ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Team Udayavani, Mar 28, 2024, 4:27 PM IST
ಕೊಚ್ಚಿ: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ಅವರ ನಿರ್ದೇಶನದಲ್ಲಿ ಪೃಥ್ವಿರಾಜ್ ಸುಕುಮಾರನ್ ನಾಯಕರಾಗಿ ನಟಿಸಿರುವ “ಆಡುಜೀವಿತಂ’ʼ (ಗೋಟ್ ಲೈಫ್) ಸಿನಿಮಾ ಗುರುವಾರ (ಮಾ.28 ರಂದು) ವಿಶ್ವದೆಲ್ಲೆಡೆ ತೆರಕಂಡಿದೆ.
ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡು, ಹಲವು ವರ್ಷಗಳ ಕಾಲ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಕೊಂಡು ಶ್ರಮ ಹಾಕಿದ ಚಿತ್ರತಂಡ ಪ್ರೇಕ್ಷಕರ ಅಭಿಪ್ರಾಯಕ್ಕಾಗಿ ಕಾಯುತ್ತಿದೆ. ಮೊದಲ ದಿನವೇ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ.
ನೆಟ್ಟಿಗರು ಸಿನಿಮಾ ನೋಡಿ ಏನು ಹೇಳಿದ್ದಾರೆ. ಹೇಗಿದೆ ಸಿನಿಮಾಕ್ಕೆ ರೆಸ್ಪಾನ್ಸ್ ಎಂದು ನೋಡೋಣ ಬನ್ನಿ..
“ಆಡುಜೀವಿತಂ’ʼ ಸಿನಿಮಾ ನೋಡಿದೆ. ಸಬ್ ಟೈಟಲ್ ಇಲ್ಲದೆ ನಿರಾಶೆ ಆಯಿತು. ಆದರೆ ಸಿನಿಮಾ ನೋಡಿದ ಬಳಿಕ ಸಿನಿಮಾದ ಭಾಷೆಯೂ ಸಾರ್ವತ್ರಿಕವಾಗಿರುತ್ತದೆ ಎಂದನಿಸಿತು. ಪೃಥ್ವಿರಾಜ್ ಸರ್ ನೀವು ನಿಜಕ್ಕೂ ʼಗ್ರೇಟಿಸ್ಟ್ ಆಫ್ ಆಲ್ ಟೈಮ್ʼ ಈ ಸಿನಿಮಾ ನೀಡಿದ ನಿಮಗೆ ಹಾಗೂ ಚಿತ್ರತಂಡಕ್ಕೆ ತಲೆಬಾಗುತ್ತೇನೆ” ಎಂದು ಒಬ್ಬರು ಬರೆದುಕೊಂಡಿದ್ದಾರೆ.
ʼಆಡುಜೀವಿತಂʼ ಬ್ಲೆಸ್ಸಿ ಅವರ ಮತ್ತೊಂದು ಕ್ಲಾಸಿಕ್ ಸಿನಿಮಾ ಆಗಿದೆ. ಪೃಥ್ವಿರಾಜ್ ಅವರ ಅದ್ಭುತ ಅಭಿನಯ, ರೋಚಕ ದೃಶ್ಯಗಳು, ಅತ್ಯುತ್ತಮ ಸಂಗೀತ, ಬೆರಗುಗೊಳಿಸುವ ಧ್ವನಿ ವಿನ್ಯಾಸ ಒಟ್ಟಾರೆಯಾಗಿ ಇದೊಂದು ನೋಡಲೇಬೇಕಾದ ಥಿಯೇಟರ್ ಅನುಭವದ ಚಿತ್ರವಾಗಿದೆ. ಹ್ಯಾಟ್ಸ್ ಆಫ್ ಯೂ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
“ಈ ಸಿನಿಮಾ ನೋಡಿದ ಬಳಿಕ ನನ್ನಲ್ಲಿ ಮಾತುಗಳೇ ಉಳಿದಿಲ್ಲ. ಸುಮ್ಮನೇ ವೀಕ್ಷಿಸಿ. ಈ ಸಿನಿಮಾ ಯಾವ G.O.A.T ಗಿಂತ ಕಡಿಮೆಯೇನಲ್ಲ, ಬ್ಲೆಸ್ಸಿ, ಪೃಥ್ವಿ, ಗೋಕುಲ್, ರೆಹಮಾನ್, ರೆಸೂಲ್ ನಿಮಗೆ ಶರಣು ಎಂದು ಒಬ್ಬರು ಬರೆದುಕೊಂಡಿದ್ದಾರೆ.
