World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಅಮಾನವೀಯ ಸಂಶೋಧನೆಗಳನ್ನು ನಾವು ನಿರ್ಭಿಡೆಯಿಂದ ದೂರ ತಳ್ಳುವ ಛಾತಿ ಪ್ರದರ್ಶಿಸಬೇಕಾಗಿದೆ...

Team Udayavani, Mar 27, 2024, 1:49 PM IST

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಜಾನ್ ಫೋಸ್ಸೇ 2023 ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ನಾರ್ವೆಜಿಯನ್ ನಾಟಕಕಾರ ಜಾನ್ ಫೋಸ್ಸೇ 2024ರ ವಿಶ್ವ ರಂಗಭೂಮಿ ದಿನದ ರಂಗ ಸಂದೇಶವನ್ನು ನೀಡಿದ್ದಾರೆ .

ಕಲೆ ಕಲಾವಿದರು ಮತ್ತು ಶಾಂತಿಯ ಕುರಿತಾಗಿ ಜಾನ್ ಫೋಸ್ಸೇ ನೀಡಿರುವ ರಂಗ ಸಂದೇಶದ ಕನ್ನಡಾನುವಾದ ಇಲ್ಲಿದೆ .ಕನ್ನಡಾನುವಾದ: ಪ್ರಶಾಂತ ಅನಂತಾಡಿ

ಈ ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯು ಅನನ್ಯ. ಹಾಗಿದ್ದರೂ ಆತ ಅನ್ಯರನ್ನು ಪ್ರೀತಿಸಬಲ್ಲ. ನಮ್ಮ ನಮ್ಮ ಬಾಹ್ಯ ಚಹರೆಗಳು, , ಪರಸ್ಪರ ಭಿನ್ನವಾಗಿರುವ ಸಹಜ ಏರು ತಗ್ಗುಗಳು. ಆದರೆ ಅರಿವು ಮೀರಿದ ಒಂದು ವಿಶಿಷ್ಟ ಅನನ್ಯತೆಯು ಪ್ರತಿಯೊಬ್ಬನ ಅಂತರಾಳದಲ್ಲಿ ಅಂತರ್ಗತವಾಗಿರುವುದರಿಂದ ಆ ಅರಿವು ಮಾತ್ರ ಅವನಿಗಷ್ಟೇ ಸೀಮಿತವಾಯಿತು. ಅದನ್ನೇ ನಾವು ಆತನೊಳಗಿನ ಚೈತನ್ಯ ಅಥವಾ ಆತ್ಮ ಎಂದು ಕರೆಯಬಹುದು. ಅಥವಾ ಈ ಪರಿಭಾಷೆಯು ಸಮಾಧಾನಕರ ಅಲ್ಲವಾಗುವುದಾದರೆ ಅದನ್ನು ಯಾವುದೇ ಹೆಸರಿನಿಂದ ಗುರುತಿಸದೇ ಆ ಅನನ್ಯತೆಯನ್ನು ಅದರಷ್ಟಕ್ಕೆ ಬಿಟ್ಟುಬಿಡೋಣ.
ಆದರೆ ನಾವು ಯಾವಾಗ ಇನ್ನೊಬ್ಬರಂತಿಲ್ಲವೋ ಅದೇ ಭಾವದಲ್ಲಿ ಪರಸ್ಪರ ಸಾದೃಶ್ಯರೂ ಆಗಿರುತ್ತೇವೆ.

ಈ ಜಗತ್ತಿನ ಮಾನವರೆಲ್ಲರೂ ಅವರು ಆಡುವ ಭಾಷೆ, ಚರ್ಮದ , ಕೂದಲಿನ ಬಣ್ಣಗಳನ್ನು ಹೊರತುಪಡಿಸಿದರೆ ಮೂಲಭೂತವಾಗಿ ಎಲ್ಲರೂ ಸಮಾನರೇ ಆಗಿದ್ದಾರೆ. ಇದೊಂದು ರೀತಿಯ ವಿರೋಧಾಭಾಸ ಇದ್ದಂತೆ. ಈ ಜಗತ್ತಿನ ಜನರೆಲ್ಲರೂ ಒಂದೇ ಆಗಿದ್ದರೂ ಪರಸ್ಪರ ವಿಭಿನ್ನರಾಗಿರುವುದು ಒಂದು ಚೋದ್ಯ. ಬಹುಶಃ ಮನುಷ್ಯ ಸ್ವಭಾವತ ವಿರೋಧಾಭಾಸಿಯೇ ಆಗಿದ್ದಾನೆ ಎಂದೆನಿಸುತ್ತದೆ .

