳು ಮುಗಿದ ಸಮಾಧಾನ. ಕಟ್ಟಡ ನಿರ್ಮಾಪಕರಿಗೆ ಕಾರ್ಯ ಮುಗಿಸುವ ತರಾತುರಿ ಬಂಧುಗಳಮನೆಯಲ್ಲಿ ಪೂಜಾ ಕಾರ್ಯಕ್ರಮ. ವಿದ್ಯುತ್ ಸಾಧನಗಳ ದುರಸ್ತಿಯವರಿಗೆ ಒಳ್ಳೆಯ ಆದಾಯ.
ಕುಂಭ: ನಿರ್ವಿಘ್ನವಾಗಿ ಮುಗಿಸಲು ಪೂರಕ ವಾತಾವರಣ ಉದ್ಯಮದ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆ. ಯಂತ್ರೋ ಪಕರಣಗಳು ಮತ್ತು ವಾಹನ ಬಿಡಿಭಾಗಗಳಿಗೆ ಅಧಿಕ ಬೇಡಿಕೆ. ಗೃಹೋತ್ಪನ್ನಗಳ ಜನಪ್ರಿಯತೆ ವೃದ್ಧಿ. ಸಂಸಾರದಲ್ಲಿ ನೆಮ್ಮದಿ.
ಮೀನ: ಎಲ್ಲ ಯೋಜನೆಗಳು ನಿರ್ವಿಘ್ನವಾಗಿ ಮುಂದುವರಿಕೆ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ . ಸರಕಾರಿ ಕಾರ್ಯಾಲಯಗಳಲ್ಲಿ ಸಮಯಕ್ಕೆ ಸರಿಯಾದ ಸೇವೆಯಿಂದ ಗ್ರಾಹಕರಿಗೆ ಹರ್ಷ. ಪೂರಕ ವೃತ್ತಿಯ ಆಯ್ಕೆಯಲ್ಲಿ ಗಟ್ಟಿ ನಿರ್ಧಾರ. ಮಕ್ಕಳ ಶಿಕ್ಷಣದಲ್ಲಿ ಪ್ರಗತಿ. ಹಿರಿಯರಿಗೆ, ಸಂಗಾತಿಗೆ ನೆಮ್ಮದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.