“ಒಂದು ಗಮನಾರ್ಹ ಸಿನಿಮಾ ಅನುಭವ!! ತಾಂತ್ರಿಕ ಶ್ರೇಷ್ಠತೆಯನ್ನು ಪ್ರದರ್ಶಿಸುವ ಉನ್ನತ ಶ್ರೇಣಿಯ ಮಲಯಾಳಂ ಚಲನಚಿತ್ರಗಳಲ್ಲಿ ಈ ಸಿನಿಮಾ ಒಂದಾಗಿದೆ. ಮಧ್ಯಂತರದ ನಂತರ, ಮಾಲಿವುಡ್‌ನಲ್ಲಿ ಹೊಸ ಮಾನದಂಡವನ್ನು ಹೊಂದಿಸುವ ಎರಡು-ನಿಮಿಷದ ವಿಭಾಗವಿದೆ ಅದಕ್ಕಾಗಿ ಬ್ಲೆಸ್ಸಿ ಮತ್ತು ಪೃಥ್ವಿರಾಜ್ ಅವರಿಗೆ ಅಭಿನಂದನೆಗಳು” ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಒಂದು ಅಭಿನಯವು ಕಲ್ಪನೆಗಳನ್ನು ಮೀರಿ ಹೋದಾಗ, ಯಾರಾದರೂ ಕೇವಲ ನೋಟದಿಂದ ಮಾತ್ರವಲ್ಲದೆ ಅವರು ನಿರ್ವಹಿಸುವ ರೀತಿಯಿಂದಲೂ ಸವಾಲಿನ ಪಾತ್ರವಾಗಿ ರೂಪಾಂತರಗೊಳ್ಳುವುದನ್ನು ನೋಡಿದಾಗ, ನಟನೆಯು ಸಿನಿಮಾ ಮತ್ತು ಸುತ್ತಮುತ್ತಲಿನ ಎಲ್ಲವನ್ನೂ ಮೀರಿಸುತ್ತದೆ. ಆಡುಜೀವಿತಂ ಸುಂದರವಾಗಿದೆ. ಪೃಥ್ವಿರಾಜ್ ಸುಕುಮಾರನ್ ನೀವು G.O.A.T ಎಂದು ಮತ್ತೊಬ್ಬರು ಅಭಿಪ್ರಾಯವನ್ನು ಬರೆದುಕೊಂಡಿದ್ದಾರೆ.
“ಪೃಥ್ವಿರಾಜ್ ಅವರು ಅಭಿನಯ ಅತ್ಯದ್ಭುತ. ಅವರು ನಜೀಬ್ ನಜೀಬ್ ಮೊಹಮ್ಮದ್ ಆಗಿ ಜೀವಿಸಿದ್ದಾರೆ. ಜೀವಮಾನದ ಪಾತ್ರ. ಅವರು ಎಲ್ಲ ಪ್ರಶಸ್ತಿಗೂ ಅರ್ಹರು” ಎಂದು ನೆಟ್ಟಿಗರೊಬ್ಬರು ಕೊಂಡಾಡಿದ್ದಾರೆ.
ಅದ್ಭುತ ಸಿನಿಮಾ. ಹೈಪ್ ಕೊಟ್ಟದ್ದಕ್ಕೆ ಸಾರ್ಥಕವಾಯಿತು. ಪೃಥ್ವಿರಾಜ್ ಅವರ ಅಭಿನಯದ ಟಾಪ್ ಆಗಿದೆ. ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದಾಗಿದೆ ಎಂದು ಒಬ್ಬರು ಹೇಳಿದ್ದಾರೆ.