ಬದಲಾಗಿ ನಮ್ಮ ದೇಹ ಮತ್ತು ಚೈತನ್ಯಗಳ ಸಮನ್ವಯದ ನಡುವೆ ನಾವು ತೀರಾ ಪ್ರಾಪಂಚಿಕವಾದ ಸ್ಪಷ್ಟವಾದ ನಿಲುವುಗಳ ಅಸ್ತಿತ್ವ ಹೊಂದಿದವರಾಗಿದ್ದೇವೆ. ಮತ್ತು ಈ ಭೌತಿಕ ವ್ಯವಹಾರಗಳನ್ನು ಪ್ರಪಂಚವೆಂಬ ಮಿತಿಗಳನ್ನು ಮೀರಿ ಉಜ್ವಲಿಸಲು ಮಾಡುವ ಪ್ರಯತ್ನಗಳನ್ನು ಒಳಗೊಳ್ಳಲು ಹೆಣಗಾಡುವ ವ್ಯಕ್ತಿಗಳೇ ಆಗಿರುತ್ತೇವೆ. ಇಂತಹ ಜಾಯಮಾನವೇ ಕಲೆ. ಕಲೆ ಮಾತ್ರವೇ ಈ ಏಕ ಮಾತ್ರ ಅನನ್ಯತೆಯನ್ನು ಸಾರ್ವತ್ರಿಕ ನೆಲೆಗಳಾಗಿ ಬೆಸೆಯಬಲ್ಲ ಒಂದು ಅದ್ಭುತವಾದ ಶಕ್ತಿ ಆಗಿದೆ. ಕಲೆಯ ಮೂಲಕ ನಾವು ಜೀವ ಭಾವಗಳ ವ್ಯತ್ಯಾಸ ಅಸ್ಮಿತೆಗಳನ್ನು ಅರ್ಥೈಸಿಕೊಳ್ಳಬಹುದು. ಹೀಗೆ ಸಾಧ್ಯವಾಗುವುದರಿಂದಲೇ ಕಲೆಯು ಭಾಷಾ ಪರಿಧಿಗಳನ್ನು, ಭೌಗೋಳಿಕ ಗಡಿರೇಖೆಯನ್ನು, ದೇಶಗಳ ಭಾಷೆಗಳನ್ನು ಮೀರಿ ನಿಲ್ಲಬಹುದು. ಕಲೆಯು ಪ್ರತಿಯೊಂದು ಅಂತರ್ಗತ ಮೌಲ್ಯಗಳನ್ನು ಮಾತ್ರ ಹೇಳಬಹುದಲ್ಲದೆ ಪ್ರತಿಯೊಂದು ಜನ ಸಮುದಾಯವೂ ದೇಶದ ಸೌಹಾರ್ದತೆಯ ಹೊಸ ಹೆಣಿಗೆಯನ್ನು ರಚಿಸಬಹುದಾಗಿದೆ.

ಈ ಪ್ರಸ್ತುತಿಯಲ್ಲಿ ಕಲಾ ಪ್ರಪಂಚದ ಎಲ್ಲಾ ನಮೂನೆಯ ವ್ಯತ್ಯಾಸಗಳನ್ನು ಸಪಾಟಾಗಿಸಿ ಎಲ್ಲವನ್ನೂ ಸಮಾನವಾಗಿಸುವ ಕಾರ್ಯವನ್ನು ಮಾಡಲಾಗುವುದಿಲ್ಲ. ಅದರ ಬದಲಾಗಿ ಯಾವುದು ನಿಜವಾಗಿ ವ್ಯತ್ಯಸ್ತವಾಗಿರುವುದು? ಯಾವುದು ನಿಮಗೆ ಸಂಬಂಧಪಟ್ಟದ್ದು ಅಲ್ಲ ? ಎಂಬುದನ್ನು ನಿಖರವಾಗಿ ನಮಗೆ ತೋರಿಸುವ ಕಾರ್ಯವನ್ನು ಮಾಡುತ್ತದೆ.

ಎಲ್ಲಾ ಅತ್ಯುತ್ತಮ ಕಲಾಪ್ರಕಾರಗಳು ಅತ್ಯಂತ ನಿಖರವಾಗಿ ನಮ್ಮೊಳಗೆ ತಮ್ಮದಲ್ಲದ ಒಂದೊಂದು ವಿಚಾರಗಳನ್ನೂ ನಾವು ನಮ್ಮೊಳಗೆ ಅರ್ಥೈಸಿಕೊಳ್ಳಲಾರದ ಒಂದಷ್ಟು ಕುತೂಹಲಗಳನ್ನು ಒಳಗೊಂಡಿರುತ್ತದೆ. ಮತ್ತು ಅದೇ ಹೊತ್ತಿಗೆ ನಮಗೆ ಅರ್ಥವಾಗಿಸುವ ಭಾವ ಬದ್ಧತೆಯ ಜಟಿಲತೆಯನ್ನೂ ಹೊಂದಿರುತ್ತದೆ. ಇದರೊಳಗೆ ಹುದುಗಿರುವ ನಿಗೂಢತೆಗಳು ನಮ್ಮ ಅತೀಂದ್ರಿಯತೆಯ ಮೆಟ್ಟಿಲಾಗುತ್ತದೆ.

ಕೆಲವೊಮ್ಮೆ ಅದು ನಮ್ಮೊಳಗೆ ನಮಗರಿವಿಲ್ಲದೆಯೇ ನಮ್ಮ ನಮ್ಮ ವಿವೇಚನೆಗಳಾಚೆ ಚಲಿಸುವಂತೆ ಮಾಡಿಬಿಟ್ಟಿರುತ್ತದೆ. ಮತ್ತು ಹಾಗೆ ಮಾಡಿ ಬಿಡುವುದರಿಂದ ಅಲ್ಲೊಂದು ಉತ್ಕೃಷ್ಟವಾದ ಕ್ರಿಯಾಶೀಲತೆಯ ಸೃಷ್ಟಿ ನಡೆದು ಅದನ್ನು ಒಂದು ಕಲಾ ಪ್ರಕಾರವಾಗಿ ಮಾಡಿಬಿಡುತ್ತದೆ. ಜೊತೆಗೆ ನಮ್ಮನ್ನು ಜೊತೆಯಾಗಿ ಕರೆದೊಯ್ಯಬಲ್ಲ ಶಕ್ತಿಯನ್ನು ಹೊಂದಿರುತ್ತದೆ .

ಎರಡು ವೈರುಧ್ಯಗಳನ್ನು ಒಟ್ಟಿಗೆ ಬೆಸೆಯಬಲ್ಲ ಒಂದು ಅಭಿಪ್ರಾಯವೇನಾದರೂ ಹೇಳಲು ನನಗಂತೂ ಸಿಕ್ಕಿಲ್ಲ. ಈ ಜಗತ್ತಿನಲ್ಲಿ ನಾವು ಆಗಾಗ್ಗೆ ಕಾಣುವ ಅನಾವಶ್ಯಕ ಸಂಘರ್ಷಗಳಿಂದ ಉಂಟಾದ ಮರು ಹೊಡೆತದಿಂದ ಈ ಪರಿಸ್ಥಿತಿಯು ಯಾವುದೇ ಬಾಹ್ಯ ವಿಚಾರಗಳಿಗೆ, ಅಧಿಕ ನ್ಯಾಯ ಸಮ್ಮತ ವಿಚಾರಗಳಿಗೆ, ಬಹಳ ವಿನಾಶಕಾರಿಯಾದ ಉನ್ಮಾದತೆಯಿಂದ ಉಂಟಾಗುವ ಅಪಾಯವನ್ನು ಹೊಂದಿದೆ.

ಈ ದಿನಗಳಲ್ಲಿ ನಾವು ತಂತ್ರಜ್ಞಾನದ ಫಲವಾಗಿ ಉದಿಸಿದ ಅಮಾನವೀಯ ಸಂಶೋಧನೆಗಳನ್ನು ನಾವು ನಿರ್ಭಿಡೆಯಿಂದ ದೂರ ತಳ್ಳುವ ಛಾತಿ ಪ್ರದರ್ಶಿಸಬೇಕಾಗಿದೆ .ಇದು ನಮ್ಮ ನಡುವೆ ಭಯೋತ್ಪಾದಕತೆ , ಯುದ್ಧ, ಜನಗಳ ನಡುವೆ ಮೃಗೀಯತೆಯ ಭಾವ ಇತ್ಯಾದಿಗಳಿಂದ ಇವತ್ತು ಪ್ರತಿಯೊಬ್ಬ ಮನುಷ್ಯನೂ ಇನ್ನೊಬ್ಬನ ಉಪಸ್ಥಿತಿಯನ್ನು ಅನುಮಾನದಿಂದಲೇ ನೋಡುವಂತಹ ಸ್ಥಿತಿ ಸೃಷ್ಟಿಯಾಗಿದೆ. ತನ್ನನ್ನೇ ಹೊರತು ಪಡಿಸಿದ ಮಗದೊಂದು ಮಾನವನನ್ನು ಎಚ್ಚರಿಸುವ ಉಪಸ್ಥಿತಿಯು ಅಸಹನೀಯವಾಗಿ ಬಿಡುವ ಸ್ಥಿತಿಗೆ ಮಾನವನ ಆಲೋಚನೆಗಳು ಉರುಳುತ್ತಿವೆ. ಹಾಗಾಗಿ ವಿವಿಧತೆಯನ್ನು ಅನುಮಾನಿಸಿಕೊಂಡು ಅನನ್ಯತೆ ಮತ್ತು ಅಸ್ಮಿತೆಗಳನ್ನು ಮರೆಮಾಚಿ ತರುವಂತಹ ಬದುಕಿನ ಅಪಾಯಗಳನ್ನು ನಿವಾರಿಸಬೇಕಿದೆ. ವೈವಿಧ್ಯತೆಗಳಿಂದ ನಾವು ಏನನ್ನು ಕಂಡುಕೊಳ್ಳಲು ? ಇದು ಯಾವುದೇ ಧರ್ಮದ ವಿಚಾರಗಳು ಅಲ್ಲ, ಅದನ್ನು ಬಾಳೆಂಬ ತತ್ವಗಳೇ ಬಿಟ್ಟದ್ದಿಲ್ಲ.