ಮಲಯಾಳಂನ ಜನಪ್ರಿಯ ‘ಆಡುಜೀವಿತಂʼಕಾದಂಬರಿ ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಈ ಕಾದಂಬರಿ ವಿದೇಶಿ ಭಾಷೆ ಸೇರಿದಂತೆ 12 ಭಾಷೆಗಳಿಗೆ ಅನುವಾದಗೊಂಡಿದೆ. ಇದನ್ನು ಹೆಸರಾಂತ ಬರಹಗಾರ ಬೆನ್ಯಾಮಿನ್ ಅವರು ಬರೆದಿದ್ದಾರೆ.
ʼಆಡು ಜೀವಿತಂʼ ನಜೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿಯ ಕಥೆಯಾಗಿದೆ. ಈ ಪಾತ್ರವನ್ನು ಪೃಥ್ವಿರಾಜ್ ಮಾಡಿದ್ದಾರೆ. 90ರ ದಶಕದಲ್ಲಿ ಭವಿಷ್ಯ ಹುಡುಕಿಕೊಂಡು ಸೌದಿ ಅರೇಬಿಯಾಗೆ ಹೋಗುವ ನಜೀಬ್ ಪಾಸ್‌ಪೋರ್ಟ್ ಇಲ್ಲದೆ ಎದುರಿಸಿದ ಹಿಂಸೆ, ಮರುಭೂಮಿ ಬಿಸಿಲಿನಲ್ಲಿ ಅನುಭವಿಸಿದ ಕಷ್ಟಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ.
ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬ್ಲೆಸ್ಸಿ ಥಾಮಸ್ ನಿರ್ದೇಶನ ಮಾಡಿದ್ದಾರೆ. ‘ವಿಷ್ಯುವಲ್ ರೊಮ್ಯಾನ್ಸ್ʼ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಎ.ಆರ್. ರೆಹಮಾನ್ ಮ್ಯೂಸಿಕ್ ನೀಡಿದ್ದಾರೆ.
ಪೃಥಿರಾಜ್ ಜೊತೆ ಅಮಲಾ ಪೌಲ್ , ಅರಬ್ ನಟರಾದ ತಲಿಬ್ ಅಲ್ ಬಲುಶಿ, ರಿಕ್ ಅಬಿ ನಟಿಸಿದ್ದು, ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್ ಕೂಡ ನಟಿಸಿದ್ದಾರೆ.
Sat down to watch #Aadujeevitham but was disappointed as there were no subtitles but through the course of the movie, the brilliance of the makers made me realise that their cinematic language was universal. @PrithviOfficial sir, you are the G.O.A.T 🐐
We bow down to you all 🙌🏼 pic.twitter.com/OhiYtCtAjH
— Avinash (@andrews_avinash) March 28, 2024
35/2024 #AaduJeevitham : is another Blessy CLASSIC we’ve been waiting for. Stellar performance by Raju, breathtaking visuals, excellent music, stunning sound design altogether makes this a must watch theatre experience film.
HatsOff to @DirectorBlessy & @PrithviOfficial 🔥🙏🏻 pic.twitter.com/wAcb7fHblL
— ALIM SHAN (@AlimShan_) March 28, 2024
A remarkable cinematic experience!! One of the top-tier Malayalam films, showcasing technical excellence.
Right after the intermission, there’s a two-minute segment, setting a new standard in Mollywood.,Kudos to Blessy & @PrithviOfficial for that! ❤🔥#Aadujeevitham (1/2) pic.twitter.com/Jn9SnWacGx
— K A L K I (@iamkalki_13) March 28, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Mangaluru: ವೆನ್ಲಾಕ್‌ನಲ್ಲಿ ದೊರೆಯಲಿದೆ ಕಿಮೋಥೆರಪಿ
Ullal: ತೊಕ್ಕೊಟ್ಟು ಜಂಕ್ಷನ್ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.