ಉದ್ದಿಮೆಗಳು ನಮ್ಮೊಳಗೆ ಅಂತರ್ಗತಗೊಂಡಿರುವಾಗ ಅನನ್ಯತೆಯ ಜೊತೆಗಿನ ಒಂದು ಸಂಘರ್ಷ ಹಾಗೂ ನಮ್ಮೊಳಗಿನ ಕಲಾ ಭಾವದೊಂದಿಗೆ ಅದು ನಡೆಸುವ ಸಂಘರ್ಷವೂ ಹೌದು. ನಾನು ಈ ರಂಗ ಸಂದೇಶದಲ್ಲಿ ರಂಗಭೂಮಿ, ರಂಗ ಪಠ್ಯಗಳ ಬಗ್ಗೆ ಮಾತ್ರವೇ ಮಾತನಾಡುತ್ತಿಲ್ಲ. ಏಕೆಂದರೆ ನಾನೀಗಾಗಲೇ ಹೇಳಿದಂತೆ ಕಲೆ ಎಂಬ ರಂಗಭೂಮಿ ಸೇರಿದಂತೆ ಎಲ್ಲಾ ಉನ್ನತ ಅಂಶಗಳು ಒಳಗೊಂಡಿರುವ ಒಂದು ವಿಶೇಷ ಅನುಭೂತಿ ಮತ್ತು ಅದೊಂದು ಮತ್ತು ಅದೊಂದು ಅನನ್ಯ ಹಾಗೂ ನಿರ್ದಿಷ್ಟವಾದ ಅನುಭವವೇ ಆಗಿರುವುದರಿಂದ ಜೊತೆಗೆ ಸಾರ್ವತ್ರಿಕವಾಗಬಲ್ಲ ಒಳ್ಳೆಯತನವನ್ನು ಹೊಂದಿಸಬಹುದಾಗಿದೆ. ಕಲೆ ಎನ್ನುವುದು ವೈಯಕ್ತಿಕವಾದವುಗಳ ಜೊತೆಗೆ ಜಗತ್ತಿನ ಎಲ್ಲೆಡೆಯ ಜನರನ್ನು ಪರಸ್ಪರ ಒಟ್ಟು ಸೇರಿಸಬಲ್ಲ ಶಕ್ತಿಯಾಗಿದೆ.

ಅದು ತನ್ನ ಕಲಾತ್ಮಕ ಅಭಿವ್ಯಕ್ತಿ , ಅನನ್ಯತೆಯನ್ನು ನಿರಾಕರಿಸದೆ ಅನನ್ಯತೆಯನ್ನು ಸ್ಟುಟಪಡಿಸಿ ಅಸ್ಮಿತೆ ಮತ್ತು ಅಪರಿಚಿತೆಗಳು ಉತ್ಕೃಷ್ಟ ಸೃಷ್ಟಿಗೊಳಿಸುವಂತದ್ದಾಗಬೇಕು .

ಕೊನೆಯದಾಗಿ ನಾನು ಹೇಳುವುದಿಷ್ಟು. ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವಗಳಲ್ಲಿ ಇರುವಂತೆ .. ಯುದ್ಧ ಹಾಗೂ ಕಲೆ ಕೂಡ ವಿರೋಧ ಮುಖಗಳು. ಆದರೆ ಕಲೆಯ ಮೂಲಕ ಯಾರು ಕಾಯಕ ಮಾಡುತ್ತಾರೋ ಅವರು ಶಾಂತಿಯ ಸಾರ್ವತ್ರಿಕ ಪ್ರತಿಪಾದಕರಾಗಿ ನಿಲ್ಲುತ್ತಾರೆ ಎನ್ನುವುದು ಈ ಜಗತ್ತಿನ ಬಹುದೊಡ್ಡ ಹಾಗೂ ಸಾರ್ವತ್ರಿಕವಾದ ಸತ್ಯವಾಗಿದೆ.

ಮೂಲ: ಜಾನ್ ಫಾಸ್ಸೆ

ಕನ್ನಡ ಅನುವಾದ:
ಪ್ರಶಾಂತ ಅನಂತಾಡಿ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.